ರಾಹುಲ್ ಗಾಂಧಿ ಭಾಷಣ online desk
ದೇಶ

"ತಪಸ್ ಎಂದರೆ....": ರಾಹುಲ್ ಗಾಂಧಿ ಮಾತಿಗೆ ಬಿದ್ದು ಬಿದ್ದು ನಕ್ಕ ಸದಸ್ಯರು!

ಏಕಲವ್ಯನ ಬಗ್ಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ. ಮುಂಜಾನೆ ಬಿಲ್ಲು ಬಾಣ ಹಿಡಿದು ಅಭ್ಯಾಸ ಮಾಡುವ ಮೂಲಕ ಏಕಲವ್ಯ ಎಂಬ ಬಾಲಕ ತಪಸ್ ಮಾಡುತ್ತಿದ್ದ.

ನವದೆಹಲಿ: ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಭಾಷಣ ಮಾಡುತ್ತಾ, ಬಿಜೆಪಿಯನ್ನು ಟೀಕಿಸಿರುವ ಭರದಲ್ಲಿ ರಾಹುಲ್ ಗಾಂಧಿ ಮತ್ತೊಮ್ಮೆ ಯಡವಟ್ಟು ಮಾಡಿಕೊಂಡಿದ್ದಾರೆ.

ಮಹಾಭಾರತ, ದ್ರೋಣಾಚಾರ್ಯ, ಏಕಲ್ಯ ಮುಂತಾದ ಉಲ್ಲೇಖಗಳನ್ನು ನೀಡುತ್ತಾ, ರಾಹುಲ್ ಗಾಂಧಿ ಮೋದಿ ಸರ್ಕಾರ ದೇಶದ ಯುವಕರ ಹೆಬ್ಬೆರಳು ಕತ್ತರಿಸುತ್ತಿದೆ. ಇದು ಮಹಾಭಾರತದಲ್ಲಿ ಗುರುದಕ್ಷಿಣೆ ಪಡೆಯಲು ದ್ರೋಣಾಚಾರ್ಯ ಏಕಲವ್ಯನಿಂದ ಹೆಬ್ಬೆರಳು ಕತ್ತರಿಸಿದಂತೆಯೇ ಆಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಏಕಲವ್ಯನ ಬಗ್ಗೆ ಮಾತನಾಡುತ್ತಾ, ರಾಹುಲ್ ಗಾಂಧಿ ಯಡವಟ್ಟು ಮಾಡಿಕೊಂಡಿದ್ದಾರೆ. ಮುಂಜಾನೆ ಬಿಲ್ಲು ಬಾಣ ಹಿಡಿದು ಅಭ್ಯಾಸ ಮಾಡುವ ಮೂಲಕ ಏಕಲವ್ಯ ಎಂಬ ಬಾಲಕ ತಪಸ್ ಮಾಡುತ್ತಿದ್ದ. ಧನುಸ್ಸಿನಲ್ಲಿ (ಬಿಲ್ಲು) ತಪಸ್ಸಿದೆ. ಮನ್ರೇಗಾದಲ್ಲಿ ತಪಸ್ಸಿದೆ. ತಪಸ್ಸೆಂದರೆ, ಶರೀರದಲ್ಲಿ ಶಾಖ ಉತ್ಪತ್ತಿಸುವುದಾಗಿದೆ, ಅರ್ಥಮಾಡಿಕೊಳ್ಳಿ ತಪನ ಎಂದರೆ ಅದೇ ಅರ್ಥ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಹುಲ್ ಗಾಂಧಿ ಮಾತಿಗೆ ಆಡಳಿತಪಕ್ಷದ ಸದಸ್ಯರು ನಕ್ಕಿದ್ದಾರೆ. ಬಿಜೆಪಿ ರಾಹುಲ್ ಗಾಂಧಿ ಮಾತಿಗೆ ವ್ಯಂಗ್ಯವಾಡಿದ್ದು, ಜಾರ್ಜ್ ಸೊರೊಸ್ ಅವರಿಂದ ಮಾತ್ರ ಇಂತಹ ಜ್ಞಾನ ಬರಲು ಸಾಧ್ಯ ಎಂದು ಸಂಬಿತ್ ಪಾತ್ರ ಟ್ವಿಟರ್ ನಲ್ಲಿ ಕಾಲೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್