ಡಾ.ಮನಮೋಹನ್ ಸಿಂಗ್, ಪ್ರಧಾನಿ ಮೋದಿ ಸಾಂದರ್ಭಿಕ ಚಿತ್ರ 
ದೇಶ

ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಸಿ: ಪ್ರಧಾನಿ ಮೋದಿಗೆ ಖರ್ಗೆ ಒತ್ತಾಯ

ನಾಳೆ ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ ನಡೆಯಲಿರುವ ಸ್ಥಳ ದೇಶದ ಹೆಮ್ಮೆಯ ಪುತ್ರನ ಸ್ಮಾರಕದ ಪವಿತ್ರ ಸ್ಥಳವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ.

ನವದೆಹಲಿ: ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಒತ್ತಾಯಿಸಿದ್ದಾರೆ.

ಎರಡು ಅವಧಿಗೆ ದೇಶದ ಪ್ರಧಾನಿಯಾಗಿದ್ದ ಸಿಂಗ್ ಅವರ ಸ್ಮಾರಕ ಸ್ಥಾಪಿಸುವ ಕುರಿತು ಮೋದಿ ಮಾತನಾಡಿದ ಬಳಿಕ ಅವರಿಗೆ ಪತ್ರ ಬರೆದಿರುವ ಖರ್ಗೆ, ನಾಳೆ ಮನಮೋಹನ್ ಸಿಂಗ್ ಅಂತ್ಯಸಂಸ್ಕಾರ ನಡೆಯಲಿರುವ ಸ್ಥಳ ದೇಶದ ಹೆಮ್ಮೆಯ ಪುತ್ರನ ಸ್ಮಾರಕದ ಪವಿತ್ರ ಸ್ಥಳವಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

ರಾಷ್ಟ್ರನಾಯಕರು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸುವ ಸಂಪ್ರದಾಯವಿದೆ. ಅದರಂತೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿಯೇ ಮನಮೋಹನ್ ಸಿಂಗ್ ಅಂತ್ಯ ಸಂಸ್ಕಾರ ನಡೆಯಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್‌ ಗವರ್ನರ್ ಆಗಿ, ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಸೇರಿದಂತೆ ಇತರ ಅನೇಕ ಕೆಲಸಗಳನ್ನು ನಿಬಾಯಿಸಿ ದೇಶದ ಆರ್ಥಿಕ ಮತ್ತು ಹಣಕಾಸಿನ ವಿಷಯಗಳ ಅಪಾರ ಪಾಂಡಿತ್ಯ ಹೊಂದಿದ್ದ ಡಾ. ಮನ್ ಮೋಹನ್ ಸಿಂಗ್ ಅವರ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ವಿಶ್ವ ನಾಯಕರು ಗೌರವಿಸುತ್ತಿದ್ದರು ಎಂದಿದ್ದಾರೆ.

ಜಾಗತಿಕ ಆರ್ಥಿಕ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸುವಲ್ಲಿ ಸಿಂಗ್ ಅವರ ಸಲಹೆ, ನಾಯಕತ್ವ ಮತ್ತು ಕೊಡುಗೆ ಪ್ರಮುಖವಾದದ್ದು, ರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ, ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರೊಂದಿಗೆ ಡಾ. ಮನಮೋಹನ್ ಸಿಂಗ್ ಅವರು ದೇಶವನ್ನು ಬಿಕ್ಕಟ್ಟಿನಿಂದ ಹೊರತೆಗೆದು ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯತ್ತ ಕೊಂಡೊಯ್ದಿದ್ದರು ಎಂದು ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಆರ್ಥಿಕ ಬಿಕ್ಕಟ್ಟನ್ನು ತಗ್ಗಿಸುವಲ್ಲಿ ಸಿಂಗ್ ಅವರ ಸಲಹೆ, ನಾಯಕತ್ವ ಮತ್ತು ಕೊಡುಗೆ ಪ್ರಮುಖವಾದದ್ದು, ರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ, ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್ ಅವರೊಂದಿಗೆ ಡಾ. ಮನಮೋಹನ್ ಸಿಂಗ್ ಅವರು ದೇಶವನ್ನು ಬಿಕ್ಕಟ್ಟಿನಿಂದ ಹೊರತೆಗೆದು ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯತ್ತ ಕೊಂಡೊಯ್ದಿದ್ದರು ಎಂದು ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಆಗಲು ಅನ್ ಫಿಟ್, ಜ್ಞಾನೇಶ್ ಕುಮಾರ್​ರನ್ನು ತಕ್ಷಣ ಬಂಧಿಸಿ; ಮತ್ತೆ ಚುನಾವಣೆ ನಡೆಸಿ: ಮಮತಾ ಬ್ಯಾನರ್ಜಿ

ನಾವು 'ಭಯೋತ್ಪಾದನೆಯ ಸಂತ್ರಸ್ತರು, ಆದರೆ ಮಂಡಿಯೂರಿ ಶರಣಾಗಲಿಲ್ಲ; UN ಸಾಮಾನ್ಯ ಸಭೆಯಲ್ಲಿ ಇರಾನ್ ಅಧ್ಯಕ್ಷರ ಪ್ರಬಲ ಭಾಷಣ!

ಆ ಮೆಂಟಲ್ ಬಗ್ಗೆ ನನ್ನ ಕೇಳಬೇಡ್ರಿ; ನೀವ್ಯಾಕೆ ದಿನಾ ಆ ವ್ಯಕ್ತಿಗೆ ಮೈಕ್ ಹಿಡೀತೀರಾ: ಮಾಧ್ಯಮ ವಿರುದ್ಧ ಪ್ರತಾಪ್ ಸಿಂಹ ಗರಂ!

IPL Auction: ಮೂರು ವರ್ಷದ ಬಳಿಕ ಮತ್ತೆ ಭಾರತದಲ್ಲೇ ಐಪಿಎಲ್ ಹರಾಜು; ಸ್ಥಳ, ದಿನಾಂಕ ಘೋಷಣೆ

ಸದನದಲ್ಲೇ ಕಾಂಗ್ರೆಸ್ ಶಾಸಕರ ನಡುವೆ ಜಟಾಪಟಿ; ಅನಿರೀಕ್ಷಿತ ಹೈಡ್ರಾಮಾ: 'ಸುಮ್ನಿರಮ್ಮಾ, ಹೊಡಿಬೇಡ' ಎಂದ ಆರ್ ಅಶೋಕ್!