ಸಾಂದರ್ಭಿಕ ಚಿತ್ರ 
ದೇಶ

ನವದೆಹಲಿ: ಶಾಲೆಗೆ ಬಾಂಬ್ ಬೆದರಿಕೆ ಸಂದೇಶ; 14 ವರ್ಷದ ಬಾಲಕನ ಬಂಧನ

ಶಾಲೆಗೆ ಹೋಗಲು ಇಷ್ಟಪಡದೆ ಸಂಬಂಧಿಕರ ಇಮೇಲ್ ಐಡಿ ಬಳಸಿಕೊಂಡು ಶಾಲೆಯ ಆಡಳಿತಕ್ಕೆ ಬಾಂಬ್ ಬೆದರಿಕೆ ಕಳುಹಿಸಿದ್ದಾನೆ

ನವದೆಹಲಿ: ತರಗತಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಆತಂಕ ಮನೆ ಮಾಡಿತ್ತು.

ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ಕೂಲಂಕಷ ತಪಾಸಣೆ ನಡೆಸಲಾಯಿತು. ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಸಂದೇಶ ಕಳುಹಿಸಲಾಗಿತ್ತು.

ಸಂದೇಶ ಕಳುಹಿಸಿದವರು ಪಾಕಿಸ್ತಾನಿ ಜನರಲ್ ಎಂದು ಕೂಡ ಹೇಳಲಾಗಿತ್ತು. ಬಾಲಕನನ್ನು ಶನಿವಾರ ಬಂಧಿಸಲಾಗಿದೆ. ಆತ ಸಂಬಂಧಿಕರ ಇಮೇಲ್ ಖಾತೆಯ ಮೂಲಕ ಶಾಲಾ ಆಡಳಿತಕ್ಕೆ ಮೇಲ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತರ ಎರಡು ಶಾಲೆಗಳಲ್ಲಿಯೂ ತಪಾಸಣೆ ನಡೆಸಲಾಯಿತು. ಆದರೆ ಮೂರರಲ್ಲಿ ಎಲ್ಲಿಯೂ ಅನುಮಾನಾಸ್ಪದ ವಸ್ತುಗಳು ಕಂಡುಬರಲಿಲ್ಲ. ವಿಚಾರಣೆಯ ಸಮಯದಲ್ಲಿ, ಮರುದಿನ ಶಾಲೆಗೆ ಹೋಗಲು ಇಷ್ಟಪಡದೆ ಸಂಬಂಧಿಕರ ಇಮೇಲ್ ಐಡಿ ಬಳಸಿಕೊಂಡು ಶಾಲೆಯ ಆಡಳಿತಕ್ಕೆ ಬಾಂಬ್ ಬೆದರಿಕೆ ಕಳುಹಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಕನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ ಸಿಎಂ ಪತ್ನಿ ವಿರುದ್ಧ ಆರೋಪ: ಪವನ್ ಖೇರಾಗೆ ನಿರೀಕ್ಷಣಾ ಜಾಮೀನು ಮಂಜೂರು

ರಾಹುಲ್- ಸೋನಿಯಾ ಗಾಂಧಿ ಏನೇ ಹೇಳಿದ್ರು ಪ್ರಸಾದವೆಂದು ಸ್ವೀಕಾರ: ಕೇಂದ್ರ ಜನಸಾಮಾನ್ಯರ ನೋವು ಅರಿಯಬೇಕು; ಡಿ.ಕೆ. ಶಿವಕುಮಾರ್

ನರ್ಮದಾ ನದಿಯಲ್ಲಿ ಪ್ರವಾಸಿ ಬೋಟ್ ಜಲಸಮಾಧಿ: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ಎದೆಗೆ ಅಪ್ಪಿಕೊಂಡ ಸ್ಥಿತಿಯಲ್ಲಿ ತಾಯಿ-ಮಗು ಶವಪತ್ತೆ

ನಾಯಕತ್ವ ಹಗ್ಗಜಗ್ಗಾಟ ನಡುವೆ ಗುಪ್ತಚರ ಮುಖ್ಯಸ್ಥರ ಬದಲಾವಣೆ: ಅಧಿಕಾರ ಇನ್ನೂ ನನ್ನ ಕೈಯಲ್ಲೇ ಇದೆ, ಕಠಿಣ ಸಂದೇಶ ರವಾನಿಸಿದ ಸಿದ್ದರಾಮಯ್ಯ..?

ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

SCROLL FOR NEXT