ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ 
ದೇಶ

ಇಂಡಿಯಾ ಮೈತ್ರಿಕೂಟದ ಪ್ರಧಾನಿ ಎಲಾನ್ ಮಸ್ಕ್ ನ್ನು ಭಾರತಕ್ಕೆ ಸ್ವಾಗತಿಸುತ್ತಾರೆ: ಬಿಜೆಪಿಗೆ ಕಾಂಗ್ರೆಸ್ ತಿರುಗೇಟು!

Srinivas Rao BV

ನವದೆಹಲಿ: ಭಾರತಕ್ಕೆ ಎಲಾನ್ ಮಸ್ಕ್ ಭೇಟಿ ನೀಡುವುದು ಮುಂದೂಡಿಕೆಯಾಗಿರುವ ಬಗ್ಗೆ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ. ಟೆಸ್ಲಾ ಬಾದ್ಯತೆಗಳ ಹಿನ್ನಲೆ ಎಲಾನ್ ಮಸ್ಕ್ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡುವ ಅಗತ್ಯ ಏರ್ಪಟ್ಟಿದೆ. ಈ ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕುರಿತು ಯೋಚಿಸಲಾಗುವುದು' ಎಂದು ಟೆಸ್ಲಾ ಸಂಸ್ಥೆ ಸ್ಪಷ್ಟನೆ ನೀಡಿತ್ತು.

ಮಸ್ಕ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರ ಸಂಸ್ಥೆ ಭಾರತೀಯ ಮಾರುಕಟ್ಟೆ ಪ್ರವೇಶಿಸುವುದರ ಬಗ್ಗೆ ಘೋಷಣೆಯ ನಿರೀಕ್ಷೆಗಳಿದ್ದವು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈ ರಾಮ್ ರಮೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನಿವೃತ್ತರಾಗಲಿರುವ ಪ್ರಧಾನಿಯನ್ನು ಭೇಟಿ ಮಾಡುವುದಕ್ಕೆ ಎಲಾನ್ ಮಸ್ಕ್ ಹಿಂಜರಿಯುತ್ತಿದ್ದಾರೆ. ಪ್ರಧಾನಿ ಮೋದಿಯೂ ಸಹ ಎಲಾನ್ ಮಸ್ಕ್ ತಮ್ಮ ಭೇಟಿಯನ್ನು ಮುಂದೂಡುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದನ್ನು ಗಮನಿಸಿರಬಹುದು. ಶೀಘ್ರವೇ INDIA ಮೈತ್ರಿಕೂಟದ ಪ್ರಧಾನಿ ಎಲಾನ್ ಮಸ್ಕ್ ಅವರನ್ನು ಭಾರತಕ್ಕೆ ಸ್ವಾಗತಿಸಲಿದ್ದಾರೆ ಹಾಗೂ INDIA ಸರ್ಕಾರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ, ಪ್ರಧಾನಿ ಮೋದಿ ಯುಎಸ್ ಭೇಟಿ ನೀಡಿದ್ದಾಗ ಮಸ್ಕ್ ಭೇಟಿಯಾಗಿದ್ದರು ಮತ್ತು ಟೆಸ್ಲಾ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ವಿಶ್ವಾಸವನ್ನು ವ್ಯಕ್ತಪಡಿಸಿ 2024 ರಲ್ಲಿ ಭಾರತಕ್ಕೆ ಭೇಟಿ ನೀಡಲು ಯೋಜಿಸಿರುವುದಾಗಿ ಹೇಳಿದ್ದರು.

SCROLL FOR NEXT