ರಾಂಚಿ: ಜಾರ್ಖಂಡ್‌ನ ಜಮ್‌ಶೆಡ್‌ಪುರದಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದ್ದ ಎರಡು ಆಸನಗಳ ತರಬೇತಿ ವಿಮಾನದಲ್ಲಿದ್ದ ಪೈಲಟ್‌ನ ಶವ ಗುರುವಾರ ಚಾಂಡಿಲ್ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಒಡೆತನದ ಸೆಸ್ನಾ 152 ಎಂಬ ತರಬೇತುದಾರ ವಿಮಾನ ಮಂಗಳವಾರ ಬೆಳಗ್ಗೆ ಸೋನಾರಿ ಏರೋಡ್ರೋಮ್‌ನಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿದೆ. ಬಳಿಕ ಜಲಾಶಯ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಮೆಗಾ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಮಾನ ಪತನಗೊಂಡಿರುವ ಶಂಕೆಯಿರುವ ಜಲಾಶಯದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಇಂದು ಬೆಳಗ್ಗೆ ಶವ ತೇಲುತ್ತಿರುವುದು ಪತ್ತೆಯಾಯಿತು. ಇದು ಸೆರೈಕೆಲಾ-ಖಾರ್ಸಾವನ್ ಜಿಲ್ಲೆಯ ಆದಿತ್ಯಪುರ ನಿವಾಸಿ ಟ್ರೈನಿ ಪೈಲಟ್ ಸುಭ್ರೋದೀಪ್ ದತ್ತಾ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಈ ಮಧ್ಯೆ ಭಾರತೀಯ ನೌಕಾಪಡೆಯ ತಂಡ ನಾಪತ್ತೆಯಾಗಿರುವ ವಿಮಾದ ಪತ್ತೆಯಾ ಸೇರಿಕೊಂಡಿದೆ. ನೌಕಾಪಡೆಯ 19 ಸದಸ್ಯರ ತಂಡವನ್ನು ವಿಶಾಖಪಟ್ಟಣದಿಂದ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ, ಎನ್‌ಡಿಆರ್‌ಎಫ್‌ನ ಆರು ಸದಸ್ಯರ ತಂಡವು ಅಣೆಕಟ್ಟಿನ ಜಲಾಶಯದಲ್ಲಿ ಗಂಟೆಗಳ ಕಾಲ ಶೋಧ ನಡೆಸಿತು. ವಿಮಾನವು ಅದರೊಳಗೆ ಅಪ್ಪಳಿಸಿತು ಎಂದು ಗ್ರಾಮಸ್ಥರು ಹೇಳಿಕೊಂಡ ನಂತರ ಜಲಾಶಯವನ್ನು ಶೋಧಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಸೆರೈಕೆಲಾ-ಖಾರ್ಸಾವನ್) ಮುಖೇಶ್ ಕುಮಾರ್ ಲುನಾಯತ್ ಹೇಳಿದ್ದಾರೆ.