ವೈದ್ಯೆ ಮೇಲೆ ಅತ್ಯಾಚಾರ ಹತ್ಯೆ ಖಂಡಿಸಿ ಪ್ರತಿಭಟನೆ  
ದೇಶ

ದೇಶಾದ್ಯಂತ ಇಂದು ವೈದ್ಯರ ಪ್ರತಿಭಟನೆ-ಮುಷ್ಕರ: ಯಾವ ಸೇವೆಗಳು ಲಭ್ಯ, ಯಾವುದು ಇಲ್ಲ ಇಲ್ಲಿದೆ ಮಾಹಿತಿ...

ದೇಶದ ವೈದ್ಯಕೀಯ ಸಿಬ್ಬಂದಿಗಳ ಅತಿದೊಡ್ಡ ಸಂಘಟನೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA), ಇಂದು ಬೆಳಗ್ಗೆಯಿಂದ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ. ದೇಶದ ಅತಿದೊಡ್ಡ ಆಸ್ಪತ್ರೆಗಳು ಸೇರಿದಂತೆ ಹೆಚ್ಚಿನ ಆಸ್ಪತ್ರೆಗಳ ಸೇವೆಗಳಿಗೆ ಇಂದು ವ್ಯತ್ಯಯವುಂಟಾಗಲಿದೆ.

ಕೋಲ್ಕತ್ತಾ/ನವದೆಹಲಿ: ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತರಬೇತಿ ನಿರತ ವೈದ್ಯೆಯ ಅಮಾನುಷ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಆಕ್ರೋಶ ತೀವ್ರವಾಗಿದೆ. ವೈದ್ಯರು ಆಸ್ಪತ್ರೆಯ ಸೇವೆಗಳನ್ನು ಪ್ರಮುಖವಾಗಿ ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರು ದೇಶಾದ್ಯಂತ ಇಂದು ಶನಿವಾರ ಬೆಳಗ್ಗೆ 6 ಗಂಟೆಯಿಂದ ನಾಳೆ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಪ್ರತಿಭಟನೆ ಮತ್ತು ಮುಷ್ಕರ ನಡೆಸುತ್ತಿದ್ದಾರೆ.

ದೇಶದ ವೈದ್ಯಕೀಯ ಸಿಬ್ಬಂದಿಗಳ ಅತಿದೊಡ್ಡ ಸಂಘಟನೆಯಾದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ​​(IMA), ಇಂದು ಬೆಳಗ್ಗೆಯಿಂದ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ. ದೇಶದ ಅತಿದೊಡ್ಡ ಆಸ್ಪತ್ರೆಗಳು ಸೇರಿದಂತೆ ಹೆಚ್ಚಿನ ಆಸ್ಪತ್ರೆಗಳ ಸೇವೆಗಳಿಗೆ ಇಂದು ವ್ಯತ್ಯಯವುಂಟಾಗಲಿದೆ.

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು ಘಟನೆ ನಡೆದ ಆಗಸ್ಟ್ 9ರ ನಂತರ ರಾಷ್ಟ್ರದಾದ್ಯಂತ ವೈದ್ಯಕೀಯ ಸಮುದಾಯದಿಂದ ವ್ಯಾಪಕವಾದ ಪ್ರತಿಭಟನೆ ಮತ್ತು ಮುಷ್ಕರಗಳನ್ನು ಹುಟ್ಟುಹಾಕಿದೆ.

ಇಂದು ಏನಿರಲಿದೆ, ಇರಲ್ಲ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಇಂದು ಬೆಳಗ್ಗೆ 6 ರಿಂದ ನಾಳೆ ಭಾನುವಾರ ಬೆಳಿಗ್ಗೆ 6 ರವರೆಗೆ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿದೆ.

ಈ ವಾರಾಂತ್ಯದಲ್ಲಿ ಹೆಚ್ಚಿನ ಆಸ್ಪತ್ರೆ ವಿಭಾಗಗಳು ಮುಚ್ಚಲ್ಪಡುತ್ತವೆ. ಹೊರರೋಗಿ ವಿಭಾಗಗಳು (OPDs) ಮತ್ತು ಕೆಲವು ಆಯ್ದ ಶಸ್ತ್ರಚಿಕಿತ್ಸೆ ಕೊಠಡಿಗಳು ಮುಚ್ಚಲ್ಪಡುತ್ತವೆ.

  • ಅಗತ್ಯ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಇದು ತುರ್ತು ಆರೈಕೆ ಮತ್ತು ನಿರ್ಣಾಯಕ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ, ಇದು ಎಂದಿನಂತೆ ಮುಂದುವರಿಯುತ್ತದೆ.

  • ಯಾವುದೇ ತುರ್ತು ವೈದ್ಯಕೀಯ ಅಗತ್ಯಗಳನ್ನು ನಿರ್ವಹಿಸಲು ಅಪಘಾತ ಸೇವೆಗಳು ಲಭ್ಯವಿರುತ್ತವೆ.

  • ಮುಷ್ಕರವು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ಆಧುನಿಕ ಔಷಧೀಯ ವೈದ್ಯರು ಕೆಲಸ ಮಾಡುವ ಎಲ್ಲಾ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆ.

  • ಅಮೃತಸರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿರುವ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್, ಹೊರರೋಗಿ ವಿಭಾಗಗಳು (OPD ಗಳು), ಆಪರೇಟಿಂಗ್ ಥಿಯೇಟರ್‌ಗಳು (OTs) ಮತ್ತು ವಾರ್ಡ್‌ಗಳು ಸೇರಿದಂತೆ ಎಲ್ಲಾ ಅನಿವಾರ್ಯವಲ್ಲದ ಮತ್ತು ಆಯ್ದ ಆಸ್ಪತ್ರೆ ಸೇವೆಗಳನ್ನು ಆಗಸ್ಟ್ 16 ರಿಂದ ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸುವುದಾಗಿ ಘೋಷಿಸಲಾಗಿದೆ.

  • ದೆಹಲಿಯಾದ್ಯಂತ ಇರುವ ನಿವಾಸಿ ವೈದ್ಯರ ಸಂಘಗಳು ನಿನ್ನೆ ದೆಹಲಿಯ ನಿರ್ಮಾಣ್ ಭವನದಿಂದ ಮಧ್ಯಾಹ್ನ 2 ಗಂಟೆಗೆ ಜಂಟಿ ಪ್ರತಿಭಟನಾ ಮೆರವಣಿಗೆ ಸಾಗಿದ್ದಾರೆ.

  • ಅತ್ಯಾಚಾರ-ಕೊಲೆ ಘಟನೆಯನ್ನು ಪ್ರತಿಭಟಿಸಲು ದೆಹಲಿ ವೈದ್ಯಕೀಯ ಸಂಘ (DMA) ನಿನ್ನೆ ಸಂಜೆ 5 ಗಂಟೆಗೆ ಇಂಡಿಯಾ ಗೇಟ್‌ನಲ್ಲಿ ಮೋಂಬತ್ತಿ ಮೆರವಣಿಗೆ ಆಯೋಜಿಸಿದೆ.

  • ಘಟನೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರ ಅಸೋಸಿಯೇಷನ್ ​​ಆಫ್ ರೆಸಿಡೆಂಟ್ ಡಾಕ್ಟರ್ಸ್ (MARD) ನಿನ್ನೆ ಮುಂಬೈನ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿವೆ.

  • ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ನಿನ್ನೆ ಸಿಲಿಗುರಿಯಲ್ಲಿ 12 ಗಂಟೆಗಳ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದಿಂದ ನಗರದಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗಿದ್ದು, ಮೊನ್ನೆ ಗುರುವಾರ ಸಂಜೆ 6 ಗಂಟೆಯಿಂದಲೇ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಇಂದು ಯಾವೆಲ್ಲಾ ಸೇವೆಗಳು ಇರುತ್ತವೆ?

ತುರ್ತು ಚಿಕಿತ್ಸಾ ಸೇವೆ

ಮೆಡಿಕಲ್ ಶಾಪ್ಸ್

ಇನ್ ಪೇಷೆಂಟ್ ಸೇವೆ

ಹೆರಿಗೆ, ಎಮರ್ಜೆನ್ಸಿ ಸರ್ಜರಿ

ಯಾವೆಲ್ಲ ಸೇವೆಗಳು ಲಭ್ಯವಿಲ್ಲ?

ಹೊರರೋಗಿ ವಿಭಾಗ

ಡಯಾಲಿಸಿಸ್

ಕ್ಲಿನಿಕ್ ಸೇವೆ

ಮಕ್ಕಳ ಹೊರರೋಗ ವಿಭಾಗ

ಡೆಂಟಲ್ ಸರ್ವಿಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT