ದೇಶ

ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ!

Srinivas Rao BV

ನವದೆಹಲಿ: ಆರ್ಥಿಕ ಮುಗ್ಗಟ್ಟು,  ಅಧಿಕಾರಿಗಳ ನಡುವೆ ಕಲಹದ ಪರಿಣಾಮ  ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ಮುಚ್ಚಲ್ಪಟ್ಟಿದೆ. 

ಈ ಪೈಕಿ ಕೆಲವು ರಾಜತಾಂತ್ರಿಕ ಅಧಿಕಾರಿಗಳು ಬೇರೆ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಭಾರತದಲ್ಲಿರುವ ಅಫ್ಘಾನ್ ರಾಯಭಾರ ಕಚೇರಿ ಭಾರತ ಸರ್ಕಾರದ ಸಹಾಯವಿಲ್ಲದೇ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಈಗಿನ ಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ, ನಿರಾಶಾದಾಯಕವಾಗಿ ರಾಯಭಾರ ಕಚೇರಿಯು ಈ ಬೆಂಬಲವನ್ನು ಪಡೆಯದ ಸ್ಥಿತಿಯನ್ನು ಎದುರಿಸುತ್ತಿದೆ ಎಂಬುದು ತಿಳಿದಿದೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಮ್ಮ ರಾಯಭಾರ ಕಚೇರಿ ಹಾಗೂ ಅದರ ಸಿಬ್ಬಂದಿಗಳ ಹಿತಾಸಕ್ತಿಯ ದೃಷ್ಟಿಯಿಂದ  ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿರುವ ರಾಯಭಾರ ಕಚೇರಿಯನ್ನು ಬಂದ್ ಮಾಡಲಿದ್ದೇವೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ರಾಯಭಾರಿ, ಫರೀದ್ ಮಮುಂಡ್‌ಜಾಯ್ ಅವರು ಹಲವಾರು ತಿಂಗಳುಗಳಿಂದ ಲಂಡನ್‌ನಲ್ಲಿದ್ದರೆ, ಅನೇಕ ಇತರ ರಾಜತಾಂತ್ರಿಕರು ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ.

SCROLL FOR NEXT