ಇಂದಿರಾ ಗಾಂಧಿ
ಇಂದಿರಾ ಗಾಂಧಿ 
ದೇಶ

ಪಂಜಾಬ್‌ ಲೋಕಸಭಾ ಚುನಾವಣೆ: ಫರೀದ್‌ಕೋಟ್‌ನಿಂದ ಇಂದಿರಾ ಗಾಂಧಿ ಕೊಂದ ಹಂತಕನ ಪುತ್ರ ಕಣಕ್ಕೆ!

Nagaraja AB

ಚಂಡೀಗಢ: ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ಫರೀದ್‌ಕೋಟ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೊಂದ ಹಂತಕರೊಬ್ಬನ ಮಗ ಗುರುವಾರ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅನೇಕ ಜನರು ಕೇಳುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ 45ರ ಹರೆಯದ ಸರಬ್ಜಿತ್ ಸಿಂಗ್ ಹೇಳಿದ್ದಾರೆ.

ಸಿಂಗ್ ಇಂದಿರಾ ಗಾಂಧಿ ಕೊಂದ ಇಬ್ಬರು ಹಂತಕರಲ್ಲಿ ಒಬ್ಬರಾದ ಬಿಯಾಂತ್ ಸಿಂಗ್ ಅವರ ಮಗ. ಆಗಿನ ಪ್ರಧಾನಿಯ ಅಂಗರಕ್ಷಕರಾಗಿದ್ದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರು ಅಕ್ಟೋಬರ್ 31, 1984 ರಂದು ಅವರ ನಿವಾಸದಲ್ಲಿ ಗಾಂಧಿಯನ್ನು ಹತ್ಯೆಗೈದಿದ್ದರು. ಸರಬ್ಜಿತ್ ಸಿಂಗ್ 2004ರ ಲೋಕಸಭಾ ಚುನಾವಣೆಯಲ್ಲಿ ಬಟಿಂಡಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದಾಗ್ಯೂ, 1.13 ಲಕ್ಷ ಮತಗಳನ್ನು ಗಳಿಸಿದ್ದರು. ನಂತರ 2007 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬರ್ನಾಲಾದ ಭದೌರ್ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಲಿಯೂ ಸೋತಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಫತೇಘರ್ ಸಾಹಿಬ್ ಕ್ಷೇತ್ರದಿಂದ ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದರು. ಆದರೆ, ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಸಿಂಗ್ ಅವರ ತಾಯಿ ಬಿಮಲ್ ಕೌರ್ 1989 ರಲ್ಲಿ ರೋಪರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಪಂಜಾಬ್‌ನ 13 ಲೋಕಸಭಾ ಸ್ಥಾನಗಳಿಗೆ ಜೂನ್ 1 ರಂದು ಮತದಾನ ನಡೆಯಲಿದೆ. ಎಎಪಿ ಫರೀದ್‌ಕೋಟ್ ಲೋಕಸಭಾ ಕ್ಷೇತ್ರದಿಂದ ನಟ ಕರಮ್‌ಜಿತ್ ಅನ್ಮೋಲ್ ಅವರನ್ನು ಕಣಕ್ಕಿಳಿಸಿದ್ದು, ಬಿಜೆಪಿ ಗಾಯಕ ಹನ್ಸ್ ರಾಜ್ ಹನ್ಸ್ ಅವರಿಗೆ ಟಿಕೆಟ್ ಘೋಷಿಸಿದೆ. ಈ ಕ್ಷೇತ್ರವನ್ನು ಪ್ರಸ್ತುತ ಕಾಂಗ್ರೆಸ್ ಸಂಸದ ಮೊಹಮ್ಮದ್ ಸಾದಿಕ್ ಪ್ರತಿನಿಧಿಸುತ್ತಿದ್ದಾರೆ.

SCROLL FOR NEXT