ಸಾಂದರ್ಭಿಕ ಚಿತ್ರ 
ದೇಶ

ಧನ್‌ಬಾದ್‌ ಬಿಜೆಪಿ ಅಭ್ಯರ್ಥಿ ವಿರುದ್ಧ 49 ಕ್ರಿಮಿನಲ್ ಕೇಸ್; ಉಮೇದುವಾರಿಕೆ ಬದಲಿಸುವಂತೆ ವ್ಯಾಪಾರಿಗಳ ಆಗ್ರಹ

ಧನ್‌ಬಾದ್‌ನ ಬಿಜೆಪಿ ಅಭ್ಯರ್ಥಿ ಧುಲೋ ಮಹತೋ ಅವರ ವಿರುದ್ಧ ಬರೋಬ್ಬರಿ 49 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ರಾಂಚಿ: ಧನ್‌ಬಾದ್‌ನ ಬಿಜೆಪಿ ಅಭ್ಯರ್ಥಿ ಧುಲೋ ಮಹತೋ ಅವರ ವಿರುದ್ಧ ಬರೋಬ್ಬರಿ 49 ಪ್ರಕರಣಗಳು ದಾಖಲಾಗಿದ್ದು, ಅವರ ಉಮೇದುವಾರಿಕೆಯನ್ನು ಮರುಪರಿಶೀಲಿಸುವಂತೆ ಕೋರಿ ಧನಬಾದ್‌ನ ವ್ಯಾಪಾರಿಗಳು ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಪತ್ರ ಬರೆದಿದ್ದಾರೆ.

ಮಹತೋ ಅವರ ವಿರುದ್ಧ 49 ಕ್ರಿಮಿನಲ್ ಪ್ರಕರಣಗಳಿವೆ ಮತ್ತು ಧನ್ಬಾದ್ ಪ್ರದೇಶದಲ್ಲಿ ಕಲ್ಲಿದ್ದಲು ಕಳ್ಳಸಾಗಣೆ, ಸುಲಿಗೆ ಮತ್ತು ಇತರ ಅಪರಾಧಗಳಿಂದ ಕುಖ್ಯಾತಿ ಪಡೆದಿದ್ದಾರೆ. ಅಲ್ಲದೆ ನಾಲ್ಕು ಪ್ರಕರಣಗಳಲ್ಲಿ ಅವರಿಗೆ ಶಿಕ್ಷೆಯೂ ಆಗಿದೆ.

ವ್ಯಾಪಾರಿಗಳು ಪತ್ರದ ಪ್ರತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ಕಾರ್ಯಾಲಯ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೂ ಕಳುಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಧುಲೋ ಮಹ್ತೋ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಧನ್‌ಬಾದ್‌ನ ವ್ಯಾಪಾರಿಗಳ ಪರವಾಗಿ, ಧನ್‌ಬಾದ್ ಜಿಲ್ಲಾ ಮಾರ್ವಾಡಿ ಸಮ್ಮೇಳನದ ಅಧ್ಯಕ್ಷ ಕೃಷ್ಣ ಅಗರವಾಲ್ ಅವರು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಸಿಎಂ ಬಾಬುಲಾಲ್ ಮರಾಂಡಿ ಅವರಿಗೆ ಪತ್ರ ಬರೆದಿದ್ದಾರೆ. ಧನ್‌ಬಾದ್‌ನಿಂದ ಸ್ಪರ್ಧಿಸಲು ಧುಲೋ ಮಹತೋ ಅವರ ಹೆಸರನ್ನು ಘೋಷಿಸಿದ ನಂತರ ಈ ನಿರ್ಧಾರ ವ್ಯಾಪಾರಿ ಸಮುದಾಯವನ್ನು ಭಯಭೀತಗೊಳಿಸಿದೆ ಎಂದು ಆರೋಪಿಸಿದ್ದಾರೆ.

"ಪಕ್ಷದ ಹಿರಿಯ ನಾಯಕರಿಗೆ ನಾನು ಪತ್ರ ಬರೆದಿದ್ದೇನೆ, ಪಕ್ಷವು ತೆಗೆದುಕೊಂಡ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದೇನೆ, ಇದು ಉದ್ಯಮಿ ಸಮುದಾಯವನ್ನು ಭಯಭೀತಗೊಳಿಸಿದೆ" ಎಂದು ಕೃಷ್ಣ ಅಗರವಾಲ್ ಹೇಳಿದ್ದಾರೆ.

ಕಲ್ಲಿದ್ದಲು ಮಾಫಿಯಾ

ಅಭ್ಯರ್ಥಿ ಧುಲೋ ಮಹ್ತೋ ಅವರ ವಿರುದ್ಧ 49 ಕ್ರಿಮಿನಲ್ ಪ್ರಕರಣಗಳಿವೆ ಮತ್ತು ಧನ್ಬಾದ್ನಲ್ಲಿ ಕಲ್ಲಿದ್ದಲು ಕಳ್ಳಸಾಗಣೆ, ಸುಲಿಗೆ ಮತ್ತು ಇತರ ಅಪರಾಧಗಳಿಗೆ ಕುಖ್ಯಾತರಾಗಿದ್ದಾರೆ. ಮಹತೋ ವಿರುದ್ಧ ಇನ್ನೂ ಮೂರು ಡಜನ್‌ಗೂ ಹೆಚ್ಚು ಭೂಕಬಳಿಕೆ, ಸುಲಿಗೆ, ಕಳ್ಳಸಾಗಾಣಿಕೆ ಪ್ರಕರಣಗಳು ಬಾಕಿ ಇವೆ ಎಂದು ವ್ಯಾಪಾರಿ ಸಮುದಾಯ ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT