ದೆಹಲಿಯ ಸಂಸತ್ ಭವನದ ಬಳಿ ವಾಯು ಮಾಲಿನ್ಯವನ್ನು ತಡೆಗಟ್ಟಲು ನೀರಿನ ಹನಿಗಳನ್ನು ಸಿಂಪಡಿಸಲು ಆಂಟಿಸ್ಮಾಗ್ ಗನ್ ನ್ನು ಬಳಸಲಾಗುತ್ತಿದೆ. 
ದೇಶ

ವಾಯುಗುಣಮಟ್ಟ ಸುಧಾರಣೆ: ದೆಹಲಿ-NCR ಪ್ರದೇಶದಲ್ಲಿ GRAP-4 ನಿರ್ಬಂಧ ಸಡಿಲಿಕೆ

ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟವು 400 ದಾಟಿದಾಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ-4 ನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ನವದೆಹಲಿ: ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (NCR) ಗಾಗಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan-4)ಕ್ರಮಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಮಾಲಿನ್ಯ ಮಟ್ಟವನ್ನು ನಿರ್ವಹಿಸಲು GRAP-2 ಕ್ರಮಗಳನ್ನು ಜಾರಿಗೆ ತರಲು ವಾಯು ಗುಣಮಟ್ಟ ನಿರ್ವಹಣೆ ಆಯೋಗಕ್ಕೆ (CAQM) ಅನುಮತಿ ನೀಡಿದೆ.

ಏರ್ ಕ್ವಾಲಿಟಿ ಇಂಡೆಕ್ಸ್ (AQI) ಮಟ್ಟವು 400 ದಾಟಿದಾಗ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ-4 ನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರ ರಾಜಧಾನಿಯಲ್ಲಿ GRAP ನಿರ್ಬಂಧಗಳ ಹಂತ 2 ರ ಕೆಳಗೆ ಹೋಗದಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಪ್ರದೇಶದಲ್ಲಿ ಎಕ್ಯುಐ ಮತ್ತಷ್ಟು ಸುಧಾರಿಸುವವರೆಗೆ GRAP-3 ನಿಂದ ಕೆಲವು ಹೆಚ್ಚುವರಿ ಕ್ರಮಗಳನ್ನು ನಿರ್ಬಂಧಗಳಲ್ಲಿ ಸೇರಿಸಲು ಆಯೋಗಕ್ಕೆ ಸಲಹೆ ನೀಡಿದೆ.

ಕಳೆದ ಒಂದು ತಿಂಗಳಿನಿಂದ ನಿರಂತರ ವಾಯು ಮಾಲಿನ್ಯದ ವಿರುದ್ಧ ಹೋರಾಡಿದ ನಂತರ, ದೆಹಲಿಯ ಗಾಳಿಯ ಗುಣಮಟ್ಟವು ಸಾಕಷ್ಟು ಸುಧಾರಣೆಯನ್ನು ಕಂಡಿತು, ವಾಯು ಗುಣಮಟ್ಟ ಸೂಚ್ಯಂಕ (AQI) 161ರಲ್ಲಿ ದಾಖಲಾಗಿದೆ, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರ್ಗೀಕರಣದ ಪ್ರಕಾರ, 0-50 ನಡುವಿನ ಎಕ್ಯುಐನ್ನು 'ಉತ್ತಮ', 51-100 'ತೃಪ್ತಿದಾಯಕ', 101-200 ಮಧ್ಯಮ, 201-300 ಕಳಪೆ, 301 ಎಂದು ವರ್ಗೀಕರಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ಅಕ್ಟೋಬರ್ 30 ರಂದು ಅತ್ಯಂತ ಕಳಪೆ ವರ್ಗಕ್ಕೆ ಹೋದಾಗ ಕ್ಷೀಣಿಸಲು ಪ್ರಾರಂಭಿಸಿತು. ಮುಂದಿನ 15 ದಿನಗಳಲ್ಲಿ, ಎಕ್ಯುಐ ಸ್ಥಿರವಾಗಿ ಅತ್ಯಂತ ಕಳಪೆಶ್ರೇಣಿಯಲ್ಲಿ ಉಳಿಯಿತು, ಎಕ್ಯುಐ ಮಟ್ಟವು 400 ಮೀರುವುದರೊಂದಿಗೆ ಗಾಳಿಯು ವಿಷಕಾರಿಯಾಗಿ ಮಾರ್ಪಟ್ಟಿದ್ದರಿಂದ ಪರಿಸ್ಥಿತಿಯು ನವೆಂಬರ್‌ನ ದ್ವಿತೀಯಾರ್ಧದಲ್ಲಿ ಇನ್ನಷ್ಟು ಹದಗೆಟ್ಟಿತು.

ಆದಾಗ್ಯೂ, ಬಲವಾದ ಗಾಳಿಯಿಂದಾಗಿ ಡಿಸೆಂಬರ್ ಆರಂಭದೊಂದಿಗೆ ಗಾಳಿಯ ಗುಣಮಟ್ಟವು ಸುಧಾರಣೆಯ ಲಕ್ಷಣಗಳನ್ನು ತೋರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT