ರಾಹುಲ್ ಗಾಂಧಿ 
ದೇಶ

ಹಿಮಂತಾ ಬಿಸ್ವಾ ಶರ್ಮಾ, ಮಿಲಿಂದ್ ದಿಯೋರಾ ರಂತಹ ನಾಯಕರು ಕಾಂಗ್ರೆಸ್ ಬಿಟ್ಟು ಹೋಗಲಿ: ರಾಹುಲ್ ಗಾಂಧಿ

ಹಿಮಂತ ಮತ್ತು ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆಯುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರಂತಹ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿಲ್ಲ.. ಪಕ್ಷ ಬಿಟ್ಟು ಹೋಗಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕೋಲ್ಕತಾ: ಹಿಮಂತ ಮತ್ತು ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆಯುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅವರಂತಹ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿಲ್ಲ.. ಪಕ್ಷ ಬಿಟ್ಟು ಹೋಗಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ  'ಡಿಜಿಟಲ್ ಮೀಡಿಯಾ ವಾರಿಯರ್ಸ್' ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿಯವರಲ್ಲಿ ಕಾಂಗ್ರೆಸ್ ಪಕ್ಷದ 'ಪತನ' ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ )ಬಗ್ಗೆ ಕೇಳಲಾಯಿತು. ಈ ವೇಳೆ ಉತ್ತರಿಸಿದ ರಾಹುಲ್ ಗಾಂಧಿ, 'ಹಿಮಂತ ಮತ್ತು ಮಿಲಿಂದ್‌ರಂತಹವರು ಕಾಂಗ್ರೆಸ್ ತೊರೆಯುವುದನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹಿಮಂತ ಮತ್ತು ಮಿಲಿಂದ್ ಅವರಂತಹ ಜನರು ಪಕ್ಷ ತೊರೆಯಬೇಕಿತ್ತ. ನಾನು ಅದಕ್ಕೆ ಸಂಪೂರ್ಣವಾಗಿ ಒಪ್ಪುತ್ತೇನೆ. ಹಿಮಂತ ಅವರು ಕಾಂಗ್ರೆಸ್‌ನ ರಾಜಕೀಯವಲ್ಲದ ನಿರ್ದಿಷ್ಟ ರೀತಿಯ ರಾಜಕೀಯವನ್ನು ಪ್ರತಿನಿಧಿಸುತ್ತಾರೆ. ಮುಸ್ಲಿಮರ ಬಗ್ಗೆ ಹಿಮಂತ ಹೇಳುವ ಕೆಲವು ಹೇಳಿಕೆಗಳನ್ನು ನೀವು ನೋಡಿದ್ದೀರಾ? ನಾನು ರಕ್ಷಿಸಲು ಬಯಸುವ ಕೆಲವು ಮೌಲ್ಯಗಳಿವೆ ಎಂದು ಹೇಳಿದರು.

ಹಿಮಂತ ಅವರ ಹೇಳಿಕೆಯಲ್ಲೇ ಮಿಲಿಂದ್ ದಿಯೋರಾ ಅವರನ್ನು ರಾಹುಲ್ ಉಲ್ಲೇಖಿಸಿದ್ದು, ಮಿಲಿಂದ್ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಕಾಂಗ್ರೆಸ್ ಮತ್ತು ಉದ್ಧವ್ ಅವರ ಶಿವಸೇನಾ, ಶರದ್ ಪವಾರ್ ಅವರ ಎನ್‌ಸಿಪಿ ಒಟ್ಟಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿರುವ ಮಹಾರಾಷ್ಟ್ರದಲ್ಲಿ ಇಂಡಿಯಾ ಸೀಟು ಹಂಚಿಕೆಯ ನಡುವಿನ ಭಿನ್ನಾಭಿಪ್ರಾಯದ ನಂತರ ಪಕ್ಷವನ್ನು ತೊರೆದು ಮಿಲಿಂದ್ ದಿಯೋರಾ ಏಕನಾಥ್ ಶಿಂಧೆ ಅವರ ಶಿವಸೇನಾ ಬಣವನ್ನು ಸೇರಿಕೊಂಡರು.

ಒತ್ತಡವಿಲ್ಲದೆ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಲಿಲ್ಲ
ಜನವರಿ 31 ರಂದು ಇಡಿ ಹೇಮಂತ್ ಸೊರೆನ್ ಅವರನ್ನು ಬಂಧಿಸುವ ಮೊದಲು ರಾಹುಲ್ ಗಾಂಧಿಯವರ ಸಂವಾದ ನಡೆಯಿತು. “ಇಂದು ಲಾಲು ಜಿಯನ್ನು ಪ್ರಶ್ನಿಸಲಾಗಿದೆ, ತೇಜಸ್ವಿ ಅವರನ್ನು ವಿಚಾರಣೆ ಮಾಡಲಾಗಿದೆ, ಹೇಮಂತ್ ಸೊರೆನ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ, ಕೇಜ್ರಿವಾಲ್‌ಗೆ ಮತ್ತೊಂದು ಸಮನ್ಸ್ ನೀಡಲಾಗಿದೆ. ನನ್ನನ್ನು 55 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆನಿತೀಶ್ ಜೀ ಯಾವುದೇ ಒತ್ತಡವಿಲ್ಲದೆ ಇಂಡಿಯಾ ಮೈತ್ರಿಕೂಟ ತೊರೆದರು ಎಂದು ನೀವು ಯೋಚಿಸುತ್ತೀರಾ? ಎಂದು ರಾಹುಲ್ ಕೇಳಿದ್ದಾರೆ.

ಮಮತಾ ಮೈತ್ರಿ ಬಿಟ್ಟು ಹೋಗಿಲ್ಲ
ಇದೇ ವೇಳೆ “ಕಾಂಗ್ರೆಸ್ ಅಥವಾ ಮಮತಾ ಬ್ಯಾನರ್ಜಿ ಮೈತ್ರಿ ಮುಗಿದಿದೆ ಎಂದು ಹೇಳಿಲ್ಲ. ಮಮತಾ ಅವರು ಮೈತ್ರಿಯಲ್ಲಿದ್ದಾರೆ. ಮಾತುಕತೆ ನಡೆಯುತ್ತಿದೆ. ಅದನ್ನು ಪರಿಹರಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು. ಏತನ್ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಅಸ್ಸಾಂ ಮೂಲಕ ಹಾದುಹೋದಾಗ ರಾಹುಲ್ ಗಾಂಧಿ ಮತ್ತು ಹಿಮಂತ ಬಿಸ್ವಾ ಶರ್ಮಾ ನಡುವೆ ವಾಗ್ದಾಳಿ ನಡೆದಿತ್ತು. ಜನವರಿ 22 ರಂದು ಅಸ್ಸಾಂನಲ್ಲಿ ಅಶಾಂತಿಯನ್ನು ಪ್ರಚೋದಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಹಿಮಂತ ಆರೋಪಿಸಿದ್ದರು, ಆದರೆ ರಾಹುಲ್ ಹಿಮಂತ ಅವರನ್ನು ಭಾರತದ ‘ಅತ್ಯಂತ ಭ್ರಷ್ಟ ಸಿಎಂ’ ಎಂದು ಟೀಕಿಸಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT