ನೀಲೇಶ್ ಕುಂಭನಿ
ನೀಲೇಶ್ ಕುಂಭನಿ 
ದೇಶ

ನಾಮಪತ್ರ ತಿರಸ್ಕೃತಗೊಂಡಿದ್ದ ಸೂರತ್ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭನಿ ಪಕ್ಷದಿಂದ ಅಮಾನತು!

Srinivas Rao BV

ಸೂರತ್: ನಾಮಪತ್ರ ತಿರಸ್ಕೃತಗೊಂಡಿದ್ದ ಸೂರತ್ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭನಿ ಪಕ್ಷದಿಂದ ಅಮಾನತುಗೊಂಡಿದ್ದಾರೆ.

ನಾಮಪತ್ರಗಳಲ್ಲಿನ ವ್ಯತ್ಯಾಸಗಳ ಕಾರಣದಿಂದ ಸೂರತ್ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭನಿ ನಾಮಪತ್ರ ತಿರಸ್ಕೃತಗೊಂಡಿತ್ತು. ಪರಿಣಾಮ ಬಿಜೆಪಿಯ ಮುಖೇಶ್ ದಲಾಲ್ ಅವಿರೋಧವಾಗಿ ಲೋಕಸಭೆಗೆ ಆಯ್ಕೆಗೊಂಡಿದ್ದರು.

ನೀಲೇಶ್ ಕುಂಭನಿ ಅಮಾನತು ಬಗ್ಗೆ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ, ಚರ್ಚೆಗಳ ನಂತರ ಕುಂಭನಿ ಅವರನ್ನು ಅಮಾನತುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಕುಂಭನಿ ಅವರ ನಿರ್ಲಕ್ಷ್ಯದ ಕಾರಣದಿಂದ ಅಥವಾ ಬಿಜೆಪಿ ಜೊತೆ ಶಾಮೀಲಾದ ಪರಿಣಾಮ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

"ನಿಮಗೆ ನ್ಯಾಯಯುತವಾಗಿರಲು, ನಿಮ್ಮ ಪ್ರಕರಣವನ್ನು ವಿವರಿಸಲು ನಾವು ನಿಮಗೆ ಸಮಯ ನೀಡಿದ್ದೇವೆ ಆದರೆ ಪಕ್ಷದ ಶಿಸ್ತು ಸಮಿತಿಯ ಮುಂದೆ ಬರುವ ಬದಲು ನೀವು ಅಜ್ಞಾತವಾಗಿ ಹೋಗಿದ್ದೀರಿ.

ನಿಮ್ಮ ನಾಮಪತ್ರವನ್ನು ಅಧಿಕಾರಿಗಳು ತಿರಸ್ಕರಿಸಿದ ನಂತರ, ಬಿಜೆಪಿ ಮುಂದುವರಿದು, ಇತರ ಎಂಟು ಅಭ್ಯರ್ಥಿಗಳ ನಾಮಪತ್ರವನ್ನು ಹಿಂತೆಗೆದುಕೊಂಡಿತು. ಇದು ಸೂರತ್‌ನ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ ಎಂದು ಬಾಲು ಪಟೇಲ್ ನೇತೃತ್ವದ ಕಾಂಗ್ರೆಸ್ ಶಿಸ್ತು ಸಮಿತಿ ಹೇಳಿದೆ.

ನಿಮ್ಮ ಈ ಕ್ರಮದಿಂದ ಸೂರತ್‌ನ ಜನರು ಮತ್ತು ಪಕ್ಷದ ಕಾರ್ಯಕರ್ತರು ತೀವ್ರ ಕೋಪಗೊಂಡಿದ್ದಾರೆ ಮತ್ತು ವಿವಿಧ ರೀತಿಯಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ನಿಮ್ಮನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲು ನಿರ್ಧರಿಸಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಾಂಗ್ರೆಸ್ ತಿಳಿಸಿದೆ.

SCROLL FOR NEXT