ಎಂವಿಎ ನಾಯಕರು
ಎಂವಿಎ ನಾಯಕರು 
ದೇಶ

ಮಹಾರಾಷ್ಟ್ರದಲ್ಲಿ MVA ಸೀಟ್ ಹಂಚಿಕೆ ಅಂತಿಮ: ಸೇನಾ(UBT) 21 ಸ್ಥಾನಗಳಲ್ಲಿ ಸ್ಪರ್ಧೆ, ಕಾಂಗ್ರೆಸ್ 17, ಎನ್ ಸಿಪಿ(SP) 10ರಲ್ಲಿ ಕಣಕ್ಕೆ

Lingaraj Badiger

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 21 ರಲ್ಲಿ ಹೋರಾಡಲು ಸಜ್ಜಾಗಿದೆ, ಕಾಂಗ್ರೆಸ್ 17 ರಲ್ಲಿ ಸ್ಪರ್ಧಿಸುತ್ತಿದ್ದು, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಉಳಿದ 10 ಸ್ಥಾನಗಳಲ್ಲಿ ಕಣಕ್ಕಿಳಿಯುತ್ತಿದೆ.

ಕಾಂಗ್ರೆಸ್ ಈಗ ಸಾಂಗ್ಲಿ ಮತ್ತು ಭಿವಂಡಿ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದು, ಸಾಂಗ್ಲಿಯಲ್ಲಿ ಸೇನಾ(ಯುಬಿಟಿ) ಮತ್ತು ಭಿವಂಡಿಯಲ್ಲಿ ಎನ್‌ಸಿಪಿ (ಎಸ್‌ಪಿ) ಸ್ಪರ್ಧಿಸಲಿದೆ.

ಮುಂಬೈ ಉತ್ತರದ ಹೊರತಾಗಿ, ಕಾಂಗ್ರೆಸ್ ಪಕ್ಷದ ಕೆಲವು ಪ್ರಮುಖ ಸ್ಥಾನಗಳೆಂದರೆ ನಂದೂರ್ಬಾರ್, ಧುಲೆ, ಅಕೋಲಾ, ಅಮರಾವತಿ, ನಾಗ್ಪುರ, ಚಂದ್ರಾಪುರ, ನಾಂದೇಡ್, ಜಲ್ನಾ, ಮುಂಬೈ ನಾರ್ತ್ ಸೆಂಟ್ರಲ್, ಪುಣೆ, ಲಾತೂರ್, ಸೋಲಾಪುರ್ ಮತ್ತು ಕೊಲ್ಲಾಪುರ.

ಎನ್‌ಸಿಪಿಗೆ ಬಾರಾಮತಿ, ಶಿರೂರು, ಸತಾರಾ, ಭಿವಂಡಿ, ವಾರ್ಧಾ, ದಿಂಡೋರಿ, ಮಾಧಾ, ರೇವರ್, ಅಹ್ಮದ್‌ನಗರ ದಕ್ಷಿಣ ಮತ್ತು ಬೀಡ್‌ನ ಕೆಲವು ಸ್ಥಾನಗಳನ್ನು ನೀಡಲಾಗಿದೆ.

ಜಲಗಾಂವ್, ಪರ್ಭಾನಿ, ನಾಸಿಕ್, ಪಾಲ್ಘರ್, ಕಲ್ಯಾಣ್, ಥಾಣೆ, ರಾಯ್‌ಗಢ, ಮಾವಲ್, ರತ್ನಗಿರಿ, ಸಂಭಾಜಿ ನಗರ, ಶಿರಡಿ, ಸಾಂಗ್ಲಿ, ಹಿಂಗೋಲಿ ಮತ್ತು ಯವತ್ಮಾಲ್-ವಾಶಿಂ ಮುಂತಾದ ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ.

ಸಾಂಗ್ಲಿ, ಮುಂಬೈ ಸೌತ್ ಸೆಂಟ್ರಲ್ ಮತ್ತು ಮುಂಬೈ ನಾರ್ತ್ ವೆಸ್ಟ್ ಸೇರಿದಂತೆ 48 ಸ್ಥಾನಗಳ ಪೈಕಿ 21 ಸ್ಥಾನಗಳಿಗೆ ಶಿವಸೇನೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದಾಗ ಮೂರು ಮಿತ್ರಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಗೊಂದಲಕ್ಕೊಳಗಾಗಿತ್ತು. ಈಗ ಅದನ್ನು ಗೊಂದಲ ಪರಿಹರಿಸಿಕೊಳ್ಳಲಾಗಿದೆ.

SCROLL FOR NEXT