ದೇಶ

ಮಾನವೀಯತೆ ಮರೆತ ನೋಯ್ಡಾ ವಸತಿ ಇಲಾಖೆ: ವೃದ್ಧನಿಗೆ ಅವಮಾನಿದ ಸಿಬ್ಬಂದಿಗೆ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಿದ IAS ಅಧಿಕಾರಿ!

ಕೌಂಟರ್ ಗಳಲ್ಲಿ ದೀರ್ಘಾವಧಿ ಜನರನ್ನು ಕಾಯಿಸುವುದಕ್ಕೆ ಕೋಪಗೊಂಡ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ 16 ಸಿಬ್ಬಂದಿಗಳಿಗೆ ನಿಂತುಕೊಳ್ಳುವ ಇರುವ ಶಿಕ್ಷೆ ವಿಧಿಸಿದ್ದಾರೆ.

ನೋಯ್ಡಾ: ನೋಯ್ಡಾದ ವಸತಿ ಇಲಾಖೆ ಯಡವಟ್ಟು ಮಾಡಿಕೊಂಡಿದ್ದು ವೃದ್ಧನೋರ್ವನನ್ನು ಕಾಯಿಸಿದ್ದಕ್ಕಾಗಿ 16 ಸಿಬ್ಬಂದಿಗೆ ಶಾಲೆಯಲ್ಲಿ ನೀಡುವ ಶಿಕ್ಷೆಯ ಮಾದರಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

ಕೌಂಟರ್ ಗಳಲ್ಲಿ ದೀರ್ಘಾವಧಿ ಜನರನ್ನು ಕಾಯಿಸುವುದಕ್ಕೆ ಕೋಪಗೊಂಡ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ 16 ಸಿಬ್ಬಂದಿಗಳಿಗೆ ನಿಂತುಕೊಳ್ಳುವ ಇರುವ ಶಿಕ್ಷೆ ವಿಧಿಸಿದ್ದಾರೆ.

ಸಿಸಿಟಿವಿಯಲ್ಲಿ ದಾಖಲಾದ ಈ ದೃಶ್ಯಗಳು ವೈರಲ್ ಆಗತೊಡಗಿವೆ. 2005 ಬ್ಯಾಚ್ ಐಎಎಸ್ ಅಧಿಕಾರಿ ಕಳೆದ ವರ್ಷ ನೊಯ್ಡಾದಲ್ಲಿ ಅಧಿಕಾರ ಸ್ವೀಕರಿಸಿದ್ದರು. ಆಗಾಗ್ಗೆ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದಾಗ ಕೌಂಟರ್ ಗಳ ಬಳಿ ಜನರು ಅತಿ ಹೆಚ್ಚು ಸಮಯ ಕಾಯುತ್ತಿರುವುದನ್ನು ಗಮನಿಸಿದ್ದರು. ಪ್ರಮುಖವಾಗಿ ಹಿರಿಯ ನಾಗರಿಕರು ಕಾಯುವುದನ್ನು ಗಮನಿಸಿದ್ದರು. ಸೋಮವಾರ (ಡಿ.16) ರಂದೂ ಇದೇ ಘಟನೆ ಪುನರಾವರ್ತನೆಯಾಗಿದೆ.

ಸೋಮವಾರ, ಸಿಇಒ ಕೌಂಟರ್‌ನಲ್ಲಿ ವೃದ್ಧರೊಬ್ಬರು ಬಹಳ ಹೊತ್ತಿನಿಂದ ಕಾಯುತ್ತಿರುವುದನ್ನು ಗಮನಿಸಿದರು, ತಕ್ಷಣ ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸದೇ, ವಿಚಾರಿಸಿ ಅವರ ಕೆಲಸ ಮಾಡಲಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳುವಂತೆ ಸೂಚನೆ ನೀಡಿದರು. ಈ ಸೂಚನೆ ನೀಡಿದ 20 ನಿಮಿಷದ ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಧಾವಿಸಿ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡರು. ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತೇ ಇರುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡುತ್ತಿರುವ ಈ ಶಿಕ್ಷೆಯ ವಿಡಿಯೋ ವೈರಲ್ ಆಗತೊಡಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಇಒ ಅವರ ಕ್ರಮವನ್ನು ಶ್ಲಾಘಿಸಿದ್ದಾರೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ತ್ವರಿತ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಇಂತಹ ಕ್ರಮಗಳು ಅಗತ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ.29'ರ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ಡಿಕೆಶಿ ಭೇಟಿ; ಕುತೂಹಲ ಕೆರಳಿಸಿದ CM, DCM ಬ್ರೇಕ್​ಫಾಸ್ಟ್ ಮೀಟಿಂಗ್

ಅಲ್ ಫಲಾಹ್ ಸ್ಥಾಪಕರಿಂದ ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಸ್ವಾಧೀನ : ತನಿಖೆಯಲ್ಲಿ ಬಯಲು

ಕೇರಳ: ಕೈಕೊಟ್ಟ ಕ್ರೇನ್, ಸ್ಕೈ ಡಿನ್ನಿಂಗ್ ಗಾಗಿ 150 ಅಡಿ ಎತ್ತರ ಇದ್ದವರ ಜೀವ ಉಳಿದಿದ್ದೇ ಹೆಚ್ಚು!

CM ಪಟ್ಟಕ್ಕಾಗಿ ಫೈಟ್: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಚಿಂತನೆ

ಪುಟಿದೆದ್ದ ಭಾರತದ ಆರ್ಥಿಕ ಬೆಳವಣಿಗೆ; ಆದರೆ ದ್ವಿತೀಯಾರ್ಧದಲ್ಲಿ ನಿಧಾನಗತಿಯ ಬಗ್ಗೆ ತಜ್ಞರ ಎಚ್ಚರಿಕೆ

SCROLL FOR NEXT