ನವದೆಹಲಿ: ರಾಜಕೀಯ ಪಕ್ಷಗಳಂತೆ ರೈತರು ಸಹ ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಕಾಯತ್ ಅವರು, ಚೌಧರಿ ಚರಣ್ ಸಿಂಗ್ ಅವರು ರೈತರ ವಕ್ತಾರರಾಗಿದ್ದರು. ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನಗತ್ಯ ಪ್ರತಿಭಟನೆ ಮತ್ತು ರಾಜಕೀಯ ಪಕ್ಷಗಳ ಗದ್ದಲದಿಂದ ರೈತರ ಸಮಸ್ಯೆಗಳು ಗೌಣವಾಗಿರುವುದು ದುರದೃಷ್ಟಕರ ಎಂದರು.
BKU ಹವನ-ಯಜ್ಞ ಮಾಡುವ ಮೂಲಕ ಈ ದಿನವನ್ನು "ಕಿಸಾನ್ ಶಕ್ತಿ" ದಿವಸ್ ಎಂದು ಆಚರಿಸಿತು.
"ಯಾವುದೇ ರಾಜಕೀಯ ಪಕ್ಷವು ಗ್ರಾಮೀಣ ಭಾರತದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರೈತರು ತಮ್ಮ ಬೇಡಿಕೆಗಳ ಕುರಿತು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆಗೆ ಅವಕಾಶ ನೀಡಬೇಕು" ಎಂದು ಅವರು ಹೇಳಿದರು.
ಗ್ರಾಮಗಳು ಮತ್ತು ರೈತರನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಎಲ್ಲಾ ಸಂಸದರು ಮತ್ತು ಶಾಸಕರು ಆಯಾ ಪಕ್ಷಗಳ ನಾಯಕರಾಗಿದ್ದಾರೆ ಹೊರತುಚೌಧರಿ ಚರಣ್ ಸಿಂಗ್ ಅವರಂತೆ ರೈತರ ನಾಯಕರಾಗಿಲ್ಲ ಎಂದು ಟಿಕಾಯತ್ ವಾಗ್ದಾಳಿ ನಡೆಸಿದರು.