ಜೈರಾಮ್‌ ರಮೇಶ್ 
ದೇಶ

ಮಹಿಳಾ ಮೀಸಲಾತಿ ಮಸೂದೆ ಚುನಾವಣಾ ಜುಮ್ಲಾ, ಮಹಿಳೆಯರಿಗೆ ದ್ರೋಹ: ಕಾಂಗ್ರೆಸ್

ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ "ಚುನಾವಣಾ ಜುಮ್ಲಾ" ಎಂದು ಟೀಕಿಸಿದ ಕಾಂಗ್ರೆಸ್, "ಮಹಿಳೆಯರ ಭರವಸೆಗೆ ದೊಡ್ಡ ದ್ರೋಹ" ಮಾಡಲಾಗಿದೆ ಎಂದು ಆರೋಪಿಸಿದೆ.

ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ "ಚುನಾವಣಾ ಜುಮ್ಲಾ" ಎಂದು ಟೀಕಿಸಿದ ಕಾಂಗ್ರೆಸ್, "ಮಹಿಳೆಯರ ಭರವಸೆಗೆ ದೊಡ್ಡ ದ್ರೋಹ" ಮಾಡಲಾಗಿದೆ ಎಂದು ಆರೋಪಿಸಿದೆ.

ಜನಗಣತಿ ಮತ್ತು ಡಿಲಿಮಿಟೇಶನ್ ನಡೆಸಿದ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿರುವುದು ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

2024ರ ಚುನಾವಣೆಗೂ ಮುನ್ನವೇ ಜನಗಣತಿ ಮತ್ತು ಡಿಲಿಮಿಟೇಶನ್‌ ನಡೆಯಲಿದೆಯೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ನರೇಂದ್ರ ಮೋದಿ ಸರ್ಕಾರ 2021ರ ನಂತರ ದಶಕ ಕಳೆದರೂ ಜನಗಣತಿಯನ್ನು ಇನ್ನೂ ನಡೆಸಿಲ್ಲ ಎಂದು ಹೇಳಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿದ ಜೈರಾಮ್ ರಮೇಶ್, "ಚುನಾವಣಾ ಜುಮ್ಲಾಗಳಲ್ಲಿ, ಇದು ಎಲ್ಲಕ್ಕಿಂತ ದೊಡ್ಡದು ಜುಮ್ಲಾ! ಕೋಟ್ಯಂತರ ಭಾರತೀಯ ಮಹಿಳೆಯರು ಮತ್ತು ಯುವತಿಯರ ಭರವಸೆಗಳಿಗೆ ದ್ರೋಹ" ಎಸಿಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

"ನಾವು ಮೊದಲೇ ಹೇಳಿದಂತೆ, ಮೋದಿ ಸರ್ಕಾರವು 2021 ರ ನಂತರ ದಶಕ ಕಳೆದರೂ ಜನಗಣತಿಯನ್ನು ನಡೆಸಿಲ್ಲ. G20 ನಲ್ಲಿ ದಶಕ ಕಳೆದರೂ ಜನಗಣತಿ ಕೈಗೊಳ್ಳಲು ವಿಫಲವಾದ ಏಕೈಕ ದೇಶ ಭಾರತ. ಈಗ ಜನಗಣತಿ ಅನುಸರಿಸಿ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಜನಗಣತಿ ಯಾವಾಗ ನಡೆಯುತ್ತದೆ?" ರಮೇಶ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೆಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿದೆ: 7.8ರಷ್ಟು GDP ಬೆಳವಣಿಗೆಯ ಟೀಕಾಕಾರರನ್ನು ಖಂಡಿಸಿದ ಪ್ರಧಾನಿ ಮೋದಿ!

ಏಷ್ಯಾಕಪ್ 2026: ಪಾಕಿಸ್ತಾನ ನೀಡಿದ ಅಲ್ಪಮೊತ್ತದ ರನ್ ಬೆನ್ನಟ್ಟಿ ಗೆದ್ದ ಭಾರತ

ತುಂಗಭದ್ರಾ ಜಲಾಶಯದ ಹೂಳು ತೆರವು ಸಾಧ್ಯವಿಲ್ಲದಿದ್ದರೆ ಸಮಾನಾಂತರ ಜಲಾಶಯ ನಿರ್ಮಿಸಿ: ರಾಜ್ಯ ಸರ್ಕಾರಕ್ಕೆ ಬಿ.ವೈ. ವಿಜಯೇಂದ್ರ ಆಗ್ರಹ!

ಏಷ್ಯಾಕಪ್ 2026: 3 ಡಕೌಟ್, ಪಾಕಿಸ್ತಾನವನ್ನು 55 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಕಳಪೆ ದಾಖಲೆ ಸೃಷ್ಟಿ!

'ದುಡ್ಡಿನ ಧಿಮಾಕು.. ಕಾರಿಗೇ ಬೆಂಕಿ ಹಾಕಿ ಬಾ ಅಂತ ಹೇಳಿದ್ದೆ': ನಟ 'ಯಶ್' ತಾಯಿ ಪುಷ್ಪ ಅರುಣ್ ಕುಮಾರ್!