ಜಲಗಾಂವ್: ನೇಪಾಳದಲ್ಲಿ 40 ಭಾರತೀಯ ಪ್ರಯಾಣಿಕರಿದ್ದ ಬಸ್ ನದಿಗೆ ಉರುಳಿಬಿದ್ದು ಸಂಭವಿಸಿದ ದುರಂತದಲ್ಲಿ ಮಹಾರಾಷ್ಟ್ರದ 25 ಜನರು ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಶನಿವಾರ ತಡರಾತ್ರಿ ಜಲಗಾಂವ್ ಗೆ ತರಲಾಯಿತು.
ಭಾರತೀಯ ವಾಯುಪಡೆಯ ವಿಮಾನದ ಮೂಲಕ ನೇಪಾಳದ ಭರತ್ ಪುರದಿಂದ ಜಲಾಗಾಂವ್ ಗೆ ಪಾರ್ಥಿವ ಶರೀರಗಳನ್ನು ಏರ್ ಲಿಫ್ಟ್ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್, ಎಲ್ಲಾರ ಮೃತದೇಹಗಳನ್ನು ತರಲಾಗಿದೆ. ಶೀಘ್ರದಲ್ಲೇ ಅವರ ನಿವಾಸಗಳಿಗೆ ಕೊಂಡೊಯ್ಯಲಾಗುವುದು. ಗಾಯಗೊಂಡವರು ಇನ್ನೂ ನೇಮಪಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರು ಐಸಿಯುನಲ್ಲಿದ್ದಾರೆ ಎಂದು ತಿಳಿಸಿದರು.
ಕಠ್ಮಂಡುವಿನಿಂದ 115 ಕಿಲೋಮೀಟರ್ ದೂರದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ 27 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದರು. ಉಳಿದ ಇಬ್ಬರ ಮೃತದೇಹಗಳನ್ನು ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ಗೆ ಕೊಂಡೊಯ್ಯಲಾಗಿದೆ.