ಮುಂಬೈ: ನಿನ್ನೆ ಶುಕ್ರವಾರ ಸಾಯಂಕಾಲ ಮುಂಬೈನ ಅಟಲ್ ಸೇತುದಲ್ಲಿ ಮಹಿಳೆಯೊಬ್ಬರು ಸಮುದ್ರಕ್ಕೆ ಜಿಗಿಯಲು ಹೋದಾಗ ಕ್ಯಾಬ್ ಚಾಲಕ ಮತ್ತು ಸಮಯಕ್ಕೆ ಬಂದ ನ್ವ ಶೆವಾ ಘಟಕದ ಸಂಚಾರ ಪೊಲೀಸರ ರಕ್ಷಣೆಯಿಂದ ಜೀವ ಕಾಪಾಡಿದ ಘಟನೆ ನಡೆದಿದೆ.
ಸಿಸಿಟಿವಿಯಲ್ಲಿ ದಾಖಲಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸಮುದ್ರಕ್ಕೆ ಜಿಗಿಯಲು ಯತ್ನಿಸಿದ ಮಹಿಳೆಯನ್ನು ತಕ್ಷಣ ಎಚ್ಚರಗೊಂಡ ಚಾಲಕ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಿಸಿದ್ದಾರೆ.
ಸಿಸಿಟಿವಿಯಲ್ಲಿ ಮಹಿಳೆ ಕಾರಿನಿಂದ ಇಳಿದು ಅಟಲ್ ಸೇತುವೆಯ ಸುರಕ್ಷತಾ ತಡೆಗೋಡೆಯ ಮೇಲೆ ಕುಳಿತಿರುವ ಕುಳಿತು ಕೆಳಗಿಳಿಯುತ್ತಿದ್ದಾರೆ. ಕಾರು ಚಾಲಕ ತಕ್ಷಣ ಆಕೆಯ ಕೈಗಳನ್ನು ಹಿಡಿದೆಳೆಯುತ್ತಿದ್ದಾರೆ. ಕಾರು ಚಾಲಕನ ಕೈಯಿಂದ ತಪ್ಪಿಸಿಕೊಂಡು ಮಹಿಳೆ ಸಮುದ್ರಕ್ಕೆ ಸೇತುವೆಯಿಂದ ಜಿಗಿಯಲು ಪ್ರಯತ್ನಿಸುತ್ತಾರೆ.
ಮುಂಬೈ-ಟ್ರಾನ್ಸ್ ಹಾರ್ಬರ್ ಲಿಂಕ್(MTHL) ಮಹಿಳೆ ಈ ಕೃತ್ಯವೆಸಗಲು ಮುಂದಾಗಿದ್ದು, ಈ ವೇಳೆ ತಕ್ಷಣಕ್ಕೆ ಅಲ್ಲಿಗೆ ಬಂದ ಸಂಚಾರಿ ಪೊಲೀಸರು ಕಾಪಾಡಿದ್ದಾರೆ. ಮುಂಬೈಯ ಮುಲುಂಡ್ ನಿವಾಸಿ ತನ್ನ ಆಧ್ಯಾತ್ಮಿಕ ಗುರುವಿನ ಸಲಹೆಯ ಮೇರೆಗೆ ದೇವರ ಚಿತ್ರಗಳನ್ನು ಸಮುದ್ರಕ್ಕೆ ಬೀಳಿಸಲು ಎಂಟಿಹೆಚ್ ಎಲ್ ನ ಒಂದು ವಿಭಾಗದ ಉದ್ದಕ್ಕೂ ರಕ್ಷಣಾತ್ಮಕ ರೇಲಿಂಗ್‌ಗಳ ಮೇಲೆ ಹತ್ತುವ ಅಜಾಗರೂಕ ನಿರ್ಧಾರವನ್ನು ತೆಗೆದುಕೊಂಡರು. ಮಹಿಳೆ ಐರೋಲಿಗೆ ಪ್ರಯಾಣಿಸಲು ಮುಲುಂಡ್‌ನಿಂದ ಕ್ಯಾಬ್ ನ್ನು ಬಾಡಿಗೆಗೆ ಪಡೆದು ಕ್ಯಾಬ್ ಹತ್ತಿದ ನಂತರ MTHL ಕಡೆಗೆ ಹೋಗೋಣ ಎಂದು ಚಾಲಕನಿಗೆ ಹೇಳಿದರು.
ಅಟಲ್ ಸೇತುವೆ ಬಳಿ ಬಂದ ಕೂಡಲೇ ಕಾರಿನಿಂದ ಇಳಿದು ರೇಲಿಂಗ್ ಮೇಲೆ ಹಾರಿದಾಗ ಟೋಲ್ ಸಿಬ್ಬಂದಿಯ ಗಮನಕ್ಕೆ ಬಂತು. ಅವರು ತಕ್ಷಣ ಟ್ರಾಫಿಕ್ ಗಸ್ತು ತಿರುಗುವ ಘಟಕಕ್ಕೆ ಸಂದೇಶ ಕಳುಹಿಸಿದರು ಎಂದು ನ್ಹವಾ ಶೇವಾ ಘಟಕದ ಹಿರಿಯ ಇನ್ಸ್‌ಪೆಕ್ಟರ್ ಅಂಜುಮ್ ಬಾಗವಾನ್ ಹೇಳಿದರು.
ಕಾನ್ ಸ್ಟೇಬಲ್ ಗಳಾದ ಲಲಿತ್ ಅಮರಶೆಟ್, ಕಿರಣ್ ಮ್ಹಾತ್ರೆ ಮತ್ತು ಯಶ್ ಸೋನಾವಾನೆ ಅವರನ್ನು ಒಳಗೊಂಡ ತಂಡವು ಸ್ಥಳಕ್ಕೆ ಆಗಮಿಸಿದಾಗ ಅವರು ಇನ್ನೊಂದು ಬದಿಯಲ್ಲಿ ಅನಿಶ್ಚಿತವಾಗಿ ರೇಲಿಂಗ್ ನ್ನು ಹಿಡಿದಿರುವುದನ್ನು ಕಂಡರು. ಕ್ಯಾಬ್ ಡ್ರೈವರ್ ಸಂಜಯ್ ದ್ವಾರಕಾ ಯಾದವ್ ಸಹಾಯ ಮಾಡಿ ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದರು.
ಪೊಲೀಸರಿಗೆ ಎಚ್ಚರಿಕೆ ನೀಡಿದಾಗ ಮಹಿಳೆ ಆತ್ಮಹತ್ಯೆ ಎಂದು ಭಾವಿಸಿ ಸ್ಥಳಕ್ಕೆ ಬಂದಾಗಲೇ ವಾಸ್ತವ ಬಹಿರಂಗವಾಯಿತು. ಆಕೆ ಮಾನಸಿಕ ಅಸ್ವಸ್ಥೆ ಎಂದು ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪುಣೆಯಲ್ಲಿದ್ದ ಆಕೆಯ ಪತಿಗೆ ಪೊಲೀಸರು ಮಾಹಿತಿ ನೀಡಿದರು.