ಗೋಧಿ ಕಟಾವು ಮಾಡಿದ ಹೇಮ ಮಾಲಿನಿ 
ದೇಶ

ಲೋಕಸಭೆ ಚುನಾವಣೆ ಪ್ರಚಾರ: ಗದ್ದೆಯಲ್ಲಿ ನಿಂತು ಗೋಧಿ ಕಟಾವು ಮಾಡಿದ ಡ್ರೀಮ್ ಗರ್ಲ್!

ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಲಕ್ನೋ: ಉತ್ತರಪ್ರದೇಶ ಲೋಕಸಭಾ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಬಲದೇವ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಹೇಮಾಮಾಲಿನಿ ಅವರು ಉರಿಬಿಸಿಲಿನಲ್ಲಿಯೂ ಕೆಲ ಮಹಿಳೆಯರ ಜೊತೆ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗೋಧಿ ಕಟಾವು ಮಾಡಿರುವ ಫೋಟೊಗಳನ್ನು ಹೇಮಾಮಾಲಿನಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದಾರೆ. ನಾನು ರೈತರೊಂದಿಗೆ ಮಾತುಕತೆ ನಡೆಸಲು ಇಂದು ಜಮೀನುಗಳಿಗೆ ಭೇಟಿ ನೀಡಿದೆ. ಕಳೆದ 10 ವರ್ಷಗಳಿಂದ ನಿರಂತರವಾಗಿ ನಾನು ರೈತರೊಂದಿಗೆ ಸಂಪರ್ಕದಲ್ಲಿದ್ದೇನೆ.

ರೈತರು ಕೂಡ ನಾನು ಅವರನ್ನು ಭೇಟಿ ಮಾಡುವುದನ್ನು ಇಷ್ಟಪಡುತ್ತಾರೆ. ನಾನು ಕಟಾವು ಮಾಡಿದ ಗೋಧಿಯೊಂದಿಗೆ ಪೋಸ್‌ ನೀಡುವಂತೆ ಕೂಡ ಅವರೇ ಸೂಚಿಸಿದರು ಎಂಬುದಾಗಿ ಹೇಮಾಮಾಲಿನಿ ಬರೆದುಕೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಬಲದೇವ್ ಪ್ರದೇಶದ ಹಯಾತ್‌ಪುರ ಗ್ರಾಮದಲ್ಲಿ ಕೆಲ ಮಹಿಳೆಯರು ಬಿಸಿಲಲ್ಲಿ ಗದ್ದೆಯಲ್ಲಿ ಗೋಧಿ ಕೊಯ್ಲು ಮಾಡುತ್ತಿದ್ದರು. ಗೋಧಿ ಕೊಯ್ಲು ಮಾಡುತ್ತಿರುವ ಮಹಿಳೆಯರನ್ನು ನೋಡಿದ ಹೇಮಾ ಮಾಲಿನಿ, ತನ್ನ ಕಾರನ್ನು ನಿಲ್ಲಿಸಿ ಹೊಲಕ್ಕೆ ಇಳಿದಿದ್ದಾರೆ. ಬಳಿಕ ಮಹಿಳೆಯೊಬ್ಬರ ಕೈಯಿಂದ ಕುಡುಗೋಲು ತೆಗೆದುಕೊಂಡು ಗೋಧಿ ಕೊಯ್ಲು ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಆಳಂದ ಗಲಭೆ ಪ್ರಕರಣ ಸೇರಿ 52 ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ

ಇದೆಲ್ಲದರಿಂದ ನನ್ನನ್ನು ದೂರವಿಡಿ: CJP ಪ್ರತಿಭಟನೆ ಕುರಿತು ದಿಲ್ಜಿತ್ ದೋಸಾಂಜ್ ಖಡಕ್ ಮಾತು

ಅಟಲ್‌ ಸುರಂಗದ ಬಳಿ ಭಯಾನಕ ಅಪಘಾತ; ಕಂಬಿಗಳ ನಡುವೆ ಸಿಲುಕಿದ SUV ಕಾರು! Video ನೋಡಿ

ಬಿಜೆಪಿಯಲ್ಲಿ ಮುಂದುವರಿದ ಉಚ್ಚಾಟನೆ ಪರ್ವ; ಸತೀಶ್​​ಗೆ ಶಾಕ್; ಪಕ್ಷದಿಂದ 6 ವರ್ಷ ಅಮಾನತು

ಭಗವಾನ್ ರಾಮನನ್ನೇ 'ಲೂಟಿ' ಮಾಡಿದ 'ಫಾರ್ಜಿ ಹಿಂದೂಗಳು': BJP, VHP, ಬಜರಂಗ ದಳವನ್ನು ಟೀಕಿಸಿದ ಕಪಿಲ್ ಸಿಬಲ್