KBC ವೇದಿಕೆಯಲ್ಲಿ ಆಮಿರ್ ಖಾನ್‌; ‘4ನೇ ಮದುವೆ ಯಾವಾಗ?’; ಕಾಲೆಳೆದ ನೆಟ್ಟಿಗರು, Amitabh bachchan ಶೋ Promoಗೆ ಕಮೆಂಟ್‌ಗಳ ಮಹಾಪೂರ..!

ಹೊಸ ಪ್ರೋಮೋದಲ್ಲಿ ಆಮಿರ್ ಖಾನ್‌ ಅವರು ಕೆಬಿಸಿ 18ರ ಈ ಬಾರಿಯ ಘೋಷವಾಕ್ಯ ‘ಸೋಚ್ನಾ ಪಡೇಗಾ’ ಕುರಿತು ಅಮಿತಾಭ್ ಬಚ್ಚನ್‌ ಅವರನ್ನು ಪ್ರಶ್ನಿಸುತ್ತಾರೆ. “ಪ್ರೋಮೋದಲ್ಲಿ ‘ಸೋಚ್ನಾ ಪಡೇಗಾ’ ಎಂದು ಹೇಳಿದ್ದೀರಿ. ಹಾಗಾದರೆ ಏನು ಯೋಚಿಸಬೇಕು?” ಎಂದು ಆಮಿರ್‌, ಅಮಿತಾಭ್‌ ಅವರನ್ನು ಕೇಳುತ್ತಾರೆ.
Aamir khan
ಕೆಬಿಸಿ 18 ಸೀಸನ್ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಆಮಿರ್ ಖಾನ್.
Updated on

ಮುಂಬೈ: ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಮೂರನೇ ವಿವಾಹವಾದ ಬಾಲಿವುಡ್ ನಟ ಆಮೀರ್ ಖಾನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್'ಗೆ ಒಳಗಾಗುತ್ತಿದ್ದಾರೆ.

ಅಮಿತಾಭ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡಪತಿ 18' (KBC 18) ರ ಹೊಸ ಪ್ರೋಮೋಗಳು ಬಿಡುಗಡೆಯಾಗಿದ್ದು, 18ನೇ ಸೀಸನ್‌ನಲ್ಲಿ ಆಮಿರ್ ಖಾನ್‌ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಆಮಿರ್ ಖಾನ್‌ ಜೊತೆಗೆ ಸನ್ನಿ ಡಿಯೋಲ್‌ ಹಾಗೂ ಪ್ರೀತಿ ಜಿಂಟಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ನಿರೂಪಕ ಅಮಿತಾಭ್ ಬಚ್ಚನ್‌ ಅವರೊಂದಿಗೆ ತಮ್ಮ ಮುಂಬರುವ ‘ಬಟ್ವಾರಾ 1947’ ಸಿನಿಮಾದ ಪ್ರಚಾರ ನಡೆಸಲಿದ್ದಾರೆ. ಈ ಸಿನಿಮಾ ಆಗಸ್ಟ್‌ 14ರಂದು ತೆರೆಗೆ ಬರಲು ಸಿದ್ಧವಾಗಿದೆ.

ಇದರ ಬೆನ್ನಲ್ಲೇ, ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಆಮೀರ್ ಖಾನ್ ಅವರ ವೈಯಕ್ತಿಕ ಜೀವನವನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡುತ್ತಿದ್ದಾರೆ.

ಹೊಸ ಪ್ರೋಮೋದಲ್ಲಿ ಆಮಿರ್ ಖಾನ್‌ ಅವರು ಕೆಬಿಸಿ 18ರ ಈ ಬಾರಿಯ ಘೋಷವಾಕ್ಯ ‘ಸೋಚ್ನಾ ಪಡೇಗಾ’ ಕುರಿತು ಅಮಿತಾಭ್ ಬಚ್ಚನ್‌ ಅವರನ್ನು ಪ್ರಶ್ನಿಸುತ್ತಾರೆ. “ಪ್ರೋಮೋದಲ್ಲಿ ‘ಸೋಚ್ನಾ ಪಡೇಗಾ’ ಎಂದು ಹೇಳಿದ್ದೀರಿ. ಹಾಗಾದರೆ ಏನು ಯೋಚಿಸಬೇಕು?” ಎಂದು ಆಮಿರ್‌, ಅಮಿತಾಭ್‌ ಅವರನ್ನು ಕೇಳುತ್ತಾರೆ.

ಇದಕ್ಕೆ ತಮ್ಮ ಎಂದಿನ ಶೈಲಿಯಲ್ಲಿ ಪ್ರತಿಕ್ರಿಯಿಸುವ ಅಮಿತಾಭ್‌, ಈ ಬಾರಿ ಎಲ್ಲವೂ ಅಷ್ಟು ಸುಲಭವಾಗಿರುವುದಿಲ್ಲ. ಸ್ಪರ್ಧಿಗಳು ಉತ್ತರಿಸುವ ಮೊದಲು ಯೋಚಿಸಬೇಕಾಗುತ್ತದೆ ಎಂಬರ್ಥದಲ್ಲಿ ಹೇಳುತ್ತಾರೆ. ಅದಕ್ಕೆ ಆಮಿರ್‌, “ಸೋಚ್ನಾ ಪಡೇಗಾ ಸರ್‌… ವಾಕೈ ಸೋಚ್ನಾ ಪಡೇಗಾ” ಎಂದು ಪ್ರತಿಕ್ರಿಯಿಸುತ್ತಾರೆ.

ಆಮಿರ್‌ ಮತ್ತು ಅಮಿತಾಭ್‌ ನಡುವಿನ ಈ ಸಂಭಾಷಣೆ ವೀಕ್ಷಕರ ಗಮನ ಸೆಳೆದಿದ್ದರೂ, ಕೆಲವರು ಪ್ರೋಮೋದ ಕಾಮೆಂಟ್‌ ವಿಭಾಗದಲ್ಲಿ ನೆಟ್ಟಿಗರು ಆಮಿರ್‌ ಅವರ ವೈಯಕ್ತಿಕ ಜೀವನದ ಬಗ್ಗೆ ತಮಾಷೆ ಮಾಡಿದ್ದಾರೆ.

ಕಳೆದ ತಿಂಗಳಷ್ಟೇ ಆಮಿರ್‌ ಮೂರನೇ ಬಾರಿಗೆ ವಿವಾಹವಾಗಿರುವ ಹಿನ್ನೆಲೆಯಲ್ಲಿ, ಅವರ ಮುಂದಿನ ಮದುವೆ ಯಾವಾಗ ಎಂಬ ಕುರಿತಾಗಿಯೇ ಕೆಲವರು ಕಾಲೆಳೆದಿದ್ದಾರೆ.

Aamir khan
ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುವವರನ್ನು ಸುಮ್ಮನೆ ಬಿಡಬಾರದು; ಆಮಿರ್ ಖಾನ್ ಕೊಂದವರಿಗೆ 5 ಕೋಟಿ ರೂ ಬಹುಮಾನ ಘೋಷಿಸಿದ ಜಗದ್ಗುರು! Video

“ನಾಲ್ಕನೇ ಮದುವೆ ಯಾವಾಗ ಎಂದು ಅವರನ್ನು ಕೇಳಿ” ಎಂದು ಒಬ್ಬ ನೆಟ್ಟಿಗ ತಮಾಷೆ ಮಾಡಿದ್ದರೆ, ಮತ್ತೊಬ್ಬರು, “ಅವರು ತಮ್ಮ ಮದುವೆಗಳ ಬಗ್ಗೆ ಮಾತನಾಡಲು ಬಂದಿದ್ದಾರೆಯೇ?” ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನು ಕೆಲವರು, ಮೂರನೇ ಮದುವೆಯ ನಂತರ ಮತ್ತೊಮ್ಮೆ ಮದುವೆ ಬಗ್ಗೆ ‘ಯೋಚಿಸಬೇಕಾಗಬಹುದು’ ಎಂದು ಹಾಸ್ಯ ಮಾಡಿದ್ದಾರೆ.

ಆಮಿರ್ ಖಾನ್‌ ಮತ್ತು ಗೌರಿ ಸ್ಪ್ರಾಟ್‌ ಜುಲೈ 5, 2026ರಂದು ಮುಂಬೈನ ಬಾಂದ್ರಾದಲ್ಲಿರುವ ಆಮಿರ್‌ ಅವರ ನಿವಾಸದಲ್ಲಿ ಆಪ್ತರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.

ವಿಶೇಷ ವಿವಾಹ ಕಾಯ್ದೆಯಡಿ ಇಬ್ಬರೂ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದರು. ಈ ಮೂಲಕ ಆಮಿರ್‌ ಅವರ ಮೂರನೇ ಮದುವೆ ಇದಾಗಿದೆ.

ಇದಕ್ಕೂ ಮೊದಲು ಆಮಿರ್ ಖಾನ್‌ ಅವರು ರೀನಾ ದತ್ತಾ ಅವರನ್ನು 1986ರಲ್ಲಿ ವಿವಾಹವಾಗಿದ್ದರು. 16 ವರ್ಷಗಳ ದಾಂಪತ್ಯದ ಬಳಿಕ 2002ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ಈ ದಂಪತಿಗೆ ಜುನೈದ್ ಖಾನ್‌ ಮತ್ತು ಇರಾ ಖಾನ್‌ ಎಂಬ ಇಬ್ಬರು ಮಕ್ಕಳಿದ್ದಾರೆ.

2005ರಲ್ಲಿ ಆಮಿರ್‌ ಅವರು ಚಿತ್ರನಿರ್ದೇಶಕಿ ಕಿರಣ್ ರಾವ್‌ ಅವರನ್ನು ವಿವಾಹವಾಗಿದ್ದರು. 2011ರಲ್ಲಿ ಸರೊಗಸಿ ಮೂಲಕ ಅವರಿಗೆ ಆಜಾದ್ ರಾವ್ ಖಾನ್‌ ಎಂಬ ಪುತ್ರ ಜನಿಸಿದ್ದರು. 15 ವರ್ಷಗಳ ದಾಂಪತ್ಯದ ಬಳಿಕ 2021ರಲ್ಲಿ ಆಮಿರ್‌ ಮತ್ತು ಕಿರಣ್‌ ರಾವ್‌ ಬೇರ್ಪಡುವುದಾಗಿ ಘೋಷಿಸಿದ್ದರು. ಆದರೆ, ಆಜಾದ್‌ ಅವರನ್ನು ಒಟ್ಟಾಗಿ ಬೆಳೆಸುವುದಾಗಿ ಮತ್ತು ಕುಟುಂಬವಾಗಿ ಮುಂದುವರಿಯುವುದಾಗಿ ಇಬ್ಬರೂ ತಿಳಿಸಿದ್ದರು.

ಆಮಿರ್‌ ಮತ್ತು ಗೌರಿ ಸ್ಪ್ರಾಟ್‌ ಅವರ ಸಂಬಂಧ 2025ರಲ್ಲಿ ಬಹಿರಂಗವಾಗಿತ್ತು. ಆಮಿರ್‌ ಅವರ 60ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಅವರು ಗೌರಿಯನ್ನು ಪರಿಚಯಿಸಿದ್ದರು. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದು, ನಂತರ ಅವರ ಸಂಬಂಧ ಪ್ರೀತಿಗೆ ತಿರುಗಿತು ಎಂದು ಆಮಿರ್‌ ಹೇಳಿದ್ದರು. ಬಳಿಕ ಜುಲೈ 5ರಂದು ವಿವಾಹವಾಗುವುದಾಗಿ ಘೋಷಿಸಿದ್ದರು.

ಇದೇ ವೇಳೆ, ‘ಕೌನ್ ಬನೇಗಾ ಕರೋಡ್‌ಪತಿ’ ತನ್ನ 18ನೇ ಸೀಸನ್‌ನೊಂದಿಗೆ ಮತ್ತೆ ಕಿರುತೆರೆಗೆ ಮರಳುತ್ತಿದೆ. ಈ ಬಾರಿಯೂ ಅಮಿತಾಭ್ ಬಚ್ಚನ್‌ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ. ‘ಸೋಚ್ನಾ ಪಡೇಗಾ’ ಎಂಬ ಘೋಷವಾಕ್ಯದೊಂದಿಗೆ ಬರುತ್ತಿರುವ ಈ ಸೀಸನ್‌ನಲ್ಲಿ ಕೇವಲ ಉತ್ತರ ತಿಳಿದಿರುವುದಷ್ಟೇ ಅಲ್ಲದೆ, ಯೋಚಿಸಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಕೆಬಿಸಿ 18 ಆಗಸ್ಟ್‌ 10ರಂದು ರಾತ್ರಿ 9 ಗಂಟೆಗೆ ಸೋನಿ ಎಂಟರ್‌ಟೇನ್‌ಮೆಂಟ್‌ ಟೆಲಿವಿಷನ್‌ ಹಾಗೂ ಸೋನಿ ಲಿವ್‌ನಲ್ಲಿ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್‌ ಮತ್ತು ಸನ್ನಿ ಡಿಯೋಲ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ಕೂಡ ವಿಶೇಷವಾಗಿದೆ.

ಅಮಿತಾಭ್ ಬಚ್ಚನ್‌ ಮತ್ತು ಸನ್ನಿ ಡಿಯೋಲ್‌ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ‘ಶೋಲೆ’, ‘ಚುಪ್‌ಕೆ ಚುಪ್‌ಕೆ’ ಹಾಗೂ ‘ರಾಮ್ ಬಲರಾಮ್’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ಇಬ್ಬರೂ ನಟಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com