ಮುಂಬೈ: ಯೂಟ್ಯೂಬರ್ ಧ್ರುವ ರಾಠಿ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಸೇರಿದಂತೆ ಪ್ರಪಂಚದ ಬಗ್ಗೆ ಆಗಾಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಠಿ ಬಿಜೆಪಿ ಸೇರಿದಂತೆ ಪ್ರಧಾನಿ ಮೋದಿಯನ್ನು ಅವಮಾನಿಸುವ ಹತ್ತಾರು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದನು. ಇದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು.
ಬಾಂಗ್ಲಾದೇಶ ಹಿಂಸಾಚಾರದ ಬಳಿಕ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಧ್ರುವ ರಾಠಿ ಮಾಡಿರುವ ಪೋಸ್ಟ್ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಈ ಪೋಸ್ಟ್ ಬಾಂಗ್ಲಾದೇಶದ ಕುರಿತದ್ದಾಗಿದೆ. ಅದರಲ್ಲಿ ರಾಠಿ ಬಾಂಗ್ಲಾದೇಶದ ಅಭಿವೃದ್ಧಿಯನ್ನು ಭಾರತದೊಂದಿಗೆ ಹೋಲಿಸಿದ್ದನು. ಅಷ್ಟೇ ಅಲ್ಲದೆ, ಬಾಂಗ್ಲಾದೇಶದ ಅಭಿವೃದ್ಧಿಯನ್ನು ಭಾರತದೊಂದಿಗೆ ಹೋಲಿಸಿದ್ದನು. ಅಷ್ಟೇ ಅಲ್ಲದೆ, ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿಗರನ್ನು ಅಂಧ ಭಕ್ತರೆಂದು ಕರೆದು ಟಾರ್ಗೆಟ್ ಮಾಡಿದ್ದನು. ಧ್ರುವ ರಾಠಿ 2020ರಲ್ಲಿ ಇದನ್ನು ಪೋಸ್ಟ್ ಮಾಡಿದ್ದು ನಂತರ ಅದನ್ನು ಡಿಲೀಟ್ ಮಾಡಿದ್ದನು.
ಇದೀಗ ಬಾಂಗ್ಲಾದೇಶದ ಬಿಕ್ಕಟ್ಟಿನ ಪರಿಸ್ಥಿತಿಯ ನಂತರ, ಆತನ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಧ್ರುವ ರಾಠಿ ಬಾಂಗ್ಲಾದೇಶವನ್ನು ಅದರ ಅಭಿವೃದ್ಧಿ ಮತ್ತು ಸಂತೋಷದ ಸೂಚ್ಯಂಕಕ್ಕಾಗಿ ಹೊಗಳಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ರೀ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಶತಮಾನದ ಜೋಕರ್ ಎಂಬ ಶೀರ್ಷಿಕೆ ನೀಡಿದ್ದಾರೆ.
ಶೆಹಜಾದ್ ಪೂನಾವಾಲಾ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಈ ವೀಡಿಯೊ ನಾಲ್ಕು ವರ್ಷಗಳಷ್ಟು ಹಳೆಯದ್ದು, ಆ ಸಮಯದಲ್ಲಿ ಬಾಂಗ್ಲಾದೇಶದ ಸ್ಥಿತಿ ಉತ್ತಮವಾಗಿತ್ತು. ಅದಕ್ಕಾಗಿ ಅದನ್ನು ವಿಡಿಯೋ ಮಾಡಿ ಹೇಳಿದ್ದೆ ಎಂದು ಧ್ರುವ ರಾಠಿ ಸ್ಪಷ್ಟನೆ ನೀಡಿದ್ದಾನೆ. ಅಲ್ಲದೆ ಈ ವಿಡಿಯೋವನ್ನು ಸಮಯಕ್ಕನುಗುಣವಾಗಿ ಹಂಚಿಕೊಳ್ಳುವ ಮೂಲಕ ಮತ್ತು ನಿಮ್ಮ ಅನುಯಾಯಿಗಳನ್ನು ದಾರಿ ತಪ್ಪಿಸುವ ಮೂಲಕ ನಿಮ್ಮ ಸ್ವಂತ ಮೂರ್ಖತನವನ್ನು ಸಾಬೀತುಪಡಿಸುತ್ತಿದ್ದೀರಿ ಎಂದು ರಾಠಿ ಟ್ವೀಟ್ ಮಾಡಿದ್ದಾನೆ.