ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. (Photo| PTI)
ದೇಶ

ಸದನದಲ್ಲಿ ರಾಜ್ಯಸಭಾ ಅಧ್ಯಕ್ಷರ ವರ್ತನೆಯಿಂದ ದೇಶದ ಘನತೆಗೆ ಧಕ್ಕೆ: ಮಲ್ಲಿಕಾರ್ಜುನ ಖರ್ಗೆ

ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಸ್ಥಾನದ ಘನತೆಗೆ ವ್ಯತಿರಿಕ್ತವಾಗಿದೆ... ಅವರು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಸರ್ಕಾರವನ್ನು ಹೊಗಳುತ್ತಾರೆ.

ನವದೆಹಲಿ: ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ವಿರುದ್ಧ ಬುಧವಾರ ಮತ್ತಷ್ಟು ವಾಗ್ದಾಳಿ ನಡೆಸಿದ ಪ್ರತಿಪಕ್ಷಗಳು, ಮೇಲ್ಮನೆಯಲ್ಲಿ "ಅಡೆತಡೆಗಳಿಗೆ ಅವರೇ ದೊಡ್ಡ ಕಾರಣ" ಎಂದು ಆರೋಪಿಸಿವೆ.

ರಾಜ್ಯಸಭಾ ಅಧ್ಯಕ್ಷರ ಕಾರ್ಯವೈಖರಿ ಅವರ ಸ್ಥಾನದ ಘನತೆಗೆ ವ್ಯತಿರಿಕ್ತವಾಗಿದೆ... ಅವರು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಸರ್ಕಾರವನ್ನು ಹೊಗಳುತ್ತಾರೆ. ಅವರು ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಇಂದು ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಧಂಖರ್ ಅವರ ಕಾರ್ಯವೈಖರಿಯಿಂದಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ಬಿಟ್ಟು ಪ್ರತಿಪಕ್ಷಗಳಿಗೆ ಬೇರೆ ಆಯ್ಕೆ ಇರಲಿಲ್ಲ ಎಂದರು.

“ರಾಜ್ಯಸಭಾ ಅಧ್ಯಕ್ಷ ವಿರುದ್ಧ ನಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ರಾಜಕೀಯ ಜಗಳವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸಲು ನಾವು ಈ ಕ್ರಮ ಕೈಗೊಂಡಿದ್ದೇವೆ. ಸಾಕಷ್ಟು ಯೋಚಿಸಿದ ನಂತರ ಅವರ ಪದಚ್ಯುತಿಗೆ ನೋಟಿಸ್‌ ಸಲ್ಲಿಸುವುದು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಖರ್ಗೆ ಹೇಳಿದರು.

"ನಾವು ಅವರ ನಡವಳಿಕೆ, ಪಕ್ಷಪಾತದಿಂದ ಬೇಸರಗೊಂಡಿದ್ದೇವೆ. ಸದನದಲ್ಲಿ ಸಭಾಪತಿಯವರ ನಡವಳಿಕೆಯು ದೇಶದ ಘನತೆಗೆ ಧಕ್ಕೆ ತಂದಿದೆ. ಅವರು ರಾಜ್ಯಸಭೆಯ ನಿಯಮಗಳಿಗಿಂತ ರಾಜಕೀಯಕ್ಕೆ ಆದ್ಯತೆ ನೀಡಿದ್ದಾರೆ ಎಂದು ದೂರಿದರು.

1952 ರಿಂದ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಯಾವುದೇ ನಿರ್ಣಯವನ್ನು ತಂದಿಲ್ಲ. ಏಕೆಂದರೆ, ಆ ಸ್ಥಾನವನ್ನು ಹೊಂದಿರುವವರು ‘ನಿಷ್ಪಕ್ಷಪಾತ ಮತ್ತು ರಾಜಕೀಯವನ್ನು ಮೀರಿದವರು. ಯಾವಾಗಲೂ ನಿಯಮಗಳ ಪ್ರಕಾರ ಸದನವನ್ನು ನಡೆಸುತ್ತಿದ್ದರು. ಆದರೆ, ಇಂದು ಸದನದಲ್ಲಿ ನಿಯಮಕ್ಕಿಂತ ರಾಜಕೀಯವೇ ಹೆಚ್ಚಿದೆ’ ಎಂದು ಖರ್ಗೆ ಟೀಕಿಸಿದರು.

ಸಂಸತ್ತಿನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದಿಂದ ದೇಶದ ಪ್ರಜಾಪ್ರಭುತ್ವದ ಮೇಲೆ ಘೋರ ದಾಳಿ ನಡೆಯುತ್ತಿದೆ ಎಂದು ಡಿಎಂಕೆ ನಾಯಕ ತಿರುಚಿ ಶಿವ ಹೇಳಿದರೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ನದಿಮುಲ್ ಹಕ್ ಅವರು ವಿರೋಧ ಪಕ್ಷದ ನಾಯಕ ಖರ್ಗೆ ಅವರ ಮಾತಿಗೆ ನನ್ನ ಸಹಮತ ಇದೆ. ರಾಜ್ಯಸಭೆಯಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ಅವಕಾಶವಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT