ಗುರುಗ್ರಾಮ: ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಾಲಿವುಡ್ ಖ್ಯಾತ ರಾಪರ್ ಬಾದ್ ಶಾಗೆ ಗುರುಗ್ರಾಮ ಪೊಲೀಸರು ರೂ. 15,000 ದಂಡ ವಿಧಿಸಿದ್ದಾರೆ.
ರಸ್ತೆಯ ರಾಂಗ್ ಸೈಡ್ ನಲ್ಲಿ ವಾಹನ ಚಾಲನೆ, ಜೋರಾದ ಮ್ಯೂಸಿಕ್ ಹಾಗೂ ಅಡಾದಿಡ್ಡಿಯಾಗಿ ವಾಹನ ಚಾಲನೆ ಹಿನ್ನೆಲೆಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
ಡಿಸೆಂಬರ್ 15 ರಂದು ಈ ಘಟನೆ ನಡೆದಿದೆ. ಪಾಣಿಪತ್ ನಿವಾಸಿ ದೀಪೇಂದರ್ ಮಲಿಕ್ ಹೆಸರಿನಲ್ಲಿ ನೋಂದಣಿಯಾಗಿದ್ದ ಮಹೀಂದ್ರ ಥಾರ್ ಕಾರು ಚಾಲನೆ ಮಾಡುತ್ತಿದ್ದಾಗ ಸಾಕಷ್ಟು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಸಂಚಾರ ದಟ್ಟಣೆಯಿಂದಾಗಿ ಬಾದ್ ಶಾ ಬೆಂಗಾವಲು ಪಡೆಯಲ್ಲಿದ್ದಎಸ್ ಯುವಿ ರಾಂಗ್ ಸೈಡ್ ನಲ್ಲಿ ಚಲಿಸಿದ್ದು, ಕೆಲವರು ಇದನ್ನು ವಿಡಿಯೋ ಮಾಡಿಕೊಂಡಿದ್ದರು.ಘಟನೆಯ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಸಂಚಾರ ಪೊಲೀಸರು ಅದನ್ನು ಗಮನಿಸಿ ಸೋಮವಾರ ರಾಪರ್‌ಗೆ 15,000 ರೂ. ದಂಡ ವಿಧಿಸಿದ್ದಾರೆ.
ಅತಿವೇಗದ ಚಾಲನೆ, ವಾಹನದಲ್ಲಿ ಜೋರಾದ ಮ್ಯೂಸಿಕ್ ಮತ್ತು ರಾಂಗ್ ಸೈಡ್‌ನಲ್ಲಿ ಚಾಲನೆ ಮಾಡುತ್ತಿದ್ದುದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ನಿರೀಕ್ಷಕ ದೇವೇಂದ್ರ ಕುಮಾರ್ ತಿಳಿಸಿದ್ದಾರೆ.