ಹೈಕೋರ್ಟ್
ಹೈಕೋರ್ಟ್ online desk
ದೇಶ

ಪಶ್ಚಿಮ ಬಂಗಾಳ: ಸರ್ಕಾರಿ ಅನುದಾನಿತ ಶಾಲೆಗಳಿಗೆ 2016 ರಲ್ಲಿ ನಡೆದ ನೇಮಕಾತಿ ಪರೀಕ್ಷೆ ಅನೂರ್ಜಿತ: ಹೈಕೋರ್ಟ್

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಸರ್ಕಾರಿ ಅನುದಾನಿತ ಶಾಲೆಗಳಿಗೆ 2016 ರಲ್ಲಿ ನಡೆದ ನೇಮಕಾತಿ ಪರೀಕ್ಷೆಯನ್ನು ಕೋಲ್ಕತ್ತ ಹೈಕೋರ್ಟ್ ಅನೂರ್ಜಿತಗೊಳಿಸಿದೆ.

ಈ ಪರೀಕ್ಷೆಗಳ ಮೂಲಕ ನಡೆದಿದ್ದ ನೇಮಕಾತಿಗಳನ್ನು ರದ್ದುಗೊಳಿಸಿದೆ. ನ್ಯಾ.ದೇಬಾಂಗ್ಸು ಬಸಕ್ ಹಾಗೂ ಮೊಹಮ್ಮದ್ ಶಬ್ಬಾರ್ ರಶ್ದಿ ಅವರಿದ್ದ ಪೀಠ ಈ ಪರೀಕ್ಷೆ, ನೇಮಕಾತಿಗೆ ಸಂಬಂಧಿಸಿದ ಮುಂದಿನ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದ್ದು, 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಹೇಳಿದೆ.

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗಕ್ಕೆ ಹೊಸದಾಗಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಪೀಠ ಸೂಚಿಸಿದೆ. 24,640 ಖಾಲಿ ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು SLST-2016 ಗೆ ಹಾಜರಾಗಿದ್ದರು. ಖಾಲಿ ಹುದ್ದೆಗಳ ವಿರುದ್ಧ ಒಟ್ಟು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದು ಕೆಲವು ಅರ್ಜಿದಾರರ ಪರ ವಕೀಲ ಫಿರ್ದೌಸ್ ಶಮೀಮ್ ಹೇಳಿದರು.

ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೆಲವು ಮೇಲ್ಮನವಿದಾರರು ಮಾಡಿದ ಮನವಿಯನ್ನೂ ವಿಭಾಗೀಯ ಪೀಠ ತಿರಸ್ಕರಿಸಿದೆ.

SCROLL FOR NEXT