ರಕ್ಷಣಾ ಕಾರ್ಯಾಚರಣೆ ಚಿತ್ರ 
ದೇಶ

ವಯನಾಡು ಭೂಕುಸಿತ: 11 ದಿನಗಳ ನಂತರ ನಾಲ್ವರ ಮೃತ ದೇಹ ಪತ್ತೆ; ಗೂಂದಲ ಸೃಷ್ಟಿಸಿದ ನಿಗೂಢ ಸದ್ದು!

ವಯನಾಡು ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ಕೆಲವು ಸ್ಫೋಟಗಳು ವರದಿಯಾಗಿವೆ. ವಯನಾಡಿನ ಜಮ್ಶೀದ್ ಪ್ರಕಾರ, ಬೆಳಿಗ್ಗೆ 10.45 ರ ಸುಮಾರಿಗೆ ಸ್ಫೋಟಗಳು ವರದಿಯಾಗಿವೆ.

ಪುಂಚಿರಿ ಮಟ್ಟಂ: ವಿನಾಶಕಾರಿ ಭೂಕುಸಿತಕ್ಕೆ ತುತ್ತಾಗಿರುವ ಕೇರಳದ ವಯನಾಡಿನಲ್ಲಿ 11 ದಿನಗಳ ಬಳಿಕ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಸೂಚಿಪಾರ ಮತ್ತು ಕಂಠಪಾರ ಜಲಪಾತಗಳ ನಡುವಿನ ಪ್ರದೇಶದಿಂದ ವಶಕ್ಕೆ ಪಡೆಯಲಾದ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಅವುಗಳನ್ನು ಏರ್ ಲಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಸೇನೆ ಶೋಧ ಕಾರ್ಯ ಮುಗಿಸಿ ವಾಪಸ್ಸಾಗಿದೆ. ಆದರೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆ, ಪೊಲೀಸರು ಮತ್ತು ಸ್ವಯಂಸೇವಕರು ಭೂ ಕುಸಿತ ಪೀಡಿತ ಪ್ರದೇಶದಲ್ಲಿ ಶೋಧವನ್ನು ಮುಂದುವರೆಸಿದ್ದಾರೆ. ಶುಕ್ರವಾರ ಪುಂಚಿರಿ ಮಟ್ಟಂ ಮತ್ತಿತರ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.

ಪುಂಚಿರಿ ಮಟ್ಟಂನಲ್ಲಿ ಶೋಧ ಕಾರ್ಯಕ್ಕೆ ಅರ್ಥ್ ಮೂವರ್ಸ್ ನೆರವು ನೀಡುತ್ತಿದ್ದಾರೆ. ಜುಲೈ 30 ರಂದು ದೇವರನಾಡು ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಇಲ್ಲಿಯವರೆಗೆ ಸುಮಾರು 230 ಜನರು ಬಲಿಯಾಗಿದ್ದಾರೆ.

ಅಂಬಲವಾಯಲ್‌ನಲ್ಲಿ ನಿಗೂಢ ಸದ್ದು? ಈ ಮಧ್ಯೆ ವಯನಾಡು ಜಿಲ್ಲೆಯ ಅಂಬಲವಾಯಲ್ ಪ್ರದೇಶದಲ್ಲಿ ಕೆಲವು ಸ್ಫೋಟಗಳು ವರದಿಯಾಗಿವೆ. ವಯನಾಡಿನ ಜಮ್ಶೀದ್ ಪ್ರಕಾರ, ಬೆಳಿಗ್ಗೆ 10.45 ರ ಸುಮಾರಿಗೆ ಸ್ಫೋಟಗಳು ವರದಿಯಾಗಿವೆ.

ಭೂಮಿಯ ಕೆಳಗಿನಿಂದ ನಿಗೂಢವಾದ ಸದ್ದು ಕೇಳಿಸಿತು ಎಂದು ಸ್ಥಳೀಯ ಜನರು ಹೇಳಿದರು. ಇದು ದೃಢಪಡದೆ ಜನರಲ್ಲಿ ಗೊಂದಲ ಮೂಡಿಸಿದ್ದು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಅನಪಾರ, ತಜತುವಾಯಲ್ ಮತ್ತು ಎಡಕ್ಕಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಂಬಲವಾಯಲ್ ಜಿಎಲ್‌ಪಿ ಶಾಲೆಗೆ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ರೈತರ ನೆರವಿಗೆ ಧಾವಿಸಿದ ಕೇಂದ್ರ; MSP ಅಡಿ 9.67 ಲಕ್ಷ ಟನ್ ತೊಗರಿ ಖರೀದಿಸಲು ಒಪ್ಪಿಗೆ

ವ್ಯಾಪಾರ ಒಪ್ಪಂದ ಮಾತುಕತೆ ಪುನರಾರಂಭವಾಗುತ್ತಿದ್ದಂತೆ ಅಮೆರಿಕದಿಂದ ಮಿಶ್ರ ಪ್ರತಿಕ್ರಿಯೆ

Goa nightclub fire: ಥೈಲ್ಯಾಂಡ್ ನಲ್ಲಿ ನೈಟ್ ಕ್ಲಬ್ ಮಾಲೀಕರಾದ ಸೈರಬ್- ಗೌರವ್ ಲುತ್ರಾ ಸೋದರರ ಬಂಧನ

ಹೈಕೋರ್ಟ್‌ನಲ್ಲಿ ಮುಟ್ಟಿನ ರಜೆ ಸಮರ್ಥಿಸಿಕೊಂಡ ಸರ್ಕಾರ; ವಿಚಾರಣೆ ಜನವರಿ 20 ಕ್ಕೆ ಮುಂದೂಡಿಕೆ

ಕೇಂದ್ರ ಅರಣ್ಯ ಇಲಾಖೆಯಿಂದ ಸಿಗದ ಅನುಮತಿ: ಎತ್ತಿನ ಹೊಳೆ ಯೋಜನೆ ಮತ್ತಷ್ಟು ವಿಳಂಬ

SCROLL FOR NEXT