ಪಶ್ಚಿಮ ಬಂಗಾಳ ರಾಜ್ಯಪಾಲರು ಮತ್ತು ಸಿಎಂ ಮಮತಾ ಬ್ಯಾನರ್ಜಿ 
ದೇಶ

ಪಶ್ಚಿಮ ಬಂಗಾಳ: ಕೂಚ್ ಬೆಹಾರ್‌ಗೆ ಭೇಟಿ ನೀಡುವ ಕುರಿತು ರಾಜ್ಯಪಾಲರಿಗೆ ಚುನಾವಣಾ ಆಯೋಗ ಸಲಹೆ

ಮೊದಲ ಹಂತದ ಲೋಕಸಭಾ ಚುನಾವಣೆಯ ಮುನ್ನಾದಿನದಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಕೂಚ್ ಬೆಹಾರ್ ಪ್ರವಾಸವನ್ನು ರದ್ದುಗೊಳಿಸುವಂತೆ ಸಲಹೆ ನೀಡಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ.

ಕೊಚ್ ಬೆಹಾರ್: ಮೊದಲ ಹಂತದ ಲೋಕಸಭಾ ಚುನಾವಣೆಯ ಮುನ್ನಾದಿನದಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಕೂಚ್ ಬೆಹಾರ್ ಪ್ರವಾಸವನ್ನು ರದ್ದುಗೊಳಿಸುವಂತೆ ಸಲಹೆ ನೀಡಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಏಪ್ರಿಲ್ 19 ರಂದು ಕೂಚ್ ಬೆಹಾರ್‌ನಲ್ಲಿ ಮತದಾನ ನಡೆಯಲಿದ್ದು, ಇಂದು ಸಂಜೆಯಿಂದ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ರಾಜಕೀಯ ನಾಯಕರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

ಏಪ್ರಿಲ್ 18 ಮತ್ತು 19 ರಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ ವಿ ಆನಂದ ಬೋಸ್ ಅವರು ಕೂಚ್ ಬೆಹಾರ್‌ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದ ನಂತರ, ಉದ್ದೇಶಿತ ಪ್ರವಾಸವನ್ನು ಕೈಗೊಳ್ಳದಂತೆ ಚುನಾವಣಾ ಆಯೋಗ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮಾದರಿ ನೀತಿ ಸಂಹಿತೆಯಡಿ ರಾಜ್ಯಪಾಲರಿಗಾಗಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಚುನಾವಣಾ ಆಯೋಗ ರಾಜ್ಯಪಾಲರ ಕಚೇರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ. ಏಪ್ರಿಲ್ 18 ಮತ್ತು 19 ರಂದು ಇಡೀ ಜಿಲ್ಲಾಡಳಿತ ಮತ್ತು ಪೊಲೀಸ್ ಪಡೆ ಚುನಾವಣಾ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಚುನಾವಣಾ ಆಯೋಗ ಹೇಳಿದೆ.

ಚುನಾವಣಾ ಸಂದರ್ಭದಲ್ಲಿ ರಾಜ್ಯಪಾಲರ ಭೇಟಿಯು ಬೇರೆ ಅರ್ಥಕ್ಕೆ ಕಾರಣವಾಗುತ್ತದೆ. 'ಅನಿರೀಕ್ಷಿತ' ಪ್ರಸ್ತಾವಿತ ಭೇಟಿಗೆ ಪ್ರೋಟೋಕಾಲ್ ಮತ್ತು ಸ್ಥಳೀಯ ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಪ್ರಜಾಪ್ರತಿನಿಧಿ ಕಾಯಿದೆ 1951 ರ ಸೆಕ್ಷನ್ 126 ರ ಪ್ರಕಾರ, ಕೂಚ್ ಬೆಹಾರ್‌ ನಲ್ಲಿ ಬಹಿರಂಗ ಪ್ರಚಾರ ಇಂದು ಸಂಜೆಯಿಂದ ಆರಂಭವಾಗಿದೆ. ಇದು ಚುನಾವಣಾ ಅಧಿಕಾರಿಗಳಿಂದ ಹಲವಾರು ನಿರ್ಬಂಧ ಮತ್ತು ಉನ್ನತ ಮಟ್ಟದ ಕ್ರಮಕ್ಕೆ ಕಾರಣವಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!