ಪ್ರವಾಹ (ಸಂಗ್ರಹ ಚಿತ್ರ) online desk
ದೇಶ

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಗೆ ಭೂಕುಸಿತ, 120 ರಸ್ತೆಗಳು ಬಂದ್!

ಶುಕ್ರವಾರ ಸಂಜೆಯಿಂದ ನಹಾನ್ (ಸಿರ್ಮೌರ್) ನಲ್ಲಿ ಅತಿ ಹೆಚ್ಚು ಅಂದರೆ, 168.3 ಮಿಮೀ ಮಳೆಯಾಗಿದ್ದು, ಸಂಧೋಳೆಯಲ್ಲಿ 106.4 ಮಿಮೀ, ನಗ್ರೋಟಾ ಸೂರಿಯನ್‌ನಲ್ಲಿ 93.2 ಮಿಮೀ, ಧೌಲಕುವಾನ್‌ನಲ್ಲಿ 67 ಮಿಮೀ, ಜುಬ್ಬರಹಟ್ಟಿಯಲ್ಲಿ 53.2 ಮಿಮೀ ಮತ್ತು ಕಂದಗಹಟ್ಟಿಯಲ್ಲಿ 45.6 ಮಿಮೀ ಮಳೆಯಾಗಿದೆ.

ಡೆಹ್ರಾಡೂನ್: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿರುವ ಪರಿಣಾಮ ಭೂಕುಸಿತ, ಪ್ರವಾಹ ಉಂಟಾಗಿದ್ದು, 120 ರಸ್ತೆಗಳು ಬಂದ್ ಆಗಿವೆ.

ಪ್ರಾದೇಶಿಕ ಹವಾಮಾನ ಇಲಾಖೆಯ ಮಾಹಿತಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಆ.16 ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಶುಕ್ರವಾರ ಸಂಜೆಯಿಂದ ನಹಾನ್ (ಸಿರ್ಮೌರ್) ನಲ್ಲಿ ಅತಿ ಹೆಚ್ಚು ಅಂದರೆ, 168.3 ಮಿಮೀ ಮಳೆಯಾಗಿದ್ದು, ಸಂಧೋಳೆಯಲ್ಲಿ 106.4 ಮಿಮೀ, ನಗ್ರೋಟಾ ಸೂರಿಯನ್‌ನಲ್ಲಿ 93.2 ಮಿಮೀ, ಧೌಲಕುವಾನ್‌ನಲ್ಲಿ 67 ಮಿಮೀ, ಜುಬ್ಬರಹಟ್ಟಿಯಲ್ಲಿ 53.2 ಮಿಮೀ ಮತ್ತು ಕಂದಗಹಟ್ಟಿಯಲ್ಲಿ 45.6 ಮಿಮೀ ಮಳೆಯಾಗಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಳೆಯಿಂದಾಗಿ 44 ವಿದ್ಯುತ್ ಮತ್ತು 67 ನೀರು ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ. ಬಲವಾದ ಗಾಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದರಿಂದ ತೋಟಗಳು, ಬೆಳೆಗಳು, ದುರ್ಬಲ ಮತ್ತು 'ಕಚ್ಚ' ಮನೆಗಳಿಗೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್