ಮುಖ್ತಾರ್ ಅಬ್ಬಾಸ್ ನಖ್ವಿ 
ದೇಶ

ಮುಸ್ಲಿಮರು ತಮ್ಮ 'ದಶಕಗಳ ಹಳೆಯ ಫ್ಯಾಷನ್' ಬದಲಿಸಬೇಕು: ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ

'ಸೆಕ್ಯುಲರ್ ಸಿಂಡಿಕೇಟ್ ಎಂದು ಕರೆಯಲ್ಪಡುವ ಪ್ಯೂಡಲ್ ಸುಲ್ತಾನರು" ದೀರ್ಘಕಾಲದವರೆಗೆ ಮುಸ್ಲಿಮರಲ್ಲಿ ಭಯದ ಬೋಗಿಯನ್ನು ಹೆಚ್ಚಿಸಿದರು. ಇದು ರಾಷ್ಟ್ರೀಯ ರಾಜಕೀಯ ಪಕ್ಷದ ಕಡೆಗೆ ಸಮಾಜದ ಈ ವರ್ಗ ಅಸಹಿಷ್ಣು ಮನೋಭಾವ ಅಳವಡಿಸಿಕೊಳ್ಳಲು ಕಾರಣವಾಯಿತು'

ಲಖನೌ: ಅಲ್ಪಸಂಖ್ಯಾತರು ವಿಶೇಷವಾಗಿ ಮುಸ್ಲಿಮರು ಬಿಜೆಪಿಯನ್ನು ನಿರ್ಬಂಧಿಸುವ ಅವರ ಫ್ಯಾಶನ್ ನ್ನು ಬದಲಿಸಬೇಕು, ಪಕ್ಷವನ್ನು ಅನುಸರಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಗುರುವಾರ ಹೇಳಿದ್ದಾರೆ.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸೆಕ್ಯುಲರ್ ಸಿಂಡಿಕೇಟ್ ಎಂದು ಕರೆಯಲ್ಪಡುವ ಪ್ಯೂಡಲ್ ಸುಲ್ತಾನರು" ದೀರ್ಘಕಾಲದವರೆಗೆ ಮುಸ್ಲಿಮರಲ್ಲಿ ಭಯದ ಬೋಗಿಯನ್ನು ಹೆಚ್ಚಿಸಿದರು. ಇದು ರಾಷ್ಟ್ರೀಯ ರಾಜಕೀಯ ಪಕ್ಷದ ಕಡೆಗೆ ಸಮಾಜದ ಈ ವರ್ಗ ಅಸಹಿಷ್ಣು ಮನೋಭಾವ ಅಳವಡಿಸಿಕೊಳ್ಳಲು ಕಾರಣವಾಯಿತು ಎಂದಿದ್ದಾರೆ.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯತ್ವ ಅಭಿಯಾನದ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಂರಲ್ಲಿ ಅಪನಂಬಿಕೆಯನ್ನು ವಿಶ್ವಾಸವನ್ನಾಗಿ ಪರಿವರ್ತಿಸುವುದು ಇಂದಿನ ಅಗತ್ಯವಾಗಿದೆ. ಬಿಜೆಪಿಯನ್ನು ಸೋಲಿಸುವ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ತಮ್ಮ ದಶಕಗಳ ಪ್ಯಾಷನ್ ಅನ್ನು ಬದಲಿಸಲು ಶ್ರಮಿಸಬೇಕು. ಅವರು ಬಿಜೆಪಿ ಬೆಂಬಲಿಸುವಂತೆ ಮಾಡಬೇಕು. ಅಭಿವೃದ್ಧಿಯ ವಿಷಯದಲ್ಲಿ ಬಿಜೆಪಿ ಯಾವುದೇ ವರ್ಗದ ವಿರುದ್ಧ ತಾರತಮ್ಯ ಮಾಡದಿದ್ದಾಗ ಬಿಜೆಪಿಗೆ ಮತ ಹಾಕಲು ಯಾವುದೇ ಹಿಂಜರಿಕೆ ಬೇಡ ಎಂದರು.

ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ‘ಸಂವಿಧಾನ ವಿರೋಧಿ’ ಎಂಬ ಆರೋಪ ಹೊರಿಸಲಾಗಿದೆ. ಇದು ‘ಸತ್ಯದ ಪರ್ವತವನ್ನು ಸುಳ್ಳಿನ ಪೊದೆಯಡಿಯಲ್ಲಿ ಮರೆಮಾಚುವ ಪಟ್ಟಭದ್ರರ ಪ್ರಯತ್ನವೇ ಹೊರತು ಬೇರೇನೂ ಅಲ್ಲ.

ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ದೇಗುಲಕ್ಕೆ ತಲೆಬಾಗಿ, ಸಂವಿಧಾನವನ್ನು ಹೃದಯಕ್ಕೆ ಹತ್ತಿರವಾಗಿಟ್ಟುಕೊಂಡು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆ "ಅಸಂವಿಧಾನಿಕ ಅರಾಜಕತೆಯ ಮೇಲೆ ಸಾಂವಿಧಾನಿಕ ಶ್ರೇಣಿ ವ್ಯವಸ್ಥೆಗೆ" ದಾರಿ ಮಾಡಿಕೊಡುತ್ತದೆ ಎಂದು ನಖ್ವಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT