ಕೆನಡಾ (ಸಾಂಕೇತಿಕ ಚಿತ್ರ) 
ದೇಶ

ಕೆನಡಾದೊಂದಿಗಿನ ಮಿಲಿಟರಿ ಸಂಬಂಧಗಳ ಮೇಲೆ ಪರಿಣಾಮ ಇಲ್ಲ: ಸೇನೆ

ಭಾರತ- ಕೆನಡಾದ ನಡುವಿನ ಸಂಬಂಧಗಳಲ್ಲಿನ ಉದ್ವಿಗ್ನತೆಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಹಾಗೂ ಕೆನಡಾದೊಂದಿಗಿನ ಭಾರತದ ರಾಜತಾಂತ್ರಿಕ ವಿಧಾನ, ಸೇನಾ ದಾಖಲೆಗಳು ಮುಂದುವರೆಯಲಿವೆ ಎಂದು ಭಾರತೀಯ ಸೇನೆ ಹೇಳಿದೆ.

ನವದೆಹಲಿ: ಭಾರತ- ಕೆನಡಾದ ನಡುವಿನ ಸಂಬಂಧಗಳಲ್ಲಿನ ಉದ್ವಿಗ್ನತೆಗಳು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಹಾಗೂ ಕೆನಡಾದೊಂದಿಗಿನ ಭಾರತದ ರಾಜತಾಂತ್ರಿಕ ವಿಧಾನ, ಸೇನಾ ದಾಖಲೆಗಳು ಮುಂದುವರೆಯಲಿವೆ ಎಂದು ಭಾರತೀಯ ಸೇನೆ ಹೇಳಿದೆ.
 
ಇಂಡೋ ಪೆಸಿಫಿಕ್ ಸೇನಾ ಮುಖ್ಯಸ್ಥರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಭಾರತೀಯ ಸೇನೆಯ ಹೆಚ್ಚುವರಿ ನಿರ್ದೇಶಕ (ಕಾರ್ಯತಂತ್ರದ ಯೋಜನೆ ವಿಭಾಗ) ಮೇಜರ್ ಜನರಲ್ ಅಭಿನಯ ರೈ, ಕೆನಡಾದಲ್ಲಿನ ಸಿಡಿಎಸ್ ಜನರಲ್ ವೇಯ್ನ್ ಸೆ.26-27 ರಂದು ದೆಹಲಿಯ ಕಂಟೋನ್ಮೆಂಟ್ ಮನೆಕ್ಷಾ ಕೇಂದ್ರದಲ್ಲಿ ನಡೆಯಲಿರುವ ಇಂಡೋ-ಪೆಸಿಫಿಕ್ ಸೇನೆಗಳ ಮುಖ್ಯಸ್ಥರ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. 

ಈ ಪ್ರದೇಶದಲ್ಲಿ ಬಹುಪಕ್ಷೀಯ ಭದ್ರತಾ ಪಾಲುದಾರಿಕೆಗಳನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಸಮ್ಮೇಳನ ಭಿನ್ನಾಭಿಪ್ರಾಯಗಳನ್ನು ಹೊರಹಾಕಲು ಮತ್ತು ಮುಕ್ತ ಇಂಡೋ-ಪೆಸಿಫಿಕ್‌ಗಾಗಿ ವೃತ್ತಿಪರ ಸೇನೆಗಳ ನಡುವೆ ನಂಬಿಕೆ ಮತ್ತು ಉತ್ತಮ ಸಂವಹನವನ್ನು ನಿರ್ಮಿಸಲು ನಿಯಮಿತವಾಗಿ ನಡೆಯುತ್ತದೆ.

ಯುಎಸ್ ಸೈನ್ಯದ ಮುಖ್ಯಸ್ಥ ಜನರಲ್ ಜೇಮ್ಸ್ ಸಿ ಮೆಕ್‌ಕಾನ್‌ವಿಲ್ಲೆ ತಮ್ಮ ನಿಯೋಗದೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ  ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಭಾರತದಲ್ಲಿ ಭಯೋತ್ಪಾದಕನೆಂದು ಗುರುತಿಸುವ ಹರ್ದೀಪ್ ಸಿಂಗ್ ನಿಜ್ಜರ್ ಅವರ ಮೇಲಿನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ ಆರೋಪಿಸಿದ ನಂತರ ಇಂಡೋ-ಕೆನಡಾದ ಸಂಬಂಧಗಳು ಹದಗೆಟ್ಟಿದ್ದವು.

ಈ ಆರೋಪಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿರಸ್ಕರಿಸಿದ್ದು, ಅದು ಅವುಗಳನ್ನು 'ಅಸಂಬದ್ಧ ಮತ್ತು 'ಪ್ರಚೋದಿತ' ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

BMC ಚುನಾವಣಾ ಫಲಿತಾಂಶ: ಬಿಜೆಪಿ ಮೈತ್ರಿಕೂಟಕ್ಕೆ 128 ಸ್ಥಾನಗಳಲ್ಲಿ ಮುನ್ನಡೆ; ಮಹಾಯುತಿಯ ಹಿಡಿತಕ್ಕೆ ಮುಂಬೈ, ಪುಣೆ, ನಾಗ್ಪುರ

ಲಾತೂರ್‌ನಲ್ಲಿ ಕಾಂಗ್ರೆಸ್ ಗೆಲುವು; ವಿಲಾಸ್‌ರಾವ್ ದೇಶಮುಖ್ ನೆನಪು ಅಳಿಸುತ್ತೇವೆ ಎಂದಿದ್ದ ಬಿಜೆಪಿಗೆ ಮುಖಭಂಗ

ಕನಕಪುರ ಏಕೆ ಗಬ್ಬೆದ್ದು ನಾರುತ್ತಿದೆ? ತ್ಯಾಜ್ಯ ವಿಲೇವಾರಿಯಾಕಿಲ್ಲ: ಉಪ ಲೋಕಾಯುಕ್ತರ ಮಹತ್ವದ ಸೂಚನೆ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡಿದರೆ ವಲಸಿಗರಿಗೆ ಹಿಂಸೆ: ಮಮತಾ ಬ್ಯಾನರ್ಜಿ

BMC Election: ಸ್ವತಂತ್ರವಾಗಿ ಸ್ಪರ್ಧಿಸಿದ್ದ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಪಂಗಾರ್ಕರ್ಗೆ ಪ್ರಚಂಡ ಗೆಲುವು!

SCROLL FOR NEXT