ನಿರ್ಮಲಾ ಸೀತಾರಾಮನ್ 
ದೇಶ

ನಾವು ಜನಪರ ಕೆಲಸ ಮಾಡಿದ್ದೇವೆ, ಮೂರನೇ ಬಾರಿ ಅಧಿಕಾರಕ್ಕೆ ಬರಲು ನಮ್ಮನ್ನು ಆಶೀರ್ವದಿಸಿ: ನಿರ್ಮಲಾ ಸೀತಾರಾಮನ್ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್ 2024 ನ್ನು ಮಂಡಿಸಿ ಕೇಂದ್ರ ಸರ್ಕಾರದ ಉತ್ತಮ ನೀತಿ-ನಿರೂಪಣೆ, ಯೋಜನೆಗಳು ಹಾಗೂ ಸರ್ಕಾರ ಮಾಡಿರುವ ಕೆಲಸಗಳು ಸತತ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ಮರಳಲು ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್ 2024 ನ್ನು ಮಂಡಿಸಿ ಕೇಂದ್ರ ಸರ್ಕಾರದ ಉತ್ತಮ ನೀತಿ-ನಿರೂಪಣೆ, ಯೋಜನೆಗಳು ಹಾಗೂ ಸರ್ಕಾರ ಮಾಡಿರುವ ಕೆಲಸಗಳು ಸತತ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ಮರಳಲು ಸಹಾಯ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿ ಮಾತನಾಡಿದ ಅವರು, ನಮ್ಮ ಯುವಜನತೆಯನ್ನು ಒಳಗೊಂಡ ದೇಶವು ಹೆಚ್ಚಿನ ಆಕಾಂಕ್ಷೆಗಳನ್ನು ಹೊಂದಿದೆ, ಇಂದಿನ ವರ್ತಮಾನದ ಬಗ್ಗೆ ಹೆಮ್ಮೆ ಮತ್ತು ಉಜ್ವಲ ಭವಿಷ್ಯದ ಭರವಸೆ ಮತ್ತು ವಿಶ್ವಾಸವನ್ನು ಹೊಂದಿದೆ. ನಮ್ಮ ಸರ್ಕಾರದ ಉತ್ತಮ ಕೆಲಸ ಕಂಡು ವಿಶ್ವಾಸದಿಂದ ದೇಶದ ಜನರು ಮತ್ತೊಮ್ಮೆ ಆಶೀರ್ವದಿಸುವ ವಿಶ್ವಾಸದಲ್ಲಿ ನಾವಿದ್ದೇವೆ ಎಂದರು. 

ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರಿಗೆ ಬಹು ಆಯಾಮದ ಬಡತನದಿಂದ ಹೊರಬರಲು ಸರ್ಕಾರ ಸಹಾಯ ಮಾಡಿದೆ. ಎರಡನೇ ಅವಧಿಯಲ್ಲಿ, ನಮ್ಮ ಸರ್ಕಾರವು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ ಘೋಷವಾಕ್ಯದಂತೆ ನಡೆದಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

IPL 2026 Qualifier 1: ಐಪಿಎಲ್ ಇತಿಹಾಸದ ಅತ್ಯಪರೂಪದ ದಾಖಲೆ ಬರೆದ Virat Kohli; ಡಬಲ್ ಆಘಾತ ಕೊಟ್ಟ Holder

ಕರ್ನಾಟಕ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಚುನಾವಣೆ ಘೋಷಣೆ; ಜೂನ್ 18 ರಂದು ಮತದಾನ

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು ಮೆಟ್ರೋ ಸಂಚಾರ ವ್ಯತ್ಯಯ!

SCROLL FOR NEXT