ಕೇಜ್ರಿವಾಲ್, ಅತಿಶಿ
ಕೇಜ್ರಿವಾಲ್, ಅತಿಶಿ 
ದೇಶ

ED ವಿಚಾರಣೆ ವೇಳೆ ಅತಿಶಿ, ಸೌರಭ್ ಭಾರದ್ವಾಜ್ ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್!

Nagaraja AB

ನವದೆಹಲಿ: ಎಎಪಿಯ ಮಾಜಿ ಸಂವಹನ ಉಸ್ತುವಾರಿ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ವಿಜಯ್ ನಾಯರ್ ಅವರೊಂದಿಗೆ ಸೀಮಿತ ಸಂವಹನ ನಡೆಸಿದ್ದು, ಅವರು ಅತಿಶಿ ಮರ್ಲೆನಾ ಹಾಗೂ ಸೌರಭ್ ಭಾರದ್ವಾಜ್ ಅವರಿಗೆ ವರದಿ ಸಲ್ಲಿಸುತ್ತಿದ್ದರು. ನನಗೆ ಅಲ್ಲ ಎಂದು ಹೇಳಿರುವುದಾಗಿ ಇಡಿ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದೆ. ಕೇಜ್ರಿವಾಲ್ ಅವರ ಹೇಳಿಕೆಯು ತಪ್ಪಿಸಿಕೊಳ್ಳುವ ಮತ್ತು ತಪ್ಪುದಾರಿಗೆಳೆಯುವ ಉತ್ತರಗಳಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದೆ.

ಕ್ಯಾಬಿನೆಟ್ ಸಚಿವರ ಬಂಗಲೆಯಲ್ಲಿ ಉಳಿದುಕೊಂಡು ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗಿ ವಿಜಯ್ ನಾಯರ್ ಬಹಿರಂಗಪಡಿಸಿದ್ದರು. ಕ್ಯಾಂಪ್ ಆಫೀಸ್ ನಲ್ಲಿ ಕೆಲಸ ಮಾಡುವವರು ಇತರ ಎಎಪಿ ನಾಯಕರಿಗೆ ಏಕೆ ವರದಿ ಸಲ್ಲಿಸಬೇಕು, ಅದೇನಿದ್ದರೂ ದೆಹಲಿ ಸಿಎಂ ಕೆಲಸಕ್ಕಾಗಿಯೇ ಹೊರತು ಪಕ್ಷಕ್ಕಾಗಿ ಅಲ್ಲ ಎಂದು ಇಡಿಯ ಕಸ್ಟಡಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ಯಾರು ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಸಿಎಂ ಕೇಜ್ರಿವಾಲ್ ಈ ಪ್ರಶ್ನೆಯಿಂದ ನುಣುಚಿಕೊಂಡರು ಎಂದು ಕೇಂದ್ರಿಯಾ ತನಿಖಾ ಸಂಸ್ಥೆ ಹೇಳಿದೆ. ವಿಜಯ್ ನಾಯರ್ ಎಎಪಿಯ ಸಣ್ಣ ಸ್ವಯಂಸೇವಕರಲ್ಲ. ಅದರ ಮಾಧ್ಯಮ ಮತ್ತು ಸಂವಹನ ಮುಖ್ಯಸ್ಥರಾಗಿದ್ದರು. ಅಬಕಾರಿ ನೀತಿ ಪ್ರಕರಣದಲ್ಲಿ ವಿಜಯ್ ನಾಯರ್ ಭಾಗಿಯಾಗಿರುವುದನ್ನು ತೋರಿಸುವ ವಿಭಿನ್ನ ವಾಟ್ಸಾಪ್ ಚಾಟ್‌ಗಳನ್ನು ಇಡಿ ಕಸ್ಟಡಿಯಲ್ಲಿ ಕೇಜ್ರಿವಾಲ್‌ಗೆ ಸಹ ತೋರಿಸಲಾಯಿತು ಎಂದು ಇಡಿ ಹೇಳಿದೆ.

ಕೇಜ್ರಿವಾಲ್ ಅವರಿಗೆ ತೋರಿಸಿರುವ ಡಿಜಿಟಲ್ ಸಾಕ್ಷ್ಯದ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಮೂಲಕ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಅವರು ತನ್ನ ಡಿಜಿಟಲ್ ಸಾಧನಗಳ ಪಾಸ್‌ವರ್ಡ್‌ಗಳನ್ನು ಬಹಿರಂಗಪಡಿಸಲಿಲ್ಲ ಅದು ಸಾಕ್ಷ್ಯ ಸಂಗ್ರಹವನ್ನು ತಡೆಯುತ್ತದೆ ಮತ್ತು ಅವರ ಅಸಹಕಾರವನ್ನು ತೋರಿಸುತ್ತದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಇಡಿ ಪ್ರಧಾನ ಕಛೇರಿಯಲ್ಲಿ ನಡೆದ ವಿಚಾರಣೆಯ ಸಮಯದಲ್ಲಿ ಮಧ್ಯವರ್ತಿಗಳಾದ ದಿನೇಶ್ ಅರೋರಾ, ಅಭಿಷೇಕ್ ಬೋನಪಲ್ಲಿ ಒಳಗೊಂಡಂತೆ ಮದ್ಯದ ವ್ಯವಹಾರದಲ್ಲಿ ತೊಡಗಿರುವ ಇತರ ಸಹ-ಆರೋಪಿಗಳಾದ ತಯಾರಕರು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಿಜಯ್ ನಾಯರ್ ನಡೆಸಿರುವ 10 ಕ್ಕೂ ಹೆಚ್ಚು ಸಭೆಗಳ ಕುರಿತು ಸಾಕ್ಷ್ಯವನ್ನು ಕೇಜ್ರಿವಾಲ್ ಅವರಿಗೆ ತೋರಿಸಲಾಗಿದೆ. ಆದರೆ, ಈ ವ್ಯಕ್ತಿಗಳ ಬಗ್ಗೆ ಅರಿವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದರೊಂದಿಗೆ ವಿಜಯ್ ನಾಯರ್ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ನಿಕಟ ಸಂಪರ್ಕ ಹೊಂದಿರುವುದಾಗಿ ಸಾಬೀತಾಗಿದೆ. ಅವರ ಅನುಮತಿ ಮತ್ತು ಅನುಮೋದನೆಯಿಲ್ಲದೆ ತನ್ನನ್ನು ತಾನು ಪ್ರತಿಪಾದಿಸಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಎಲ್ಲಾ ಪಿತೂರಿ, ಸಭೆಗಳ ಅಂತಿಮ ಲಾಭವನ್ನು ಗೋವಾ ಚುನಾವಣಾ ಪ್ರಚಾರದಲ್ಲಿ ಎಎಪಿ ಪಡೆದುಕೊಂಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

SCROLL FOR NEXT