ವಿದೇಶಾಂಗ ಸಚಿವ ಎಸ್ ಜೈಶಂಕರ್ 
ದೇಶ

ಮಾಲ್ಡೀವ್ಸ್ ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರ, ಸಂಬಂಧ ಉತ್ತಮಗೊಳಿಸಲು ಎಲ್ಲ ಪ್ರಯತ್ನ: S Jaishankar

ಮಾಲ್ದೀವ್ಸ್‌ನಲ್ಲಿ ಸುಮಾರು 27 ಸಾವಿರ ಭಾರತೀಯರು ಇದ್ದು, ಇವರು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಾಲೆ: ಮಾಲ್ಡೀವ್ಸ್ ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿದ್ದು, ಸಂಬಂಧ ಉತ್ತಮಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೇಳಿದ್ದಾರೆ.

ಮಾಲ್ದೀವ್ಸ್‌ಗೆ ತಮ್ಮ ಮೂರು ದಿನಗಳ ಭೇಟಿ ಬಗ್ಗೆ ಮಾಲೆಯಲ್ಲಿ ಮಾತನಾಡಿದ ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್, 'ಮಾಲ್ದೀವ್ಸ್‌ ಭಾರತದ ನೆರೆಯ ರಾಷ್ಟ್ರವಷ್ಟೇ ಅಲ್ಲ. ಅದರೊಂದಿಗಿನ ಭಾರತದ ಸಂಬಂಧ ವಿಶೇಷವಾದದ್ದಾಗಿದೆ. ಆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಭಾರತ ನಡೆಸುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಮಹಾಸಾಗರದ ರಾಷ್ಟ್ರಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ. ನಮಗೆ ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪ್ರಮುಖ ಪಾಲುದಾರ. ಇದು ನಮ್ಮ ನೈಬರ್‌ಹುಡ್ ಫಸ್ಟ್ ನೀತಿಯ ಹೃದಯಭಾಗದಲ್ಲಿದೆ. ಆದ್ದರಿಂದ ನಮ್ಮ ಎರಡು ದೇಶಗಳ ನಡುವಿನ ಸಹಕಾರವು ಸಾಂಪ್ರದಾಯಿಕ ಪಾತ್ರವನ್ನು ಮೀರಿ ಸಾಗಿದೆ ಎಂಬುದು ಬಹಳ ಸ್ವಾಭಾವಿಕವಾಗಿದೆ. ಇಂದು ನಿಜವಾಗಿಯೂ ಆಧುನಿಕ ಪಾಲುದಾರಿಕೆಯಾಗಲು ಭಾರತ ಬಯಸುತ್ತಿದೆ. ‘ಸಾಗರ್‌’ ಎಂಬ ಯೋಜನೆಯನ್ನು ಭಾರತ ಕೈಗೊಂಡಿದೆ.

1988ರ ನವೆಂಬರ್‌ನಲ್ಲಿ ಭಾರತ ಇಲ್ಲಿ ಕೈಗೊಂಡ ಕಾರ್ಯಕ್ರಮಗಳು, ಕೊಡುಗೆಗಳನ್ನು, 2004ರ ಸುನಾಮಿ ಸಂದರ್ಭದಲ್ಲಿ ಮಾಲೆಯಲ್ಲಿ ಎದುರಾದ ನೀರಿನ ಸಮಸ್ಯೆಗೆ ಭಾರತದ ಪರಿಹಾರ ಕುರಿತು ಮಾಲ್ದೀವ್ಸ್‌ನ ಹಲವರು ಗಮನಕ್ಕೆ ತಂದರು. ಇದು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಗೆ ಸಹಕಾರಿ ಎಂದು ಜೈಶಂಕರ್ ಹೇಳಿದ್ದಾರೆ.

'ಭಾರತೀಯ ಮೂಲದವರು ಜಗತ್ತಿನ ಎಲ್ಲಾ ಕಡೆ ಇದ್ದಾರೆ. ಮಾಲ್ದೀವ್ಸ್‌ನಲ್ಲೂ ಭಾರತೀಯರಿದ್ದು, ಅವರ ಹಿತ ಕಾಯಲು ಭಾರತ ಸರ್ಕಾರ ಸದಾ ಬದ್ಧವಾಗಿದೆ. ಮಾಲ್ದೀವ್ಸ್‌ನಲ್ಲಿ ಸುಮಾರು 27 ಸಾವಿರ ಭಾರತೀಯರು ಇದ್ದು, ಇವರು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ 28 ದ್ವೀಪಗಳನ್ನು ಒಳಗೊಂಡ ಮಾಲ್ದೀವ್ಸ್‌ನಲ್ಲಿ ಭಾರತ ಕೈಗೊಂಡ 110 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತದ ನೀರು ಮತ್ತು ನೈರ್ಮಲ್ಯ ಯೋಜನೆಗೆ ಜೈಶಂಕರ್ ಚಾಲನೆ ನೀಡಿದ್ದು, ಇದು ದೇಶದ ಶೇ 7ರಷ್ಟು ಜನಸಂಖ್ಯೆಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಮುಯಿಝು ಸರ್ಕಾರ ಬಂದ ಬಳಿಕ ಭಾರತ-ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು

ಮಾಲ್ಡೀವ್ಸ್ ನಲ್ಲಿ ಮುಯಿಝು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ನಂತರ ಭಾರತ ಹಾಗೂ ಮಾಲ್ದೀವ್ಸ್‌ ಸಂಬಂಧ ಹಳಸಿತ್ತು. ಬಳಿಕ ಏರ್ಪಟ್ಟ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಭಾರತದಲ್ಲಿ ಹೆಚ್ಚಾದ ಮಾಲ್ಡೀವ್ಸ್ ವಿರೋಧಿ ಅಲೆಯ ಬಿಸಿಯಿಂದಾಗಿ ಮೋದಿ ವಿರುದ್ಧ ಹೇಳಿಕೆ ನೀಡಿದ ಮೂರು ಸಚಿವರನ್ನು ಮಾಲ್ದೀವ್ಸ್ ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಮಾಲ್ದೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ದಕ್ಷಿಣ ಏಷ್ಯಾದ ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಭಾರತ ಕ್ರಮ ಕೈಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭೇಟಿ ನೀಡಿದರು.

ಇದು ಮಾಲ್ಡೀವ್ಸ್ ಪ್ರವಾಸೋಧ್ಯಮದ ಮೇಲೆ ಅಡ್ಡಪರಿಣಾಮ ಬೀರಿತ್ತು. ಇದಾದ ನಂತರ ಮಾಲ್ದೀವ್ಸ್‌ನಲ್ಲಿದ್ದ ಭಾರತ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಯಿಝು ಅವರು ಮೇ 10ರ ಗಡುವು ನೀಡಿದ್ದರು. ಅದರಂತೆಯೇ ಭಾರತದ ಸೈನಿಕರು ಸ್ವದೇಶಕ್ಕೆ ಮರಳಿದ್ದರು. ಇವು ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದ್ದವು. ಬಳಿಕ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಮುಯಿಝು ಅವರಿಗೂ ಭಾರತ ಆಹ್ವಾನ ನೀಡಿತ್ತು. ಮುಯಿಝು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲೂ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT