ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್ 
ದೇಶ

ಲೋಕಸಭಾ ಚುನಾವಣೆ: ರಾಜೀವ್ ಚಂದ್ರಶೇಖರ್ ಒಟ್ಟು 28 ಕೋಟಿ ರೂ. ಆಸ್ತಿ ಘೋಷಣೆ

Nagaraja AB

ತಿರುವನಂತಪುರಂ: ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಒಟ್ಟು 28 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಏಪ್ರಿಲ್ 26 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯ ಮತ್ತು ಹಾಲಿ ಸಂಸದ ಶಶಿ ತರೂರ್ ಮತ್ತು ಸಿಪಿಐ ಹಿರಿಯ ಪನ್ನಿಯನ್ ರವೀಂದ್ರನ್ ವಿರುದ್ಧ ಸೆಣಸುತ್ತಿರುವ ಚಂದ್ರಶೇಖರ್ ಗುರುವಾರ ಚುನಾವಣಾಧಿಕಾರಿಯ ಮುಂದೆ ನಾಮಪತ್ರ ಸಲ್ಲಿಸಿದರು.

ನಾಮಪತ್ರದ ಜೊತೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರ ಚರ ಆಸ್ತಿಯ ಒಟ್ಟು ಮೌಲ್ಯ 13,69,18,637 ರೂ. ಆಗಿದ್ದು, ಅವರ ಪತ್ನಿ 12,47,00,408 ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇದರಲ್ಲಿ ಕೈಯಲ್ಲಿರುವ ನಗದು, ಬ್ಯಾಂಕ್‌ಗಳಲ್ಲಿನ ಠೇವಣಿಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು ಮತ್ತು ಸಹಕಾರ ಸಂಘಗಳಲ್ಲಿನ ಠೇವಣಿಗಳ ವಿವರಗಳು, ಹಾಗೆಯೇ ಬಾಂಡ್‌ಗಳು, ಡಿಬೆಂಚರ್‌ಗಳು, ಷೇರುಗಳು, ಕಂಪನಿಗಳು, ಮ್ಯೂಚುವಲ್ ಫಂಡ್‌ಗಳಲ್ಲಿನ ಘಟಕಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆಗಳು ಸೇರಿವೆ.

ರಾಜೀವ್ ಚಂದ್ರಶೇಖರ್ ಅವರ ಚರ ಆಸ್ತಿಗಳಲ್ಲಿ ಕರ್ನಾಟಕದಲ್ಲಿ ನೋಂದಣಿಯಾದ 1942 ರ ಮಾಡೆಲ್ ರೆಡ್ ಇಂಡಿಯನ್ ಸ್ಕೌಟ್ ಜೊತೆಗೆ ಆಭರಣಗಳು, ಚಿನ್ನಾಭರಣಗಳು ಮತ್ತು 3.25 ಕೋಟಿ. ರೂ.ಗಿಂತ ಹೆಚ್ಚು ಮೌಲ್ಯದ ಇತರ ಬೆಲೆಬಾಳುವ ವಸ್ತುಗಳು ಸೇರಿವೆ. ಇನ್ನೂ ಸ್ಥಿರಾಸ್ತಿಗಳಲ್ಲಿ 5,26,42,640 ರೂ ಬೆಲೆಯಲ್ಲಿ ಖರೀದಿಸಲಾದ ಸದ್ಯದ ಮಾರುಕಟ್ಟೆಯಲ್ಲಿನ ಅಂದಾಜು ರೂ. 14,40,00,000 ಮೌಲ್ಯದ ಆಸ್ತಿಯೂ ಸೇರಿದೆ.

2022-23ರ ಆದಾಯ ತೆರಿಗೆ ರಿಟರ್ನ್‌ನಲ್ಲಿ ಚಂದ್ರಶೇಖರ್ ಅವರ ಒಟ್ಟು ಆದಾಯವು 5,59,200 ರೂ. ಆಗಿತ್ತು. 2021-22ನೇ ಸಾಲಿನಲ್ಲಿ 680 ರೂ. ಆಗಿತ್ತು.

SCROLL FOR NEXT