ದೆಹಲಿ ಚುನಾವಣೆ ಹಿನ್ನೆಲೆ ಪೋಸ್ಟರ್ ಬಿಡುಗಡೆ  online desk
ದೇಶ

Delhi Elections 2024: ಆಪ್-ಬಿಜೆಪಿ ನಡುವೆ ಪುಷ್ಪ 2 ಪ್ರೇರಿತ ಪೋಸ್ಟರ್ ವಾರ್!

ಪುಷ್ಪ 2 ಸಿನಿಮಾದ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರಿಂದ ಪ್ರೇರಣೆ ಪಡೆದು ಬಿಜೆಪಿ- ಆಮ್ ಆದ್ಮಿ ಪಕ್ಷಗಳು ವಿಭಿನ್ನವಾಗಿ ಪ್ರಚಾರದಲ್ಲಿ ತೊಡಗಿವೆ.

ದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜುಗೊಂಡಿದ್ದು, ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಆರಂಭಗೊಂಡಿದೆ.

ಪುಷ್ಪ 2 ಸಿನಿಮಾದ ಪೋಸ್ಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಇದರಿಂದ ಪ್ರೇರಣೆ ಪಡೆದು ಬಿಜೆಪಿ- ಆಮ್ ಆದ್ಮಿ ಪಕ್ಷಗಳು ವಿಭಿನ್ನವಾಗಿ ಪ್ರಚಾರದಲ್ಲಿ ತೊಡಗಿವೆ. ಪುಷ್ಪ 2 ಮಾದರಿಯಲ್ಲೇ ಪೋಸ್ಟರ್ ಬಿಡುಗಡೆ ಮಾಡಿದ ಆಮ್ ಆದ್ಮಿ ಪಕ್ಷ ಸಿನಿಮಾದಲ್ಲಿರುವ ಪ್ರಸಿದ್ಧ ಡೈಲಾಗ್ ನ್ನೇ ಪೋಸ್ಟರ್ ನಲ್ಲಿ ಬಳಕೆ ಮಾಡಿದ್ದು ಕೇಜ್ರಿವಾಲ್ ತಗ್ಗುವುದೇ ಇಲ್ಲ ಎಂದು ಬರೆದಿದೆ.

ಕೇಜ್ರಿವಾಲ್ ತನ್ನ ಭುಜದ ಮೇಲೆ ಎಎಪಿಯ ಚಿಹ್ನೆ ಝಾಡು (ಪೊರಕೆ) ನ್ನು ಹೊತ್ತುಕೊಂಡು ಚಿತ್ರದ ನಾಯಕನಂತೆ ಪೋಸ್ ನೀಡಿರುವ ರೀತಿಯಲ್ಲಿ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 2013, 2015 ಮತ್ತು 2020 ರಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಹಿಂದಿನ ಚುನಾವಣಾ ಯಶಸ್ಸನ್ನು ಉಲ್ಲೇಖಿಸಿ '4ನೇ ಅವಧಿ ಶೀಘ್ರದಲ್ಲೇ ಬರಲಿದೆ' ಎಂದು ಪೋಸ್ಟರ್ ಹೇಳಿದೆ.

ದಿಲ್ಲಿ ಬಿಜೆಪಿ ಸೋಮವಾರ ತನ್ನ ಆದ ಪೋಸ್ಟರ್ ಬಿಡುಗಡೆ ಮಾಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಸಿಂಹಾಸನದ ಮೇಲೆ ಪುಷ್ಪ ಪಾತ್ರಧಾರಿಯಾಗಿ ಭ್ರಷ್ಟಾಚಾರಿಯೋಂ ಕೋ ಖತಂ ಕರೇಂಗೆ (ಭ್ರಷ್ಟರನ್ನು ಮುಗಿಸುತ್ತೇನೆ) ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದಾರೆ.

70 ಸದಸ್ಯರ ವಿಧಾನಸಭೆಯಲ್ಲಿ ಕ್ರಮವಾಗಿ 67 ಮತ್ತು 63 ಸ್ಥಾನಗಳನ್ನು ಗೆಲ್ಲುವ ಮೂಲಕ 2015 ಮತ್ತು 2020 ರಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಎಎಪಿ ಮೂರನೇ ಬಾರಿಗೆ ದೆಹಲಿಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ.

1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗುಳಿದಿರುವ ಬಿಜೆಪಿಯ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೆಹಲಿಯ ರಾಜಕೀಯದಲ್ಲಿ ಎಎಪಿಯ ಹಿಡಿತವನ್ನು ಕೊನೆಗೊಳಿಸಲು ಅತ್ಯುತ್ತಮ ಅವಕಾಶವೆಂದು ಪರಿಗಣಿಸಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿ ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ತನ್ನ 10 ವರ್ಷಗಳ ಆಡಳಿತದಲ್ಲಿ ದೆಹಲಿಯ ಜನರಿಗೆ ಮೂಲಭೂತ ಸೇವೆಗಳನ್ನು ತಲುಪಿಸಲು ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲೆ ದಾಳಿ ಮಾಡಲು ಅಪರಾಧದ ಘಟನೆಗಳನ್ನು ಉಲ್ಲೇಖಿಸಿ, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಎತ್ತುವತ್ತ ಎಎಪಿ ಗಮನಹರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಪರಾಧ ಹೆಚ್ಚುತ್ತಿದೆ ಎಂದು ಆರೋಪಿಸಿ ಬಿಜೆಪಿಯನ್ನು ದೂಷಿಸಲು ಪೋಸ್ಟರ್‌ಗಳು ಸೇರಿದಂತೆ ಸಾಕಷ್ಟು ಸಾಮಾಜಿಕ ಮಾಧ್ಯಮ ವಿಷಯವನ್ನು ಪಕ್ಷ ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT