ಮ್ಯಾನ್ಮಾರ್-ಭಾರತ 1,643 ಕಿಮೀ ಗಡಿಗೆ ಮುಳ್ಳುತಂತಿ ತಡೆಗೋಡೆ 
ದೇಶ

ಅಕ್ರಮ ವಲಸಿಗರಿಗೆ ತಡೆ: ಮ್ಯಾನ್ಮಾರ್-ಭಾರತ 1,643 ಕಿಮೀ ಗಡಿಗೆ ಮುಳ್ಳುತಂತಿ ಬೇಲಿ ನಿರ್ಮಾಣ- ಅಮಿತ್ ಶಾ

1,643 ಕಿಲೋಮೀಟರ್ ಉದ್ದದ ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲು ಭಾರತ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದ್ದಾರೆ.

ನವದೆಹಲಿ: 1,643 ಕಿಲೋಮೀಟರ್ ಉದ್ದದ ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲು ಭಾರತ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಘೋಷಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, '1,643 ಕಿಲೋಮೀಟರ್ ಉದ್ದದ ಭಾರತ-ಮ್ಯಾನ್ಮಾರ್ ಗಡಿಗೆ ಬೇಲಿ ಹಾಕಲು ಭಾರತ ನಿರ್ಧರಿಸಿದೆ. ಈ ಕ್ರಮವು ಉಭಯ ದೇಶಗಳ ಗಡಿಯಲ್ಲಿ ಪ್ರಚಲಿತದಲ್ಲಿರುವ ಮುಕ್ತ ಚಲನೆಯ ಆಡಳಿತವನ್ನು ವಾಸ್ತವಿಕವಾಗಿ ಕೊನೆಗೊಳಿಸಬಹುದು. ಅಕ್ರಮ ವಲಸಿಗರಿಗೆ ಕಡಿವಾಣ ಹಾಕಬಹುದು ಎಂದರು.

ಉಭಯ ದೇಶಗಳ ನಡುವಿನ Free Movement Regime (FMR) ಭಾರತ-ಮ್ಯಾನ್ಮಾರ್ ಗಡಿಯ ಸಮೀಪದಲ್ಲಿ ವಾಸಿಸುವ 16 ಕಿ.ಮೀ. ವ್ಯಾಪ್ತಿಯ ಜನರು ಯಾವುದೇ ದಾಖಲೆಗಳಿಲ್ಲದೆ ಪರಸ್ಪರರ ಪ್ರದೇಶಕ್ಕೆ ಮುಕ್ತವಾಗಿ ಓಡಾಡಲು ಅವಕಾಶ ನೀಡುತ್ತದೆ. ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಮೂಲಕ ಹಾದುಹೋಗುವ 1,643-ಕಿಮೀ ಉದ್ದದ ಭಾರತ-ಮ್ಯಾನ್ಮಾರ್ ಗಡಿಯು ಪ್ರಸ್ತುತ ಎಫ್‌ಎಂಆರ್ ಹೊಂದಿದೆ. ಇದನ್ನು ಭಾರತದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿ 2018 ರಲ್ಲಿ ಜಾರಿಗೆ ತರಲಾಯಿತು ಎಂದರು.

ಬುಡಕಟ್ಟು ಉಗ್ರಗಾಮಿಗಳು ಆಗಾಗ್ಗೆ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸುತ್ತಾರೆ ಎಂದು ಆರೋಪಿಸುತ್ತಿರುವ ಇಂಫಾಲ್ ಕಣಿವೆ ಮೂಲದ ಮೀಟೈ ಗುಂಪುಗಳ ನಿರಂತರ ಬೇಡಿಕೆಯೆಂದರೆ ಗಡಿಯಲ್ಲಿ ಬೇಲಿ ಹಾಕುವುದು. ಬೇಲಿ ಇಲ್ಲದ ಅಂತರಾಷ್ಟ್ರೀಯ ಗಡಿಯ ಲಾಭ ಪಡೆದು ಭಾರತಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಮೀಟೈ ಗುಂಪು ಆರೋಪಿಸುತ್ತಿವೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಅಮಿತ್ ಶಾ, ನರೇಂದ್ರ ಮೋದಿ ಸರ್ಕಾರವು ತೂರಲಾಗದ ಗಡಿಗಳನ್ನು ನಿರ್ಮಿಸಲು ಬದ್ಧವಾಗಿದೆ. ಇಡೀ 1643 ಕಿಲೋಮೀಟರ್ ಉದ್ದದ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಉತ್ತಮ ಕಣ್ಗಾವಲು ಅನುಕೂಲವಾಗುವಂತೆ, ಗಡಿಯಲ್ಲಿ ಗಸ್ತು ಟ್ರಾಕ್ ಅನ್ನು ಸಹ ಸುಸಜ್ಜಿತಗೊಳಿಸಲಾಗುವುದು" ಎಂದು ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT