ಪಾಯಲ್ ಮುಖರ್ಜಿ 
ದೇಶ

ಕೋಲ್ಕತ್ತಾ ವೈದ್ಯೆ ರೇಪ್-ಕೊಲೆ ಬೆನ್ನಲ್ಲೆ ಖ್ಯಾತ ನಟಿ ಪಾಯಲ್ ಕಾರಿನ ಮೇಲೆ ದಾಳಿ; ಹಲ್ಲೆಗೆ ಯತ್ನ, ವಿಡಿಯೋ!

ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ, ಅನೇಕ ಅನುಯಾಯಿಗಳು ಸಹಾಯಕ್ಕಾಗಿ ಕೋಲ್ಕತ್ತಾ ಪೊಲೀಸರಿಗೆ ನಟಿಯ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದ ಕೋಲ್ಕತ್ತಾ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ತಲುಪಿದೆ. ಆರೋಪಿ ಬೈಕ್ ಸವಾರನನ್ನು ಹಿಡಿದಿದ್ದಾರೆ.

ಖ್ಯಾತ ಬೆಂಗಾಲಿ ನಟಿಯೊಬ್ಬರ ಕಾರಿನ ಮೇಲೆ ಬೈಕ್ ಸವಾರನೊಬ್ಬ ದಾಳಿ ಮಾಡಿರುವ ಮತ್ತೊಂದು ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಬೈಕ್ ಸವಾರ ನಟಿ ಪಾಯಲ್ ಮುಖರ್ಜಿ ಅವರ ಕಾರಿನ ಗಾಜು ಒಡೆದು ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ದಕ್ಷಿಣ ಕೋಲ್ಕತ್ತಾದ ಸದರ್ನ್ ಅವೆನ್ಯೂದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ, ಬಂಗಾಳಿ ನಟಿ ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಪ್ರಾರಂಭಿಸಿ, ಇಡೀ ಘಟನೆಯನ್ನು ವಿವರಿಸಿದರು. ವೀಡಿಯೊದಲ್ಲಿ, ನಟಿ ತನ್ನ ಕಾರಿನ ಒಡೆದ ಗಾಜನ್ನು ತೋರಿಸುತ್ತಾ ಅಳುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ, ಕೋಲ್ಕತ್ತಾದ ಬೀದಿಗಳಲ್ಲಿ ಮಹಿಳೆಯರ ಸುರಕ್ಷತೆ ಎಲ್ಲಿದೆ ಎಂಬ ಪ್ರಶ್ನೆಯನ್ನು ಅವರು ಎತ್ತುತ್ತಿರುವುದು ಕಂಡುಬಂದಿದೆ. ಬೈಕ್ ಸವಾರ ಕಾರಿನ ಡೋರ್ ತೆರೆಯುವಂತೆ ಕೇಳಿದ ನಾನು ತೆರೆಯಲಿಲ್ಲ. ನಂತರ ಕಿಟಕಿ ಗಾಜು ಹೊಡೆದಿದ್ದಾನೆ. ಗಾಜಿನ ತುಂಡುಗಳು ನನ್ನ ಇಡೀ ದೇಹಕ್ಕೆ ಹೊಡೆದವು. ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ, ಅನೇಕ ಅನುಯಾಯಿಗಳು ಸಹಾಯಕ್ಕಾಗಿ ಕೋಲ್ಕತ್ತಾ ಪೊಲೀಸರಿಗೆ ನಟಿಯ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದ ಕೋಲ್ಕತ್ತಾ ಪೊಲೀಸರ ತಂಡ ತಕ್ಷಣ ಸ್ಥಳಕ್ಕೆ ತಲುಪಿದೆ. ಜೋಧ್‌ಪುರ ಪಾರ್ಕ್ ಬಳಿ ಕರ್ತವ್ಯ ನಿರತ ಪೊಲೀಸರು ಆರೋಪಿ ಬೈಕ್ ಸವಾರನನ್ನು ಹಿಡಿದಿದ್ದಾರೆ.

ಬೆಂಗಾಲಿ ಚಿತ್ರಗಳಲ್ಲದೆ, ಪಾಯಲ್ ದಕ್ಷಿಣದ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2017ರಲ್ಲಿ ಬೆಂಗಾಲಿ ಚಿತ್ರ 'ದೇಖ್ ಕಾಮೋ ಲಗೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ದಿ ಸೀವೇಜ್ ಆಫ್ ರಾಬಿನ್ ಹುಡ್, ಗೋಸುಂಬೆ, ಶ್ರೀರಂಗಪುರಂ, ಚೋಳ ಕಂತುಲ್ ಮತ್ತು ಮೈಕೆಲ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಸಂಜಯ್ ಮಿಶ್ರಾ ಅವರೊಂದಿಗೆ ಹಿಂದಿ ಚಿತ್ರ 'ವೋ ತೀನ್ ದಿನ್' ನಲ್ಲಿ ಕೆಲಸ ಮಾಡಿದ್ದರು.

ಘಟನೆ ಬಗ್ಗೆ ಪೊಲೀಸರು ಹೇಳಿದ್ದೇನು?

ನಟಿ ಪಾಯಲ್ ಮುಖರ್ಜಿ ಲೇಕ್ ಅವೆನ್ಯೂ ಮೂಲಕ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ತನ್ನ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿ ಬೈಕ್ ಸವಾರ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದನು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಆದರೆ ಪಾಯಲ್ ಮುಖರ್ಜಿ ನಿಲ್ಲಿಸಲಿಲ್ಲ, ಆದ್ದರಿಂದ ಆರೋಪಿ ಜೋಧ್‌ಪುರ ಪಾರ್ಕ್ ಪ್ರದೇಶದ ಬಳಿ ಕಾರನ್ನು ಬಲವಂತವಾಗಿ ನಿಲ್ಲಿಸಿದರು. ಆರೋಪಿ ಸಿಟ್ಟಿನಿಂದ ಕೂಗುತ್ತಾ ಬೈಕ್ ನಿಂದ ಇಳಿದು ಮುಷ್ಟಿಯಿಂದ ಕಾರಿನ ಗಾಜು ಒಡೆದಿದ್ದಾನೆ. ಆರೋಪಿ ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಎಂದು ಹೇಳಲಾಗಿದೆ.

ಘಟನೆಯ ನಂತರ ನಟಿ ಟೋಲಿಗಂಜ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದು, ಆರೋಪಿ ಸವಾರ ಎಂ.ಐ. ಕೋಲ್ಕತ್ತಾದ ಕಮಾಂಡ್ ಆಸ್ಪತ್ರೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ 39 ವರ್ಷದ ಅರಸನ್ ಬೆದರಿಸಿ, ಕಾರಿನ ಗಾಜು ಒಡೆದು ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಪೊಲೀಸರು ಸೆಕ್ಷನ್ 126(1)/74/79/324(2)/351(1) ಬಿಎನ್‌ಎಸ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT