ಕೆಟಿ ರಾಮರಾವ್ 
ದೇಶ

Formula-E race: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕ ಕೆಟಿ ರಾಮರಾವ್‍ಗೆ ಇಡಿ ಸಮನ್ಸ್

ಕೆಟಿಆರ್ ಎಂದು ಜನಪ್ರಿಯರಾಗಿರುವ 48 ವರ್ಷದ ರಾಮರಾವ್ ವಿರುದ್ಧದ ತನಿಖೆಯು ಫೆಬ್ರುವರಿಯಲ್ಲಿ ಹಿಂದಿನ ಬಿಆರ್‌ಎಸ್ ಆಡಳಿತದಲ್ಲಿ ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ಸಂಘಟಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಹೈದರಾಬಾದ್: 2023ರ ಫೆಬ್ರುವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಫಾರ್ಮುಲಾ-ಇ-ರೇಸ್‌ನಲ್ಲಿನ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕ ಕೆಟಿ ರಾಮರಾವ್ ಮತ್ತು ಇತರ ಕೆಲವರಿಗೆ ಜಾರಿ ನಿರ್ದೇಶನಾಲಯವು (ಇಡಿ) ಮುಂದಿನ ತಿಂಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ತೆಲಂಗಾಣ ಪೊಲೀಸ್ ಭ್ರಷ್ಟಾಚಾರ ನಿರ್ಗಹ ದಳ (ಎಸಿಬಿ) ದೂರನ್ನು ಗಮನದಲ್ಲಿಟ್ಟುಕೊಂಡು ತನಿಖಾ ಸಂಸ್ಥೆಯು ಕಳೆದ ವಾರ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇಸಿಐಆರ್ ಅಥವಾ ಎಫ್‌ಐಆರ್ ದಾಖಲಿಸಿದೆ.

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಮತ್ತು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ರಾಮರಾವ್ ಜನವರಿ 7 ರಂದು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ತನಿಖಾ ಸಂಸ್ಥೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಕುಮಾರ್ ಮತ್ತು ನಿವೃತ್ತ ಅಧಿಕಾರಿ ಮತ್ತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಎಚ್‌ಎಂಡಿಎ) ಮಾಜಿ ಮುಖ್ಯ ಎಂಜಿನಿಯರ್ ಬಿಎಲ್‌ಎನ್ ರೆಡ್ಡಿ ಅವರಿಗೆ ಕ್ರಮವಾಗಿ ಜನವರಿ 2 ಮತ್ತು ಜನವರಿ 3 ರಂದು ಸಮನ್ಸ್ ನೀಡಲಾಗಿದೆ.

ಕೆಟಿಆರ್ ಎಂದು ಜನಪ್ರಿಯರಾಗಿರುವ 48 ವರ್ಷದ ರಾಮರಾವ್ ವಿರುದ್ಧದ ತನಿಖೆಯು ಫೆಬ್ರುವರಿಯಲ್ಲಿ ಹಿಂದಿನ ಬಿಆರ್‌ಎಸ್ ಆಡಳಿತದಲ್ಲಿ ಹೈದರಾಬಾದ್‌ನಲ್ಲಿ ಫಾರ್ಮುಲಾ-ಇ ರೇಸ್ ಸಂಘಟಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸೂಕ್ತ ನಿಯಮಗಳನ್ನು ಪಾಲಿಸದೆಯೇ ಕಂಪನಿಗೆ 55 ಕೋಟಿ ರೂ.ಗಳನ್ನು ವರ್ಗಾಯಿಸಲು ಅನುಮತಿ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.

ಮೂಲಗಳ ಪ್ರಕಾರ, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ನಿಬಂಧನೆಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯವು (ED) ಈ ಪ್ರಕರಣದಲ್ಲಿ ಸಂಭವನೀಯ ವಿದೇಶಿ ವಿನಿಮಯ ನೀತಿ ಉಲ್ಲಂಘನೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.

ಇದರಲ್ಲಿ ಭ್ರಷ್ಟಾಚಾರ ಎಲ್ಲಿದೆ? ನಾವು 55 ಕೋಟಿ ರೂ. ಪಾವತಿಸಿದ್ದೇವೆ. ಅವರು (ಫಾರ್ಮುಲಾ-ಇ) ಪಾವತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ರಾಮರಾವ್ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT