ದೇಶ

ದಸರಾದಲ್ಲಿ ಸನಾತನ ವಿರೋಧಿಗಳ ಪ್ರತಿಕೃತಿ ದಹನ

Srinivas Rao BV

ನವದೆಹಲಿ: ದೆಹಲಿಯಲ್ಲಿನ ಕೆಲವು ರಾಮಲೀಲಾ ಸಮಿತಿಗಳು ಈ ಬಾರಿಯ ದಸರಾದಲ್ಲಿ ಸನಾತನ ವಿರೋಧಿಗಳ ಪ್ರತಿಕೃತಿಗಳನ್ನು ದಹನ ಮಾಡಲು ನಿರ್ಧರಿಸಿವೆ.

ಸನಾತನ ಧರ್ಮದ ವಿರೋಧಿಗಳನ್ನು ರಾವಣ, ಕುಂಭಕರಣ, ಮೇಘನಾದನ ಸಾಲಿಗೆ ಸೇರಿಸಿ ಅವರ ಪ್ರತಿಕೃತಿಗಳನ್ನು ದಹನ ಮಾಡಲು ನಿರ್ಧರಿಸಲಾಗಿದೆ.

ದೆಹಲಿ ಭಾರತೀಯ ಜನತಾ ಪಕ್ಷದ ನಾಯಕರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವ ರಾಜಕಾರಣಿಗಳ ಪ್ರತಿಕೃತಿಗಳನ್ನು ಸುಡುವಂತೆ ಒತ್ತಾಯಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಸಮಿತಿಗಳ ಪದಾಧಿಕಾರಿಗಳು ಈ ಹಿಂದೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ಮಾದಕ ವ್ಯಸನವನ್ನು ಬಿಂಬಿಸುವ ಪ್ರತಿಕೃತಿಗಳನ್ನು ಸುಟ್ಟು ಹಾಕಲಾಗಿದೆ ಹಾಗಾಗಿ ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ಸೇರಿದಂತೆ ಹಲವು ರಾಜಕಾರಣಿಗಳು ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆ ಗುರಿಯಾಗಿತ್ತು.

ಶ್ರೀ ಧಾರ್ಮಿಕ ಲೀಲಾ ಸಮಿತಿಯ ಸಂಚಾಲಕ ರವಿ ಜೈನ್ ಮಾತನಾಡಿ, ದಸರಾ ಸಂದರ್ಭದಲ್ಲಿ ಸಮಾಜಘಾತುಕರ ಪ್ರತಿಕೃತಿ ದಹನ ಮಾಡುವುದು ನಮ್ಮ ಸಂಪ್ರದಾಯ, ರಾಮಲೀಲಾ ಸನಾತನ ಧರ್ಮದ ಅಂಗವಾಗಿರುವುದರಿಂದ ಈ ವರ್ಷ ಅದನ್ನು ವಿರೋಧಿಸುವವರ ಪ್ರತಿಕೃತಿ ದಹಿಸುತ್ತೇವೆ ಎಂದು ತಿಳಿಸಿದ್ದಾರೆ.
 

SCROLL FOR NEXT