ಮಣಿಶಂಕರ್ ಅಯ್ಯರ್ 
ದೇಶ

ನನ್ನನ್ನು ಬೆಳೆಸಿದ ಗಾಂಧಿಗಳಿಂದಲೇ ನನ್ನ ರಾಜಕೀಯ ಜೀವನ ಪತನ: ಮಣಿ ಶಂಕರ್ ಅಯ್ಯರ್

ನನ್ನ ಜೀವನದ ವಿಪರ್ಯಾಸವೆಂದರೆ, ನನ್ನ ರಾಜಕೀಯ ಜೀವನವನ್ನು ರೂಪಿಸಿದ್ದೂ ಗಾಂಧಿಗಳೇ, ಅದನ್ನು ಪತನಗೊಳಿಸಿದ್ದೂ ಗಾಂಧಿಗಳೇ ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನವದೆಹಲಿ: ಒಂದು ಕಾಲದಲ್ಲಿ ಗಾಂಧಿ ಪರಿವಾರಕ್ಕೆ ನಿಕಟವಾಗಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಈಗ ಗಾಂಧಿ ಪರಿವಾರದ ಕುರಿತು ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

ತಮ್ಮ ರಾಜಕೀಯ ಜೀವನದಲ್ಲಿ ಗಾಂಧಿ ಪರಿವಾರ ಮಹತ್ವ ಪಾತ್ರ ವಹಿಸಿದ್ದನ್ನು ಒಪ್ಪಿಕೊಳ್ಳುತ್ತಲೇ ಅದರ ಪತನಕ್ಕೆ ಕಾರಣವೂ ಗಾಂಧಿ ಪರಿವಾರವೇ ಎಂದು ಹೇಳುವ ಮೂಲಕ ಮಣಿಶಂಕರ್ ಅಯ್ಯರ್ ಅಚ್ಚರಿ ಮೂಡಿಸಿದ್ದಾರೆ.

ನನ್ನ ಜೀವನದ ವಿಪರ್ಯಾಸವೆಂದರೆ, ನನ್ನ ರಾಜಕೀಯ ಜೀವನವನ್ನು ರೂಪಿಸಿದ್ದೂ ಗಾಂಧಿಗಳೇ, ಅದನ್ನು ಪತನಗೊಳಿಸಿದ್ದೂ ಗಾಂಧಿಗಳೇ ಎಂದು ಪಿಟಿಐ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಂಧಿ ಪರಿವಾರದೊಂದಿಗೆ ತಮ್ಮ ನೇರ ಸಂಪರ್ಕ ಕಡಿಮೆಯಾಗಿದೆ ಎಂದೂ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. “10 ವರ್ಷಗಳಿಂದ ಸೋನಿಯಾ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ನನಗೆ ಅವಕಾಶ ನೀಡಲಿಲ್ಲ, ಒಮ್ಮೆ ಬಿಟ್ಟರೆ, ರಾಹುಲ್ ಗಾಂಧಿಯೊಂದಿಗೆ ಯಾವುದೇ ಅರ್ಥಪೂರ್ಣ ಸಮಯವನ್ನು ಕಳೆಯಲು ನನಗೆ ಅವಕಾಶ ನೀಡಲಿಲ್ಲ ಮತ್ತು ಒಂದು ಅಥವಾ ಎರಡು ಬಾರಿ ಹೊರತುಪಡಿಸಿದರೆ ನಾನು ಪ್ರಿಯಾಂಕಾ ಅವರೊಂದಿಗೆ ಹೆಚ್ಚು ಸಮಯ ಕಳೆದಿಲ್ಲ ಎಂದು ಅವರು ಹೇಳಿದರು, ಪ್ರಿಯಾಂಕಾ ಗಾಂಧಿ ಅವರು ಸಾಂದರ್ಭಿಕವಾಗಿ ಫೋನ್‌ಗೆ ಕರೆ ಮಾಡಿದ್ದಾರೆ, ಇದು ಕೆಲವು ಮಟ್ಟದ ಸಂಪರ್ಕವನ್ನು ಜೀವಂತವಾಗಿರಿಸಿದೆ ಎಂದು ಅಯ್ಯರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಒಂದು ನಿರ್ದಿಷ್ಟ ಘಟನೆಯನ್ನು ನೆನಪಿಸಿಕೊಂಡ ಅಯ್ಯರ್, ಪಕ್ಷದಿಂದ ಅಮಾನತುಗೊಂಡ ಅವಧಿಯಲ್ಲಿ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ವಯನಾಡ್ ಸಂಸದರನ್ನು ಅವಲಂಬಿಸಬೇಕಾಯಿತು ಎಂದು ಹೇಳಿದರು.

"ನಾನು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದೇನೆ ಮತ್ತು ಆಕೆ ಯಾವಾಗಲೂ ನನ್ನೆಡೆಗೆ ತುಂಬಾ ದಯೆ ತೋರುತ್ತಾರೆ" ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. "ರಾಹುಲ್ ಅವರ ಹುಟ್ಟುಹಬ್ಬ ಜೂನ್‌ನಲ್ಲಿ ಇರುವುದರಿಂದ, ರಾಹುಲ್‌ಗೆ ನನ್ನ ಶುಭಾಶಯಗಳನ್ನು ತಿಳಿಸಲು ನಾನು ಆಕೆಯನ್ನು ಕೇಳಬಹುದು ಎಂದು ನಾನು ಭಾವಿಸಿದ್ದೇನೆ" ಎಂದು ಮಣಿಶಂಕರ್ ಅಯ್ಯರ್ ತಿಳಿಸಿದ್ದಾರೆ.

ನೀವು ರಾಹುಲ್ ಗಾಂಧಿ ಅವರೊಂದಿಗೆ ಏಕೆ ನೇರವಾಗಿ ಮಾತನಾಡುತ್ತಿಲ್ಲ? ಎಂದು ಪ್ರಿಯಾಂಕ ನನ್ನನ್ನು ಪ್ರಶ್ನಿಸಿದ್ದರು. ನಾನು ಅಮಾನತುಗೊಂಡಿದ್ದೇನೆ ಆದ್ದರಿಂದ ನನ್ನ ನಾಯಕನ ಜೊತೆ ನಾನು ಮಾತನಾಡಲು ಆಗುತ್ತಿಲ್ಲ ಎಂದು ಹೇಳಿದ್ದಾಗಿ ಮಣಿಶಂಕರ್ ಅಯ್ಯರ್ ನೆನಪುಗಳನ್ನು ಹಂಚಿಕೊಂಡಿದ್ದಾರೆ.

"2012 ರ ಅವಧಿಯಲ್ಲಿ ಸೋನಿಯಾ ಗಾಂಧಿ ಅವರಿಗೂ ಅನಾರೋಗ್ಯ ಉಂಟಾಗಿತ್ತು, ಮನಮೋಹನ್ ಸಿಂಗ್ ಅವರಿಗೆ 6 ಬೈಪಾಸ್ ಶಸ್ತ್ರಚಿಕಿತ್ಸೆಗಳಾಗಿದ್ದವು, ಆದ್ದರಿಂದ ಆ ಅವಧಿಯಲ್ಲಿ ಪ್ರಣಬ್ ಮುಖರ್ಜಿ ಸರ್ಕಾರ ಮತ್ತು ಪಕ್ಷವನ್ನು ಸಂಬಾಳಿಸಿದ್ದರು" ಎಂದು ಮಣಿಶಂಕರ್ ಅಯ್ಯರ್ ಹಳೆಯ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT