ವಿದ್ಯುತ್ ಕಳ್ಳತನ ಮಾಡಿದ ಎಸ್ ಪಿ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ 
ದೇಶ

ಕರೆಂಟ್ ಕಳ್ಳತನ: ಸಮಾಜವಾದಿ ಪಕ್ಷದ ಸಂಸದನಿಗೆ 1.91 ಕೋಟಿ ರೂ ದಂಡ, ಮನೆ ವಿದ್ಯುತ್ ಕಡಿತ ಶಿಕ್ಷೆ!

ಸಂಭಾಲ್ ದೀಪಾ ಸರಾಯ್ನಲ್ಲಿರುವ ಸಮಾಜವಾದಿ ಪಕ್ಷದ ಸಂಭಾಲ್ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಅವರು ತಮ ಮನೆಗೆ ಅಕ್ರಮ ಸಂಕರ್ಪ ಪಡೆದ ಹಿನ್ನಲೆಯಲ್ಲಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಸಂಭಾಲ್: ವಿದ್ಯುತ್ ಕಳ್ಳತನ ಮಾಡಿದ ಆರೋಪ ಎದುರಿಸುತ್ತಿದ್ದ ಉತ್ತರ ಪ್ರದೇಶದ ಸಂಭಾಲ್ ಸಂಸದ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಗೆ ಅಲ್ಲಿನ ವಿದ್ಯುತ್ ಇಲಾಖೆ ಬರೊಬ್ಬರಿ 1.91 ಕೋಟಿ ರೂ ದಂಡ ವಿಧಿಸಿದ್ದು, ಅವರ ಮನೆಗೆ ವಿದ್ಯುತ್ ಸ್ಥಗಿತ ಶಿಕ್ಷೆ ವಿಧಿಸಿದೆ.

ಹೌದು.. ಸಂಭಾಲ್ ದೀಪಾ ಸರಾಯ್ನಲ್ಲಿರುವ ಸಮಾಜವಾದಿ ಪಕ್ಷದ ಸಂಭಾಲ್ ಕ್ಷೇತ್ರದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಅವರು ತಮ ಮನೆಗೆ ಅಕ್ರಮ ಸಂಕರ್ಪ ಪಡೆದ ಹಿನ್ನಲೆಯಲ್ಲಿ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಇದೀಗ ವಿದ್ಯುತ್ ಕಳ್ಳತನದ ಆರೋಪದ ಮೇರೆಗೆ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಗೆ ವಿದ್ಯುತ್ ಇಲಾಖೆ 1.91 ಕೋಟಿ ರೂ ದಂಡ ಹಾಕಿದ್ದು ಮಾತ್ರವಲ್ಲದೇ ಆತನ ಮನೆಗೆ ನೀಡಿದ್ದ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಿದೆ.

ಸಂಸದ ಜಿಯಾವುರ್ ರೆಹಮಾನ್ ವಿರುದ್ಧ ವಿದ್ಯುತ್ ಕಾಯ್ದೆ, 2003, (ವಿದ್ಯುತ್ ಕಳ್ಳತನ ಅಥವಾ ಅನಧಿಕೃತ ವಿದ್ಯುತ್ ಬಳಕೆ) ಸೆಕ್ಷನ್ 135 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿದ್ಯುತ್ ಪರೀಕ್ಷಾ ಪ್ರಯೋಗಾಲಯದಿಂದ ಪಡೆದ ಗ್ರಾಹಕರ ಮೀಟರ್ ಪರಿಶೀಲಿಸಿದಾಗ ಮೀಟರ್ ಬೈಪಾಸ್ ಮಾಡಿ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿ ವಿದ್ಯುತ್ ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ FIR ದಾಖಲಿಸಲಾಗಿತ್ತು. ಭಾರೀ ಭದ್ರತೆಯ ನಡುವೆ ಸಂಸದರ ನಿವಾಸವನ್ನು ಇಲಾಖೆ ಪರಿಶೀಲಿನೆ ಕೂಡ ನಡೆಸಿತ್ತು.

ಇದೇ ಪ್ರಕರಣದಲ್ಲಿ ನಿವಾಸದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರ ತಂದೆ ಮಾಮ್ಲುಕೂರ್ ರೆಹಮಾನ್ ಬಾರ್ಕ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಶೀಲನೆಯ ಸಮಯದಲ್ಲಿ, ಎಂಜಿನಿಯರ್‌ಗಳಾದ ಅಜಯ್ ಶರ್ಮಾ ಮತ್ತು ವಿ ಕೆ ಗಂಗಲ್ ಅವರು ಸಂಸದರ ತಂದೆಯಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು.

ಶಾಹಿ ಜಾಮಾ ಮಸೀದಿ ಸಮೀಕ್ಷೆ ಘರ್ಷಣೆ ಪ್ರಕರಣದಲ್ಲೂ ಜಿಯಾವುರ್ ರೆಹಮಾನ್ ಬಾರ್ಕ್ ಹೆಸರು

ಇಜದು ಮಾತ್ರವಲ್ಲದೇ ಕಳೆದ ನವೆಂಬರ್ 24 ರಂದು ನಗರದ ಕೋಟ್ ಗಾರ್ವಿ ಪ್ರದೇಶದಲ್ಲಿರುವ ಶಾಹಿ ಜಾಮಾ ಮಸೀದಿಯನ್ನು ನ್ಯಾಯಾಲಯದ ಆದೇಶದ ಸಮೀಕ್ಷೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಯಲ್ಲಿ ನಾಲ್ವರು ಸ್ಥಳೀಯರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲೂ ಬಾರ್ಕ್ ಹೆಸರೂ ಕೂಡ ಇದೆ.

ತನ್ನ ಬಂಧನಕ್ಕೆ ತಡೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಅವರು ತಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿದ್ದಾರೆ. ನವೆಂಬರ್ 24 ರಂದು ಸಂಸದರು ಜನರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸಮೀಕ್ಷೆಯ ವೇಳೆ ಹಿಂಸಾಚಾರಕ್ಕೆ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ.ಈಗ ವಿದ್ಯುತ್ ಕಳ್ಳತನ ಕುರಿತು ಎಫ್ಐಆರ್ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT