ಸಾಂದರ್ಭಿಕ ಚಿತ್ರ  
ದೇಶ

ರಾಜಸ್ತಾನ: ಜೋಧ್ ಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಬಾಲಕಿ ತನ್ನ ತಾಯಿ ಗದರಿಸಿದ್ದಾಳೆ ಎಂದು ಸಿಟ್ಟಿನಿಂದ ಕಳೆದ ಭಾನುವಾರ ಮನೆ ತೊರೆದಿದ್ದಳು. ಅದೇ ದಿನ ಸಂಜೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ ಪೊಲೀಸರಿಗೆ ಮೊನ್ನೆ ಸೋಮವಾರ ಸಂಜೆ ಮಾಹಿತಿ ಗೊತ್ತಾಗಿದೆ.

ಜೋಧ್ ಪುರ: ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಘಟನೆ ನಂತರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ತೀವ್ರ ವಿವಾದ, ಕೋಲ್ಕತ್ತಾದಲ್ಲಿ ಘರ್ಷಣೆ ನಂತರ ರಾಜಸ್ತಾನದ ಜೋಧ್‌ಪುರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿ ತನ್ನ ತಾಯಿ ಗದರಿಸಿದ್ದಾಳೆ ಎಂದು ಸಿಟ್ಟಿನಿಂದ ಕಳೆದ ಭಾನುವಾರ ಮನೆ ತೊರೆದಿದ್ದಳು. ಅದೇ ದಿನ ಸಂಜೆ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆದರೆ ಪೊಲೀಸರಿಗೆ ಮೊನ್ನೆ ಸೋಮವಾರ ಸಂಜೆ ಮಾಹಿತಿ ಗೊತ್ತಾಗಿದೆ.

ಪೊಲೀಸರ ಪ್ರಕಾರ, ಇಬ್ಬರು ವ್ಯಕ್ತಿಗಳು ಆಸ್ಪತ್ರೆಯ ಆವರಣದಲ್ಲಿ ಬಾಲಕಿಯನ್ನು ಒಂಟಿಯಾಗಿ ಕಂಡಿದ್ದಾರೆ. ಆಸ್ಪತ್ರೆಯ ಬಯೋಮೆಡಿಕಲ್ ತ್ಯಾಜ್ಯ ಡಂಪ್‌ಯಾರ್ಡ್‌ನ ಹಿಂದಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುತ್ತಾರೆ.

ಪ್ರತಾಪ್ ನಗರ ಸಹಾಯಕ ಕಮಿಷನರ್ ಅನಿಲ್ ಕುಮಾರ್ ಪ್ರಕಾರ, ಬಾಲಕಿ ಭಾನುವಾರ ಸಂಜೆ ತನ್ನ ತಾಯಿ ಜೊತೆ ಜಗಳ ಮಾಡಿಕೊಂಡು ಮನೆಬಿಟ್ಟು ಹೊರಬಂದಿದ್ದಾಳೆ. ಮನೆಯವರು ಅವಳನ್ನು ಹುಡುಕಿದ್ದಾರೆ. ಕಾಣದಿದ್ದಾಗ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ತನ್ನ ಮನೆಯಿಂದ ಹೊರಬಂದ ನಂತರ ಹುಡುಗಿ ಆಸ್ಪತ್ರೆಯೊಂದರ ಬಳಿ ಕುಳಿತಿದ್ದಳು. ಅಲ್ಲಿ ಇಬ್ಬರು ಯುವಕರು ಆಕೆಯನ್ನು ಒಬ್ಬಂಟಿಯಾಗಿ ಕಂಡು ಆಸ್ಪತ್ರೆಯ ಹಿಂಭಾಗದ ಡಂಪಿಂಗ್ ಯಾರ್ಡ್ ಗೆ ಬಲತ್ಕಾರದಿಂದ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಭಾನುವಾರ ಸಂಜೆಯೇ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಬಗ್ಗೆ ಕುಟುಂಬದವರು ದೂರು ನೀಡಿದ್ದರೂ ಬಾಲಕಿ ಪತ್ತೆಯಾಗಿರಲಿಲ್ಲ.

ಗಾಯಗೊಂಡ ಸ್ಥಿತಿಯಲ್ಲಿ ಡಂಪಿಂಗ್ ಯಾರ್ಡ್‌ನಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಸೋಮವಾರ ಮಧ್ಯಾಹ್ನ ಬಾಲಕಿ ತುಂಬಾ ಕಷ್ಟಪಟ್ಟು ಹೊರಗೆ ಬಂದಾಗ ಸಾಮೂಹಿಕ ಅತ್ಯಾಚಾರ ನಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ.

ನಿನ್ನೆ ಮಂಗಳವಾರ ಬೆಳಿಗ್ಗೆ, ಎಫ್‌ಎಸ್‌ಎಲ್ ತಂಡವನ್ನು ತನಿಖೆಗಾಗಿ ಆಸ್ಪತ್ರೆಗೆ ಕರೆಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಿಬ್ಬರೂ ನೈರ್ಮಲ್ಯ ಕೆಲಸ ಮಾಡುವ ಕಾರ್ಮಿಕರು ಎಂದು ಗೊತ್ತಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಸಂತ್ರಸ್ತೆ ಬಾಲಕಿಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT