ರಾಜನಾಥ್ ಸಿಂಗ್ 
ದೇಶ

ಇದೇ ಮೊದಲ ಬಾರಿಗೆ 20,000 ಕೋಟಿ ರೂ ದಾಟಿದ ಭಾರತದ ರಕ್ಷಣಾ ರಫ್ತು ಮೌಲ್ಯ

ಭಾರತದ ರಕ್ಷಣಾ ರಫ್ತುಗಳ ಮೌಲ್ಯ ಇದೇ ಮೊದಲ ಬಾರಿಗೆ 20,000 ಕೋಟಿ ರೂಪಾಯಿಗಳನ್ನು ದಾಟಿದೆ. 2023-24 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂಪಾಯಿ ತಲುಪಿದೆ.

ನವದೆಹಲಿ: ಭಾರತದ ರಕ್ಷಣಾ ರಫ್ತುಗಳ ಮೌಲ್ಯ ಇದೇ ಮೊದಲ ಬಾರಿಗೆ 20,000 ಕೋಟಿ ರೂಪಾಯಿಗಳನ್ನು ದಾಟಿದೆ. 2023-24 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂಪಾಯಿ ತಲುಪಿದೆ.

ಈ ವರ್ಷ ರಕ್ಷಣಾ ರಫ್ತುದಾರರಿಗೆ ನೀಡಲಾದ ರಫ್ತು ದೃಢೀಕರಣ ಸಂಖ್ಯೆಯೂ ಹೆಚ್ಚಳವನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ರಕ್ಷಣಾ ರಫ್ತು ಈ ವರ್ಷ ಶೇ.32.5 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ರಕ್ಷಣಾ ರಫ್ತು ಮೌಲ್ಯ 15,920 ಕೋಟಿ ರೂಪಾಯಿಗಳಷ್ಟಿತ್ತು.

FY 2013-14 ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

ಖಾಸಗಿ ವಲಯ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಪಿಎಸ್‌ಯು) ಸೇರಿದಂತೆ ರಕ್ಷಣಾ ಉದ್ಯಮದ ಪ್ರಯತ್ನಗಳು ಈ ಸಾಧನೆಗೆ ಕಾರಣವೆಂದು ರಕ್ಷಣಾ ಸಚಿವಾಲಯ ಹೇಳಿದೆ. "ಖಾಸಗಿ ವಲಯ ಮತ್ತು DPSU ಗಳು ಕ್ರಮವಾಗಿ 60% ಮತ್ತು 40% ರಷ್ಟು ಕೊಡುಗೆ ನೀಡಿವೆ, ರಕ್ಷಣಾ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್