ಲಡಾಖ್ ಕೇಂದ್ರಾಡಳಿತ ಪ್ರದೇಶ 
ದೇಶ

ಕೇಂದ್ರಾಡಳಿತ ಪ್ರದೇಶ Ladakh ನಲ್ಲಿ ಐದು ಹೊಸ ಜಿಲ್ಲೆಗಳ ರಚನೆ: ಕೇಂದ್ರ ಗೃಹ ಇಲಾಖೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ನಲ್ಲಿ ಮತ್ತೆ ಐದು ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದು, ಝನ್ಸ್ಕಾರ್, ದ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್ತಾಂಗ್ ಗಳು ಹೊಸ ಜಿಲ್ಲೆಗಳಾಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಅಮಿತ್ ಶಾ, ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ಲಡಾಖ್ ಅನ್ನು ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಅನುಸರಿಸಲು, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು MHA ನಿರ್ಧರಿಸಿದೆ.

ಹೊಸ ಜಿಲ್ಲೆಗಳಾದ ಝನ್ಸ್ಕರ್, ಡ್ರಾಸ್, ಶಾಮ್, ನುಬ್ರಾ ಮತ್ತು ಚಾಂಗ್‌ತಾಂಗ್. ಈ ಮೂಲಕ ಜನರಿಗೆ ಆಡಳಿತಾತ್ಮಕ ಪ್ರಯೋಜನಗಳನ್ನು ಅವರ ಮನೆ ಬಾಗಿಲಿಗೆ ಕೊಂಡೊಯ್ಯುಲಾಗುವುದು. ಲಡಾಖ್ ಜನರಿಗೆ ಹೇರಳವಾದ ಅವಕಾಶಗಳನ್ನು ಸೃಷ್ಟಿಸಲು ಮೋದಿ ಸರ್ಕಾರ ಬದ್ಧವಾಗಿದೆ" ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಲ್.ಕೆ ಅಡ್ವಾಣಿ ಹೊಗಳಿದ ಶಶಿ ತರೂರ್; ಅಂತರ ಕಾಯ್ದುಕೊಂಡ ಕಾಂಗ್ರೆಸ್

Bihar Polls 2025: ಯಾರಿಗೆ ಬಿಹಾರ? ಮತ್ತೆ ಮಹಿಳಾ ಮತದಾರರು ನಿರ್ಧರಿಸಲಿದ್ದಾರೆಯೇ?

RSS ದೇಣಿಗೆ ಕುರಿತು ಮೋಹನ್ ಭಾಗವತ್ ಗೆ 11 ಪ್ರಶ್ನೆ ಕೇಳಿದ ಸಚಿವ ಪ್ರಿಯಾಂಕ್ ಖರ್ಗೆ

Ironman Challenge: ಅಣ್ಣಾಮಲೈ ಭಾಗಿ; ಸತತ 2ನೇ ಬಾರಿಗೆ ಸಂಸದ ಸೂರ್ಯ ಐರನ್‌ಮ್ಯಾನ್ ಸಾಧನೆ!

ಕೂಡ್ಲಿಗಿ: ಏಳನೇ 'ಗ್ಯಾರಂಟಿ'ಯಾಗಿ ಕೆರೆಗಳಿಗೆ ನೀರು! ಡಿಸಿಎಂ ಡಿ.ಕೆ ಶಿವಕುಮಾರ್

SCROLL FOR NEXT