ಅಖಿಲೇಶ್ ಯಾದವ್ online desk
ದೇಶ

ಸಿಎಂ ನಿವಾಸದ ಕೆಳಗೂ ಶಿವಲಿಂಗವಿದೆ, ಉತ್ಖನನ ನಡೆಯಲಿ: ಅಖಿಲೇಶ್ ಯಾದವ್ ವ್ಯಂಗ್ಯ; 1,000 ಟನ್ ಚಿನ್ನಕ್ಕಾಗಿ ಅವರು ಉತ್ಖನನ ಮಾಡಿರಲಿಲ್ಲವೇ?: ಬಿಜೆಪಿ

ಲಖನೌನಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್, ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವುದಕ್ಕಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಖನನ ನಡೆಸುತ್ತಿದೆ.

ಸಂಭಾಲ್ ನಲ್ಲಿ ನಡೆಯುತ್ತಿರುವ ಉತ್ಖನನದ ಬಗ್ಗೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದು, ಸಿಎಂ ಅಧಿಕೃತ ನಿವಾಸದ ಕೆಳಭಾಗದಲ್ಲಿಯೂ ಶಿವಲಿಂಗವಿದೆ ಎಂದು ಹೇಳಿದ್ದಾರೆ.

ಸಂಭಾಲ್ ನಲ್ಲಿ ಮುಘಲ್ ಕಾಲದ ಮಸೀದಿಯ ಆವರಣ, ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ಖನನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದ ತಿಂಗಳು ಘರ್ಷಣೆ ಉಂಟಾಗಿತ್ತು.

ಈ ಬೆಳವಣಿಗೆಗಳ ಬಗ್ಗೆ ಲಖನೌನಲ್ಲಿ ಮಾತನಾಡಿರುವ ಅಖಿಲೇಶ್ ಯಾದವ್, ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಿಕೊಳ್ಳುವುದಕ್ಕಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಉತ್ಖನನ ನಡೆಸುತ್ತಿದೆ. ಇದು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಮಾಡಲಾಗಿರುವ ಉಪಾಯ ಎಂದು ವ್ಯಂಗ್ಯವಾಡಿದ್ದಾರೆ.

"ಮುಖ್ಯಮಂತ್ರಿಯವರ ನಿವಾಸದ ಕೆಳಗೆ ಶಿವಲಿಂಗವಿದೆ ಎಂದು ನಾವು ನಂಬುತ್ತೇವೆ. ಅಲ್ಲಿಯೂ ಉತ್ಖನನ ನಡೆಸಬೇಕು" ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

"ಬುಲ್ಡೋಜರ್‌ಗಳಿಂದ ಅಮಾಯಕರ ಮನೆಗಳನ್ನು ಅಕ್ರಮವಾಗಿ ಕೆಡವಲಾಗುತ್ತಿದೆ" ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.

"ಇದು ಅಭಿವೃದ್ಧಿಯಲ್ಲ ಆದರೆ ವಿನಾಶ. ಮುಖ್ಯಮಂತ್ರಿಯ ಕೈಯಲ್ಲಿ ಅಭಿವೃದ್ಧಿಯ ರೇಖೆಯಿಲ್ಲ, ವಿನಾಶದ ಗೆರೆ ಇದೆ" ಎಂದು ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.

ಅಖಿಲೇಶ್ ಯಾದವ್‌ಗೆ ಬಿಜೆಪಿ ಪ್ರತಿಕ್ರಿಯೆ

ಅಖಿಲೇಶ್ ಯಾದವ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ, ಸಂಭಾಲ್‌ನಲ್ಲಿ ಉತ್ಖನನ ನಡೆದರೆ ಅವರಿಗೇನು ಸಮಸ್ಯೆ? ಎಂದು ಪ್ರಶ್ನಿಸಿದ್ದಾರೆ.

"2013 ರಲ್ಲಿ, ಅಖಿಲೇಶ್ ಯಾದವ್ 1,000 ಟನ್ ಚಿನ್ನವನ್ನು ಅಗೆಯಲು ಇಡೀ ರಾಜ್ಯದ ಆಡಳಿತ ಯಂತ್ರವನ್ನು ಬಳಸಿದರು, ಅವರು ಚಿನ್ನವನ್ನು ಉತ್ಖನನ ಮಾಡಲು ಸಿದ್ಧರಾಗಿದ್ದಾರೆ, ಆದರೆ 'ಶಿವಲಿಂಗ'ದ ಉತ್ಖನನದ ಬಗ್ಗೆ ಅವರಿಗೆ ಸಮಸ್ಯೆ ಇದೆ. ಅದಕ್ಕಾಗಿಯೇ ಅವರು ಮುಖ್ಯಮಂತ್ರಿ ನಿವಾಸವನ್ನು ಉತ್ಖನನದ ಬಗ್ಗೆ ಮಾತನಾಡುತ್ತಿದ್ದಾರೆ."ತ್ರಿಪಾಠಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಸಮಾಜವಾದಿ ಪಕ್ಷಕ್ಕೆ "ನಾಚಿಕೆಯಿಲ್ಲ" ಎಂದು ಕಟುವಾಗಿ ಟೀಕಿಸಿದ್ದಾರೆ. "ವೋಟ್ ಬ್ಯಾಂಕ್‌ ಗಾಗಿ 'ಶಿವಲಿಂಗವನ್ನು ಅಪಹಾಸ್ಯ ಮಾಡುತ್ತಿದ್ದಾರೆ"ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT