ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ 
ದೇಶ

'ಸ್ನೇಹಿತ' ಫಡ್ನವಿಸ್ ಪ್ರಮಾಣವಚನಕ್ಕೆ ರಾಜ್ ಠಾಕ್ರೆ ಗೈರು

ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸಮಾರಂಭಕ್ಕೆ ಗೈರು ಆಗಿರುವ ರಾಜ್ ಠಾಕ್ರೆ ಅವರು, ಎಕ್ಸ್‌ನಲ್ಲಿ ತಮ್ಮ 'ಸ್ನೇಹಿತ' ದೇವೇಂದ್ರ ಫಡ್ನವಿಸ್‌ಗೆ ಶುಭ ಹಾರೈಸಿದ್ದಾರೆ.

ಮುಂಬೈ: ಮಹಾಯುತಿ ಸರ್ಕಾರ 'ನಂಬಲಾಗದ' ಜನಾದೇಶದೊಂದಿಗೆ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, 'ರಾಜ್ಯ, ಮರಾಠಿ ಜನರು, ಭಾಷೆ ಮತ್ತು ಸಂಸ್ಕೃತಿ'ಗಾಗಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಆಶಿಸುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.

ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸಮಾರಂಭಕ್ಕೆ ಗೈರು ಆಗಿರುವ ರಾಜ್ ಠಾಕ್ರೆ ಅವರು, ಎಕ್ಸ್‌ನಲ್ಲಿ ತಮ್ಮ 'ಸ್ನೇಹಿತ' ದೇವೇಂದ್ರ ಫಡ್ನವಿಸ್‌ಗೆ ಶುಭ ಹಾರೈಸಿದ್ದಾರೆ.

2019 (ವಿಧಾನಸಭಾ ಚುನಾವಣೆಯ ನಂತರ) ಮತ್ತು 2022 ರಲ್ಲಿ(ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ) ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಫಡ್ನವೀಸ್ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ.

'ಈ ಬಾರಿ ಜನರು ಮಹಾಯುತಿಗೆ ನಂಬಲಾಗದ ಜನಾದೇಶ ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ದೇವೇಂದ್ರ ಫಡ್ನವಿಸ್ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಈ ದೊಡ್ಡ ಜನಾದೇಶವನ್ನು ರಾಜ್ಯ, ಮರಾಠಿ ಜನರ, ಭಾಷೆ ಮತ್ತು ಸಂಸ್ಕೃತಿಗೆ ಸರಿಯಾಗಿ ಬಳಸಲ್ಪಡುತ್ತದೆ ಎಂದು ನಾನು ಭಾವಿಸುತ್ತೇನೆ,' ಎಂದು ಠಾಕ್ರೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಮೈಸೂರಿನಲ್ಲಿ ಎಸ್. ಜಾನಕಿ ಪಾರ್ಥಿವ ಶರೀರದ ಅಂತಿಮ ದರ್ಶನ; ಮಧ್ಯಾಹ್ನ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video