ದೇಶ

ಅಜಿತ್ ಬಣ ನಿಜವಾದ NCP: ಚುನಾವಣಾ ಆಯೋಗದ ಆದೇಶ ಕುರಿತು 'ಸುಪ್ರೀಂ' ಮೊರೆ ಹೋಗಲು ಶರದ್ ಪವಾರ್ ಬಣ ನಿರ್ಧಾರ

Vishwanath S

ಮುಂಬೈ: ಅಜಿತ್ ಪವಾರ್ ನೇತೃತ್ವದ ಬಣ ನಿಜವಾದ ಎನ್‌ಸಿಪಿ ಎಂದು ಕೇಂದ್ರ ಚುನಾವಣಾ ಆಯೋಗದ ಆದೇಶದ ಬಗ್ಗೆ ಶರದ್ ಪವಾರ್ ಪುತ್ರಿ, ಎನ್‌ಸಿಪಿ ಲೋಕಸಭಾ ಸಂಸದೆ ಸುಪ್ರಿಯಾ ಸುಳೆ ಈ ಆದೇಶದಲ್ಲಿ ಯಾವುದೇ ಆಶ್ಚರ್ಯವಿಲ್ಲ. ನಾವು ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದಾಗಿ ಹೇಳಿದರು.

ಪಕ್ಷವನ್ನು ಸ್ಥಾಪಿಸಿದ ವ್ಯಕ್ತಿಯಿಂದ ಪಕ್ಷವನ್ನು ಕಿತ್ತುಕೊಂಡಿರುವುದು ಇದೇ ಮೊದಲು. ಈ ನಿರ್ಧಾರದಿಂದ ನನಗೆ ಆಶ್ಚರ್ಯವಿಲ್ಲ. ಇದು ನಿರೀಕ್ಷಿಸಲಾಗಿತ್ತು. ಮಹಾರಾಷ್ಟ್ರದ ವಿರುದ್ಧ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಮೊದಲು ಮರಾಠಿ ಜನರ ಪಕ್ಷವಾದ ಶಿವಸೇನೆಯನ್ನು ಮುಗಿಸಲು ಪ್ರಯತ್ನಿಸಿದರು. ಇದೀಗ ಶರದ್ ಪವಾರ್ ಅವರ ಮತ್ತೊಂದು ಮರಾಠಿ ಮಾನೂಸ್ ಪಕ್ಷ ಎನ್‌ಸಿಪಿಯನ್ನು ಮತ್ತೊಬ್ಬ ವ್ಯಕ್ತಿಗೆ ನೀಡಲಾಗಿದೆ. 

ಶರದ್ ಪವಾರ್ ಇದನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸಿದರು. ಅನೇಕ ನಾಯಕರು ತಮ್ಮ ರಾಜಕೀಯ ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡಿದರು. ಇದರಿಂದ ಶರದ್ ಪವಾರ್ ಹಾಗೂ ಮಹಾರಾಷ್ಟ್ರದ ಜನತೆಗೆ ಅನ್ಯಾಯವಾಗಿದೆ. ಪಕ್ಷವನ್ನು ಕಟ್ಟುವ ವಿಶ್ವಾಸವಿದೆ ಎಂದರು.

ಏತನ್ಮಧ್ಯೆ, ತಮ್ಮ ಬಣವನ್ನು ನಿಜವಾದ ಎನ್‌ಸಿಪಿ ಎಂದು ಘೋಷಿಸಿರುವ ಚುನಾವಣಾ ಆಯೋಗದ ತೀರ್ಪನ್ನು 'ವಿನಮ್ರತೆಯಿಂದ ಸ್ವೀಕರಿಸುತ್ತೇನೆ' ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ. ಚುನಾವಣಾ ಆಯೋಗದ ಆದೇಶವು ತಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು. 'ನಾವು ಇಂದು ಮತ್ತು ನಾಳೆ ಮಹಾರಾಷ್ಟ್ರದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ' ಎಂದು ಹೇಳಿದರು.

SCROLL FOR NEXT