ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ದೇಶ

ಅರುಣಾಚಲ ಪ್ರದೇಶ: ಬಂಡುಕೋರರಿಂದ ಬಿಜೆಪಿ ನಾಯಕನ ಅಪಹರಣ!

Nagaraja AB

ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ನಾಯಕನನ್ನು ಬಂಡುಕೋರರು ಅಪಹರಿಸಿರುವ ಘಟನೆ ಬುಧವಾರ ನಡೆದಿದೆ. ಅಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಪವನ್ ಕುಮಾರ್ ಸೇನ್ ಹೇಳಿದ್ದಾರೆ.

ಅರುಣಾಚಲ ಪೂರ್ವ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಇದೇ ಜಿಲ್ಲೆಯಲ್ಲಿ ಚುನಾವಣಾ ಸ್ಪರ್ಧಿಯೊಬ್ಬರು ಭೂಗತ ಸಂಪರ್ಕ ಬಳಸಿ ಬಿಜೆಪಿ ನಾಯಕನನ್ನು ಅಪಹರಿಸಿದ್ದಾರೆ ಎಂಬ ಆರೋಪದ ನಂತರ ಸೈನ್ ಈ ರೀತಿ ತಿಳಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಚುಕು ಅಪಾ, ಅಪಹರಣವನ್ನು ಒಪ್ಪಿಕೊಂಡಿದ್ದು, ಪೊಲೀಸರು ಮತ್ತು ಅರೆಸೈನಿಕ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.

ಆದಾಗ್ಯೂ, ಘಟನೆಯ ವಿವರಗಳನ್ನು ನೀಡಲು IGP ನಿರಾಕರಿಸಿದರು. ಲಾಂಗ್ಡಿಂಗ್ ಡೆಪ್ಯುಟಿ ಕಮಿಷನರ್ ಬೆಕಿರ್ ನ್ಯೋರಾಕ್ ಮತ್ತು ಪೊಲೀಸ್ ಅಧೀಕ್ಷಕ ಡೆಕಿಯೊ ಗುಮ್ಜಾ ಮಾತನಾಡಲು ನಿರಾಕರಿಸಿದರು.

ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಈಶಾನ್ಯ ರಾಜ್ಯದಲ್ಲಿ ಏಪ್ರಿಲ್ 19 ರಂದು ಏಕಕಾಲದಲ್ಲಿ ಸಂಸತ್ತಿಗೆ ಮತ್ತು 60 ಸದಸ್ಯರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದರೆ, ಒಟ್ಟು 60 ಸದಸ್ಯರಲ್ಲಿ ಆಡಳಿತಾರೂಢ ಬಿಜೆಪಿಯ 10 ಮಂದಿ ಈಗಾಗಲೇ ಅವಿರೋಧವಾಗಿ ಗೆದ್ದಿದ್ದಾರೆ.

ಯಾವುದೇ ಭೂಗತ ಗುಂಪುಗಳಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಲು ಲಾಂಗ್ಡಿಂಗ್ ಮತ್ತು ತಿರಾಪ್ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ಭದ್ರತಾ ಕ್ರಮ ತೀವ್ರಗೊಳಿಸಲು ಅಸ್ಸಾಂ ರೈಫಲ್ಸ್ ಮತ್ತು ಇತರ ಅರೆಸೇನಾ ಪಡೆಗಳಿಗೆ ತಿಳಿಸಲಾಗಿದೆ ಎಂದು ಸಿಇಒ ತಿಳಿಸಿದರು.

SCROLL FOR NEXT