ಗೋವಾದ ಡ್ಯಾಂಗಳ ಪರಿಸ್ಥಿತಿ
ಗೋವಾದ ಡ್ಯಾಂಗಳ ಪರಿಸ್ಥಿತಿ 
ದೇಶ

ಗೋವಾದಲ್ಲೂ ಜಲಕ್ಷಾಮ: 7 ಡ್ಯಾಂಗಳ ಪೈಕಿ ಮೂರರಲ್ಲಿ ಶೇ.50 ಕ್ಕಿಂತ ಕಡಿಮೆ ನೀರು!

Srinivasamurthy VN

ಪಣಜಿ: ಕರ್ನಾಟಕದಲ್ಲಿ ಮಳೆ ಕೊರೆತೆಯಿಂದಾಗಿ ಉಂಟಾಗಿರುವ ಭೀಕರ ಬರಗಾಲದ ಸುದ್ದಿ ಹಸಿರಾಗಿರುವಂತೆಯೇ ಪ್ರವಾಸಿಗರ ಸ್ವರ್ಗ ನೆರೆಯ ಗೋವಾದಲ್ಲಿ ಜಲಕ್ಷಾಮ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಹೌದು.. ಗೋವಾ ಸರ್ಕಾರವೇ ಹೇಳಿಕೊಂಡಿರುವಂತೆ ಗೋವಾದ ಒಟ್ಟು ಏಳು ಅಣೆಕಟ್ಟುಗಳ ಪೈಕಿ ಮೂರರಲ್ಲಿ ನೀರಿನ ಸಂಗ್ರಹವು ಶೇಕಡಾ 50 ಕ್ಕಿಂತ ಕಡಿಮೆಯಾಗಿದೆ. ಇದು ಪ್ರಸ್ತುತ ಬೇಸಿಗೆ ಕಾಲದಲ್ಲಿ ಪರಿಸ್ಥಿತಿ ಕಷ್ಟಕರವಾಗಬಹುದು ಎಂದು ಸೂಚಿಸುತ್ತದೆ ಎಂದು ಹೇಳಿದೆ.

ಈ ಬಗ್ಗೆ ರಾಜ್ಯ ಜಲಸಂಪನ್ಮೂಲ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಎರಡು ಅಣೆಕಟ್ಟುಗಳ ನೀರಿನ ಮಟ್ಟವು ಶೇಕಡಾ 40 ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ, ಇತರ ನಾಲ್ಕು ಅಣೆಕಟ್ಟುಗಳು ಶೇಕಡಾ 50 ರಷ್ಟು ನೀರಿನ ದಾಸ್ತಾನಿಗಿಂತ ಹೆಚ್ಚಿವೆ ಮತ್ತು ಅವುಗಳಲ್ಲಿ ಒಂದು ಪ್ರಸ್ತುತ ಶೇಕಡಾ 91 ಕ್ಕಿಂತ ಹೆಚ್ಚು ನೀರಿನ ಸಂಗ್ರಹವನ್ನು ಹೊಂದಿದೆ ಎಂದು ಅದು ಹೇಳಿದೆ.

ಉತ್ತರ ಗೋವಾದ ಸತ್ತಾರಿ ಮತ್ತು ಬಿಚೋಲಿಮ್ ತಾಲೂಕಿನ ಕೆಲವು ಭಾಗಗಳ ನೀರಿನ ಅಗತ್ಯವನ್ನು ಪೂರೈಸುವ ಅಂಜುನೆಮ್ ಜಲಾಶಯವು ಶೇ. 62.6 ರಷ್ಟು ನೀರಿನ ಸಂಗ್ರಹ ಹೊಂದಿದ್ದು, ಕೆನಕೋನಾ ತಾಲೂಕಿನ ನೀರಿನ ಅವಶ್ಯಕತೆಯನ್ನು ಪೂರೈಸುವ ಚಾಪೋಲಿ ಜಲಾಶಯವು ಶೇ.59.4 ರಷ್ಟು ನೀರಿನ ಸಂಗ್ರಹ ಹೊಂದಿದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂತೆಯೇ ಗೌನೆಮ್ ಜಲಾಶಯದಲ್ಲಿ ಶೇ.56.6ರಷ್ಟು ದಾಸ್ತಾನು ಉಳಿದಿದ್ದು, ತಿಲ್ಲಾರಿ ಡ್ಯಾಂ ನಲ್ಲಿ ಶೇ.91.1ರಷ್ಟು ನೀರು ತುಂಬಿದೆ ಎಂದು ತಿಳಿಸಿದೆ.

SCROLL FOR NEXT