ಸಾಂದರ್ಭಿಕ ಚಿತ್ರ 
ದೇಶ

ಮುಂದಿನ ವರ್ಷ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್: ಅಕ್ಟೋಬರ್ 10ರಿಂದ ಹಣಕಾಸು ಸಚಿವಾಲಯ ಬಜೆಟ್ ಪೂರ್ವ ಸಭೆ

ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಬರುವ ವರ್ಷ ಫೆಬ್ರವರಿಯಲ್ಲಿ ಮಂಡಿಸುವ ಮಧ್ಯಂತರ ಕೇಂದ್ರ ಬಜೆಟ್ ಎನ್ ಡಿಎ ಸರ್ಕಾರಕ್ಕೆ ಮಹತ್ವದ್ದಾಗಿದೆ. 

ನವದೆಹಲಿ: ಮುಂದಿನ ವರ್ಷ ಏಪ್ರಿಲ್ -ಮೇ ತಿಂಗಳಲ್ಲಿ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಬರುವ ವರ್ಷ ಫೆಬ್ರವರಿಯಲ್ಲಿ ಮಂಡಿಸುವ ಮಧ್ಯಂತರ ಕೇಂದ್ರ ಬಜೆಟ್ ಎನ್ ಡಿಎ ಸರ್ಕಾರಕ್ಕೆ ಮಹತ್ವದ್ದಾಗಿದೆ. 

ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು 2024-25ರ ವಾರ್ಷಿಕ ಬಜೆಟ್‌ನ ತಯಾರಿಗೆ ಬರುವ ತಿಂಗಳು ಅಕ್ಟೋಬರ್ 10 ರಿಂದ ಅವಧಿ ಪೂರ್ವ-ಬಜೆಟ್ ಸಭೆಗಳನ್ನು ಪ್ರಾರಂಭಿಸುತ್ತದೆ.

ಅನುದಾನಗಳು/ವಿನಿಯೋಗಗಳಿಗೆ ಸಂಬಂಧಿಸಿದಂತೆ RE (ಪರಿಷ್ಕೃತ ಅಂದಾಜು) 2023-24 ಮತ್ತು BE (ಬಜೆಟ್ ಅಂದಾಜು) 2024-25 ನ್ನು ಅಂತಿಮಗೊಳಿಸುವ ಪೂರ್ವ-ಬಜೆಟ್ ಚರ್ಚೆಗಳು ಅಕ್ಟೋಬರ್ 10ರಿಂದ ಹಣಕಾಸು ಕಾರ್ಯದರ್ಶಿ ಮತ್ತು ಕಾರ್ಯದರ್ಶಿ (ವೆಚ್ಚ) ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗುತ್ತದೆ ಎಂದು ಹಣಕಾಸು ಸಚಿವಾಲಯದ ಬಜೆಟ್ ವಿಭಾಗವು ಪ್ರಸಾರ ಮಾಡಿದ ಸಭೆಯ ಸೂಚನೆ ತಿಳಿಸಿದೆ.

ನಿನ್ನೆ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ವಿತರಿಸಲಾದ ಸೂಚನೆಯು ಅವರೊಂದಿಗೆ ಸಭೆಗಳ ವೇಳಾಪಟ್ಟಿಯನ್ನು ಹೊಂದಿದೆ. ಬಜೆಟ್ ಪೂರ್ವ ಸಭೆಗಳ ವೇಳಾಪಟ್ಟಿಯನ್ನು ವಿವಿಧ ಅಗತ್ಯತೆಗಳನ್ನು ಗಣನೆಗೆ ತೆಗೆದುಕೊಂಡು ಸಿದ್ಧಪಡಿಸಲಾಗಿದೆ. ಸಾಕಷ್ಟು ಮುಂಚಿತವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಅದು ಹೇಳಿದೆ.

ಆದ್ದರಿಂದ, ಅಗತ್ಯವಿರುವ ವಿವರಗಳನ್ನು ಅಕ್ಟೋಬರ್ 5, 2023 ರೊಳಗೆ ಸಲ್ಲಿಸಬೇಕು ಎಂದು ಸಚಿವಾಲಯಗಳು ಮತ್ತು ಇಲಾಖೆಗಳು ನಿರ್ಧರಿಸಬೇಕು. ಅಕ್ಟೋಬರ್ 10 ರಂದು ಪ್ರಾರಂಭವಾಗುವ ಬಜೆಟ್ ಪೂರ್ವ ಸಭೆಯು ವೇಳಾಪಟ್ಟಿಯಂತೆ ನವೆಂಬರ್ 14 ರವರೆಗೆ ನಡೆಯಲಿದೆ.

ಬಜೆಟ್ ಪೂರ್ವ ಸಭೆಗಳನ್ನು ಪೂರ್ಣಗೊಳಿಸಿದ ನಂತರ 2024-25ರ ಬಜೆಟ್ ಅಂದಾಜುಗಳನ್ನು ತಾತ್ಕಾಲಿಕವಾಗಿ ಅಂತಿಮಗೊಳಿಸಲಾಗುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿರುವುದರಿಂದ ಇದು ಮಧ್ಯಂತರ ಬಜೆಟ್ ಆಗಿರುತ್ತದೆ.

ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾದ ನಂತರ ಆರ್ಥಿಕ ವರ್ಷ 2025ರ ಸಂಪೂರ್ಣ ಬಜೆಟ್ ನ್ನು ಮಂಡಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT