ದೇಶ

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ಸ್ಫೋಟ; ಎಂಟು ಕಾರ್ಮಿಕರಿಗೆ ಗಾಯ

Ramyashree GN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಪೊಲೀಸರು ಸ್ಫೋಟದ ಹಿಂದೆ ಯಾವುದೇ ಭಯೋತ್ಪಾದಕರ ಕೈವಾಡವಿರುವುದನ್ನು ತಳ್ಳಿಹಾಕಿದ್ದಾರೆ. ಕಾಂಕ್ರೀಟ್ ಕಂಪನ ಯಂತ್ರ, ಪೋರ್ಟಬಲ್ ಜನರೇಟರ್ ಮತ್ತು ಎಣ್ಣೆಯ ಕ್ಯಾನ್ ಅನ್ನು ಸಾಗಿಸುತ್ತಿದ್ದ 'ಲೋಡ್ ಕ್ಯಾರಿಯರ್' ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದಿದ್ದಾರೆ.

'ಅನಂತನಾಗ್‌ನ ಲಾರ್ಕಿಪೋರಾದಲ್ಲಿ ಕಾರ್ಮಿಕರೊಂದಿಗೆ ಸಾಗಿಸುತ್ತಿದ್ದ ಸಿಮೆಂಟ್ ಮಿಶ್ರಣ ಮಾಡುವ ಕಂಪನ ಯಂತ್ರ, ಪೋರ್ಟಬಲ್ ಜನರೇಟರ್ ಮತ್ತು ಎಣ್ಣೆಯಿದ್ದ ಟಿನ್ ಕ್ಯಾನ್‌ ಇದ್ದ ಲೋಡ್ ಕ್ಯಾರಿಯರ್‌ ವಾಹನದಲ್ಲಿ ಸ್ಫೋಟ ಸಂಭವಿಸಿದೆ' ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಎಂಟು ಕಾರ್ಮಿಕರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿ ಸ್ಥಿರವಾಗಿದ್ದು, ಘಟನೆಯ ಹಿಂದೆ ಯಾವುದೇ ಭಯೋತ್ಪಾದಕರ ಕೈವಾಡವಿಲ್ಲ. ಈ ಸಂಬಂಧ ಹೆಚ್ಚಿನ ತನಿಖೆ ಪ್ರಾರಂಭವಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

SCROLL FOR NEXT